
ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ಡಿ.8 ರವರೆಗೆ ಭಾರಿ ಮಳೆ- ಐಎಂಡಿ ಎಚ್ಚರಿಕೆ
ದಕ್ಷಿಣ ಭಾರತದಲ್ಲಿ ಮಳೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಸೈಕ್ಲೋನಿಕ್ ರೂಪುಗೊಂಡಿದೆ. ಇದು ಹವಾಮಾನಶಾಸ್ತ್ರಜ್ಞರನ್ನು ಸಹ ಆಶ್ಚರ್ಯಗೊಳಿಸಿದೆ. ದಕ್ಷಿಣ ಅಂಡಮಾನ್‌ನಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಂಪೂರ್ಣ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಚಂಡಮಾರುತದಿಂದಾಗಿ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಡಿಸೆಂಬರ್ 8 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಇಲಾಖೆ ಪ್ರಕಾರ, ಡಿಸೆಂಬರ್ 7 ರಿಂದ ಪುದುಚೇರಿ, ಕಾರೈಕಲ್ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಮಳೆ ಪ್ರಾರಂಭವಾಗಲಿದ್ದು, ಡಿಸೆಂಬರ್ 8 ರವರೆಗೆ ಮೀನುಗಾರರು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಕ್ಕೆ ಹೋಗುವುದನ್ನು ತಡೆಯಲಾಗಿದೆ.
ಲಘು ಮಳೆ ಮತ್ತು ಹಿಮಪಾತದ ನಿರೀಕ್ಷೆ
ದಕ್ಷಿಣದ ಸ್ಥಿತಿ ಹೀಗಿದ್ದರೆ, ಮತ್ತೊಂದೆಡೆ ಮಲೆನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪಾದರಸ ಕುಸಿಯಲಿದ್ದು, ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬರುವ ಎರಡು-ಮೂರು ದಿನಗಳಲ್ಲಿ ಪಾದರಸದಲ್ಲಿ ತೀವ್ರ ಕುಸಿತ ಉಂಟಾಗಬಹುದು ಎಂದು ಐಎಂಡಿ ಹೇಳಿದೆ. ಈಗ ಬಿಹಾರ, ಯುಪಿ, ಎಂಪಿ ಮತ್ತು ಛತ್ತೀಸ್‌ಗಢದಲ್ಲಿ ಚಳಿ ಹೆಚ್ಚಾಗಲಿದ್ದು, ಕೆಲವೆಡೆ ಚಳಿಯ ಅಲೆ ಮತ್ತು ಮಂಜು ಕೂಡ ಕಾಣಿಸಿಕೊಂಡಿದೆ.
ಮುನ್ಸೂಚನೆಯ ಪ್ರಕಾರ, ಮುಂದಿನ 24 ಗಂಟೆಗಳ ಅವಧಿಯಲ್ಲಿ, ದೆಹಲಿಯ ಮಾಲಿನ್ಯ ಕಡಿಮೆಯಾಗುವುದಿಲ್ಲ ಮತ್ತು ಹವಾಮಾನವು ಶುಷ್ಕವಾಗಿರುತ್ತದೆ, ಆದರೆ ಕನಿಷ್ಠ ತಾಪಮಾನ 8 ಡಿಗ್ರಿ ಮತ್ತು ಗರಿಷ್ಠ ತಾಪಮಾನವು 25 ಡಿಗ್ರಿಗಳಷ್ಟು ಇರುತ್ತದೆ.

ಹವಾಮಾನ ಇಲಾಖೆಯ ಮುಖ್ಯಸ್ಥ (ಐಎಂಡಿ) ಮೃತ್ಯುಂಜಯ್ ಮೊಹಾಪಾತ್ರ ಅವರು ಇತ್ತೀಚೆಗೆ ವಾಯುವ್ಯದಲ್ಲಿ ವೆಸ್ಟರ್ನ್ ಡಿಸ್ಟರ್ಬನ್ಸ್ ಸಕ್ರಿಯವಾಗಿರುವ ಕಾರಣ ಹೆಚ್ಚು ಚಳಿ ಈ ಭಾಗಗಳಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಚಳಿಗಾಲದಲ್ಲಿ ಸರಾಸರಿ ಇರುವಷ್ಟು ಚಳಿ ಇರುತ್ತದೆ. ಭಾರತದಲ್ಲಿ ಚಳಿಗಾಲವನ್ನು ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ತಿಂಗಳುಗಳಲ್ಲಿ ಮಾತ್ರ ತಂಪಾಗಿರುತ್ತದೆ ಮತ್ತು ತಾಪಮಾನದ ಏರಿಳಿತಗಳು ಪ್ರತಿದಿನವೂ ಇರುತ್ತದೆ ಎಂದರು.