• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಸಣ್ಣ-ಪುಟ್ಟ ಕೊಡುಗೆಯು ಇಂತಹ ಮಕ್ಕಳಿಗೆ ಹಸಿವು ಮತ್ತು ಅನಕ್ಷರತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಶ್ಯಾಮ ಎನ್ನುವ 9 ವರ್ಷದ ಹುಡುಗ ಹಣ್ಣಿನ ವ್ಯಾಪಾರಿಯ ಮಗ. ಈತ ಕೇವಲ 5 ತಿಂಗಳ ಕಾಲ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ನಂತರ ಹಣ್ಣಿನ ವ್ಯಾಪಾರ ಮಾಡಲು ಪ್ರಾರಂಭಿಸಿದ. ಅವನ ಕುಟುಂಬದವರು ಋತುಗಳಲ್ಲಿ ದೊರೆಯುವ ಹಣ್ಣುಗಳ ವ್ಯಾಪಾರಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದರು. ಇದೀಗ ಸರ್ಕಾರಿ ಶಾಲೆಗೆ ಹತ್ತಿರದ ಸ್ಥಳದಲ್ಲಿ ವಾಸವಾಗಿದ್ದಾರೆ. ಅದೃಷ್ಟಕ್ಕೆ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಅಲ್ಲಿ ನೀಡುವುದರಿಂದ ಶ್ಯಾಮ ಮತ್ತು ಅವನ ಸಹೋದರಿ ಇಬ್ಬರು ಶಾಲೆಗೆ ಹೋಗುತ್ತಾರೆ. ಅಲ್ಲಿ ದೊರೆಯುವ ಮಧ್ಯಾಹ್ನದ ಊಟವನ್ನು ಸವಿಯುತ್ತಾರೆ.

ಈ ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಬೇಕಿದ್ದರೆ ಇಲ್ಲಿ ದಾನ ಮಾಡಿ

ನಮ್ಮ ಭಾರತ ದೇಶವು ಧರ್ಮ, ಸಂಸ್ಕೃತಿ, ಭಾಷೆ ಹಾಗೂ ಆಚರಣೆಗಳಲ್ಲಿ ವಿವಿಧತೆಯನ್ನು ಹೊಂದಿದೆ. ಆದರೂ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆಯುವ ದೇಶ. ಇದು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದು ಎನ್ನುವ ಹೆಮ್ಮೆಯನ್ನು ಪಡೆದಿದೆ. 2018ನೇ ಸಾಲಿನಲ್ಲಿ ವಿಶ್ವದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ದೇಶವು ಆರ್ಥಿಕತೆಯಲ್ಲಿ ಶೇ.8.2ರಷ್ಟು ಜಿಡಿಪಿ ಬೆಳವಣಿಗೆ ದರವನ್ನು ಹೊಂದುವುದರ ಮೂಲಕ ಚೀನಾವನ್ನು ಮೀರಿಸಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.9ರಷ್ಟು ಹೆಚ್ಚಳವನ್ನು ಪಡೆದುಕೊಂಡಿದೆ.

ಇಂತಹ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರವಾದರೂ, ಇನ್ನೂ ಅನೇಕ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಅಂದರೆ ಭಾರತ ಇನ್ನೂ ಹಸಿವಿನ ವಿರುದ್ಧ ಹೋರಾಡಬೇಕಿದೆ. 25 ವರ್ಷಗಳಿಂದ ಭಾರತವು ಉತ್ತಮ ಪ್ರಗತಿಯನ್ನು ಸಾಧಿಸುತ್ತಾ ಬಂದ ದೇಶವಾದರೂ, ಪಾಕಿಸ್ತಾನವನ್ನು ಹೊರತು ಪಡಿಸಿ ಉಳಿದ ನೆರೆಹೊರೆ ರಾಷ್ಟ್ರಗಳಿಗಿಂತ ಅತಿಹೆಚ್ಚು ಹಸಿವಿನಿಂದ ಬಳಲುವ ಜನರಿದ್ದಾರೆ.

ಹಸಿವನ್ನು ನಿರ್ಮೂಲನೆ ಮಾಡಲು ಹಾಗೂ ಮಕ್ಕಳ ಮೂಲಭೂತ ಪೌಷ್ಠಿಕಾಂಶದ ಅಗತ್ಯಗಳಿಗಾಗಿ 1995ರಲ್ಲಿ "ಮಿಡ್ ಡೇ ಮೀಲ್" ಎನ್ನುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಈ ಯೋಜನೆಯ ಅನ್ವಯದಡಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಇದರಿಂದ ವಿದ್ಯಾರ್ಥಿಗಳು ಆರೋಗ್ಯಕರ ಊಟವನ್ನು ಸವಿಯುವಂತಾಯಿತು. ಯುಎನ್‍ಐಸಿಇಎಫ್ ಪ್ರಕಾರ, ಸರ್ಕಾರ ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಕ್ಕಿಂತ ಈ ಯೋಜನೆಯು ಸುಮಾರು 60 ಮಿಲಿಯನ್ ಮಕ್ಕಳನ್ನು ತಲುಪಲು ಸಾಧ್ಯವಾಯಿತು.

