Rain Alert: ಚಳಿ ಬಿಸಿಲಿನಾಟದಲ್ಲಿ ಮಳೆಯೂ ಸೇರ್ಪಡೆ: ನಾಳೆಯಿಂದ ಮುಂದಿನ 3 ದಿನ ಈ ಭಾಗದಲ್ಲಿ ಭಾರೀ ಮಳೆ
ದೆಹಲಿ ಜನವರಿ 25: ದೇಶದಲ್ಲಿ ಚಳಿ ಬಿಸಿಲಿನಾಟ ಮುಂದುವರೆದಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಹೆಚ್ಚು ಬಿಸಿಲು ನೆತ್ತಿ ಸುಡಲು ಆರಂಭಿಸಿದರೆ ಸೂರ್ಯ ಮುಳುಗುತ್ತಿದ್ದಂತೆ ಮೈ ಕೊರೆಯುವ ಚಳಿ ಒಂದೆಡೆ ಬೆಚ್ಚಗೆ ಮಲಗುವಂತೆ ಮಾಡುತ್ತದೆ. ಸದ್ಯ ಇದರೊಂದಿಗೆ ಮಳೆರಾಯನೂ ಸೇರಿಕೊಳ್ಳಲಿದ್ದಾನೆ.
ಹೌದು.. ಚಳಿ ಬಿಸಿಲಿನಾಟದಲ್ಲಿ ಮಳೆಯೂ ಸೇರ್ಪಡೆಗೊಳ್ಳಲಿದೆ. ನಾಳೆಯಿಂದ ಮುಂದಿನ 3 ದಿನ ದೇಶದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆಯನ್ನು ನೀಡಿದೆ. ಉತ್ತರ ಭಾರದ ಸೇರಿದಂತೆ ದೇಶದ ಹಲವೆಡೆ ಅಧಿಕ ಚಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲು ಕಂಡರೂ ಮೈ ಸೂಕುತ್ತಿಲ್ಲ. ಹೀಗಾಗಿ ಮನೆಯಿಂದ ಹೊರಬರುವಾಗ ಸ್ವಟರ್, ಕ್ಯಾಪ್ ಹಾಗೂ ಬೆಚ್ಚಗಿನ ಬಟ್ಟೆಗಳನ್ನು ಜನ ಧರಿಸುತ್ತಿದ್ದಾರೆ.

ಇನ್ನೂ ಹಲವೆಡೆ ಮಳೆಯ ಅರ್ಭಟ ಜೋರಾಗಿದೆ. ದಕ್ಷಿಣ ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಒಡಿಶಾದ ಕೆಲವು ಭಾಗಗಳು ಮತ್ತು ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜನವರಿ 26 ರಿಂದ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು ಜನವರಿ 26 ಮತ್ತು 28 ರ ನಡುವೆ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಸ್ಕೈಮೆಟ್ ಹವಾಮಾನ ವರದಿ ತಿಳಿಸಿದೆ.

ಮುಂದಿನ ಮೂರು ದಿನಗಳಲ್ಲಿ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ತೆಲಂಗಾಣ, ಮತ್ತು ಸಿಕ್ಕಿಂನಲ್ಲಿ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ದೇಶದಲ್ಲಿ ಹೆಚ್ಚು ಚಳಿ ಕಾಣಿಸಿಕೊಂಡಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳು ದಟ್ಟವಾದ ಮಂಜಿನೊಂದಿಗೆ ವಿಪರೀತ ಚಳಿಯನ್ನು ಈ ಬಾರಿ ಅನುಭವಿಸಿವೆ. ಜನವರಿ 25 ರಿಂದ 28 ರವರೆಗೆ ಹಿಮಾಲಯದ ಪಕ್ಕದ ಪ್ರದೇಶಗಳಲ್ಲಿ ಲಘು ಹಿಮಪಾತ ಮತ್ತು ಮಳೆಯಾಗಬಹುದು ಎನ್ನಲಾಗಿದೆ.
ಚಂಡೀಗಢ, ಪಂಜಾಬ್, ಹರಿಯಾಣ, ದೆಹಲಿಯ ವಿವಿಧ ಸ್ಥಳ, ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜನವರಿ 28 ರ ಬೆಳಿಗ್ಗೆಯವರೆಗೆ ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ಹಂಚಿಕೊಂಡಿದೆ. ಇನ್ನೂ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಪಂಜಾಬ್ ನ ಹಲವೆಡೆ ದಟ್ಟ ಮಂಜು ವಾತಾವರಣ ಇರಲಿದೆ. ಉತ್ತರಾಖಂಡ, ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ಮಣಿಪುರ, ಪಶ್ಚಿಮ ಬಂಗಾಳ, ಉತ್ತರ ಮಧ್ಯಪ್ರದೇಶ, ಹಿಮಾಚಲ ಪ್ರದೇಶದ ಹಲವೆಡೆ ಮಂಜು ಕವಿದ ವಾತಾವರಣ ಇರಲಿದೆ.












Click it and Unblock the Notifications