ಅಂಕಿ ಅಂಶದ ಪ್ರಕಾರ...

ಶೇ. 50ರಷ್ಟು ಮಕ್ಕಳು ಆರೋಗ್ಯಕರ ತೂಕವನ್ನು ಪಡೆದುಕೊಳ್ಳುವುದರಲ್ಲಿ ವಂಚಿತರಾಗಿದ್ದಾರೆ.

ಶೇ. 45ರಷ್ಟು ಮಕ್ಕಳು ತಮ್ಮ ವಯಸ್ಸಿಗಿಂತ ತೀರಾ ಕಡಿಮೆ ಬೆಳವಣಿಗೆ (ಕುಂಠಿತ ಬೆಳವಣಿಗೆ) ಹೊಂದಿದ್ದಾರೆ.

ಶೇ. 20ರಷ್ಟು ಮಕ್ಕಳು ತೀರಾ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ. ಇವರು ತಮ್ಮ ಎತ್ತರಕ್ಕೆ ಸರಿಯಾದ ತೂಕ ಇಲ್ಲದೆ ತೆಳ್ಳನೆಯ ದೇಹವನ್ನು ಹೊಂದಿದ್ದಾರೆ.

ಶೇ. 75ರಷ್ಟು ಮಕ್ಕಳಲ್ಲಿ ರಕ್ತ ಹೀನತೆ ಇದೆ.

ಶೇ. 57ರಷ್ಟು ಮಕ್ಕಳು ವಿಟಮಿನ್ ಎ ಕೊರತೆಯಿಂದ ಬಳಲುತ್ತಿದ್ದಾರೆ.

ಮಕ್ಕಳ ಈ ಪರಿ ಆಘಾತಕಾರಿ ಪರಿಸ್ಥಿತಿಗೆ ಹೊಣೆಯಾರು?

ಮನೆಯಲ್ಲಿರುವ ಸದಸ್ಯರಿಗೆ ಸಾಕಷ್ಟು ಆಹಾರವನ್ನು ಒದಗಿಸುವಷ್ಟು ಸಾಮರ್ಥ್ಯವನ್ನು ಪೋಷಕರು ಹೊಂದಿಲ್ಲದಿರುವುದೇ ಅಥವಾ ಸರ್ಕಾರ ಕೈಗೊಂಡ ಯೋಜನೆಗಳು ಯಶಸ್ವಿ ಫಲಿತಾಂಶ ಪಡೆದುಕೊಳ್ಳದೆ ಇರುವುದೇ?

ವಿಶಾಲ ದೇಶ ಹಾಗೂ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಪ್ರತಿಯೊಂದು ಮಗುವಿಗೂ ಸರಿಯಾದ ಗಮನ ನೀಡಲು ಕಷ್ಟ. ಇಸ್ಕಾನ್ ಸಂಸ್ಥೆಯು ಫುಡ್ ರಿಲೀಫ್ ಫೌಂಡೇಶನ್ ಮೂಲಕ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. ಯಾವುದೇ ಲಾಭವನ್ನು ಹೊಂದಿರದೆ ಇದ್ದರೂ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ. ಆಂಧ್ರಪ್ರದೇಶ, ದೆಹಲಿ, ಹರ್ಯಾಣ, ಜಾಖಂಡ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅತಿದೊಡ್ಡ 20 ಅಡುಗೆಕೋಣೆಗಳನ್ನು ಹೊಂದಿದೆ. ಪ್ರತಿದಿನವೂ 1.2 ದಶಲಕ್ಷದಷ್ಟು ಮಕ್ಕಳಿಗೆ ಅನ್ನಾಮೃತವನ್ನು ಒದಗಿಸುತ್ತದೆ.

ಈ ಸಂಸ್ಥೆಯು ಮಕ್ಕಳಿಗೆ ತಾಜಾ ಬಿಸಿ ಊಟವನ್ನು ಒದಗಿಸುತ್ತದೆ. ಮಕ್ಕಳಿಗೆ ಅಗತ್ಯ ಪೋಷಕಾಂಶವನ್ನು ಒದಗಿಸುವ ಊಟವಾಗಿರುವುದಲ್ಲದೆ, ಮಕ್ಕಳಿಗೆ ಶಾಲೆಗೆ ಬರುವಂತೆ ಪ್ರೋತ್ಸಾಹವನ್ನು ನೀಡುತ್ತದೆ. ಕೆಲ ಮಕ್ಕಳಿಗೆ ಮನೆಯಲ್ಲಿ ಹೊತ್ತಿಗೆ ಸರಿಯಾಗಿ ಊಟ ಇರುವುದಿಲ್ಲ, ಕೆಲ ಮಕ್ಕಳಿಗೆ ಮಧ್ಯಾಹ್ನದ ಒಂದು ಊಟವೇ ಆ ದಿನದ ಊಟವಾಗಿರುತ್ತದೆ.

ಅನ್ನಾಮೃತದ ಪರಿಣಾಮ

2004ರಿಂದ "ಅನ್ನಾಮೃತ" ದೇಶದಾದ್ಯಂತ ಮಧ್ಯಾಹ್ನದ ಊಟವನ್ನು ಒದಗಿಸುತ್ತಾ ಬರುತ್ತಿದೆ. ಅಲ್ಲದೆ ಉತ್ತಮ ಫಲಿತಾಂಶವನ್ನು ಪ್ರೋತ್ಸಾಹಿಸುತ್ತಿದೆ. ಅನ್ನಾಮೃತ ಸೇವಿಸುವ ಮಕ್ಕಳು ಶಾಲಾ ಪರೀಕ್ಷೆಗಳಲ್ಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರ ಹಾಜರಾತಿಯು ಉತ್ತಮವಾಗಿದೆ. ಅಲ್ಲದೆ ಹೆಚ್ಚುವರಿ ಅಧ್ಯಯನ ಮುಂದುವರಿಸಲು ಅವರಿಗೆ ಹೆಚ್ಚಿನ ಉತ್ಸಾಹ ನೀಡುತ್ತಿದೆ.

ಸಂಸ್ಥೆಯ ಧರ್ಮದರ್ಶಿಗಳಾದ ಗೋಪಾಲ ಕೃಷ್ಣ ಗೋಸ್ವಾಮಿ ಅವರು ಹೇಳುವ ಪ್ರಕಾರ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

"ಅನ್ನಾಮೃತ" ಎನ್ನುವ ಶಬ್ದದ ಅರ್ಥವು ಮಕರಂದ, ಶುದ್ಧ ಆಹಾರ ಎನ್ನುವ ಅರ್ಥವನ್ನು ನೀಡುತ್ತದೆ. ಇಸ್ಕಾನ್ ಫುಡ್ ರಿಲೀಫ್ ಫೌಂಡೇಷನ್ ಮಕ್ಕಳಿಗೆ ತಾಯಿ ತಯಾರಿಸುವ ಪೌಷ್ಟಿಕಾಂಶ ಪೂರ್ಣ ಆಹಾರವನ್ನೇ ನೀಡುತ್ತದೆ. ಮಕ್ಕಳಿಗೆ ಸಾತ್ವಿಕ ಆಹಾರ ನೀಡುವುದರ ಮೂಲಕ ಮಕ್ಕಳಿಗೆ ಸಹಾಯ ಮತ್ತು ಸರಿಯಾದ ಪೋಷಣೆ ನೀಡುವ ಆರೋಗ್ಯಕರ ಆಹಾರದ ಖಾತ್ರಿಯನ್ನು ನೀಡುವುದು.

ಪ್ರಸ್ತುತ ಈ ಯೋಜನೆಗಳಿಂದ ಅನೇಕ ಮಕ್ಕಳು ಲಾಭ ಪಡೆಯುತ್ತಿದ್ದರೂ, ಇನ್ನೂ ಅನೇಕ ಮಕ್ಕಳಿಗೆ ತಲುಪುವ ಹಾಗೂ ಸೇವೆ ನೀಡುವ ಗುರಿ ಹಾಗೂ ಕಾಳಜಿಯನ್ನು ಸಂಸ್ಥೆ ಹೊಂದಿದೆ. ಇಂತಹ ಒಂದು ಸದುದ್ದೇಶಕ್ಕಾಗಿ ಹಾಗೂ ಹೆಚ್ಚಿನ ಮಕ್ಕಳಿಗೆ ಸಹಾಯ ಮಾಡಲು ನಿಮ್ಮ ಸಹಾಯ ಅಗತ್ಯವಿದೆ. ನೀವು ಮಾಡುವ ಚಿಕ್ಕ ಸಹಾಯ ಹಾಗೂ ಕೊಡುಗೆಗಳು ಅನೇಕ ಮಕ್ಕಳ ಹಸಿವನ್ನು ನೀಗಿಸುವುದು. ಜೊತೆಗೆ ಮಕ್ಕಳ ಭವಿಷ್ಯವು ಅರಳುವುದು. ನೀವು ದಾನ ಮಾಡಲು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X