ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಭಾರಿ ಮಳೆ: ಮೈಲಾದುತುರೈ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ

|
Google Oneindia Kannada News

ಚೆನ್ನೈ, ನವೆಂಬರ್‌ 14: ತಮಿಳುನಾಡು ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಮೈಲಾದುತುರೈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಳೆ ಪೀಡಿತ ಮತ್ತು ಜಲಾವೃತ ಪ್ರದೇಶಗಳನ್ನು ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಜಲಾವೃತ ಪ್ರದೇಶಗಳಲ್ಲಿ ನೀರಿನ ಒಳಚರಂಡಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ ಆದರೆ ಯಾವುದೇ ಅಪಾಯವಿಲ್ಲ ಎಂದು ಅವರು ತಿಳಿಸಿದರು.

ಮುಂದುವರಿದ ವರುಣನ ಅಬ್ಬರ: ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ರೆಡ್ ಅಲರ್ಟ್ಮುಂದುವರಿದ ವರುಣನ ಅಬ್ಬರ: ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ರೆಡ್ ಅಲರ್ಟ್

ಎಂ.ಕೆ.ಸ್ಟಾಲಿನ್ ಅವರು ರಾಜ್ಯದ ನಾಗಪಟ್ಟಣಂ ಜಿಲ್ಲೆಯ ಸೀರ್ಕಾಜಿ ಪ್ರದೇಶಕ್ಕೆ ಭೇಟಿ ನೀಡಿ ಮಳೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿದರು. ಇಂದು ರಾತ್ರಿ ನಾನು ಸೀರ್ಕಾಳಿ ಮತ್ತು ಮೈಲಾದುತುರೈ ಮತ್ತು ಕಡಲೂರು ಪ್ರದೇಶಗಳಿಗೆ ತಪಾಸಣೆ ಮಾಡಲು ಹೋಗುತ್ತಿದ್ದೇನೆ ಎಂದು ಅವರು ಹೇಳಿದರು.

Heavy rains in Tamil Nadu: Holidays for Myladuthurai district schools and colleges

ಇದಕ್ಕೂ ಮುನ್ನ ನವೆಂಬರ್ 11 ರಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಮಳೆಯ ಮುನ್ಸೂಚನೆ ಪ್ರಕಾರ ತಿರುವಳ್ಳೂರು, ಶಿವಗಂಗಾ, ಮಧುರೈ, ಕಾಂಚೀಪುರಂ ಮತ್ತು ದಿಂಡಿಗಲ್‌ನಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ನಾಳೆಯ ಮಳೆಯ ಮುನ್ಸೂಚನೆಯ ಆಧಾರದ ಮೇಲೆ ತಿರುವಳ್ಳೂರು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಮುಂದುವರೆದ ಮಳೆ: ರಸ್ತೆಗಳು ಜಲಾವೃತ, 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆತಮಿಳುನಾಡಿನಲ್ಲಿ ಮುಂದುವರೆದ ಮಳೆ: ರಸ್ತೆಗಳು ಜಲಾವೃತ, 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಮಳೆಯ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಕಾಂಚೀಪುರಂ ಮತ್ತು ಮಧುರೈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿವೆ. ಅಲ್ಲದೆ ಶಿವಗಂಗಾ ಜಿಲ್ಲೆ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ ಸಂಸ್ಥೆಗಳು ತಿಳಿಸಿವೆ. ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಾಯು ಪ್ರದೇಶದಲ್ಲಿ ಚಂಡಮಾರುತದ ಪರಿಚಲನೆಯೊಂದಿಗೆ ಮುಂದಿನ 24 ಗಂಟೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಭಾರಿ ಮಳೆ ಮುನ್ಸೂಚನೆ:
ಶ್ರೀಲಂಕಾ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಮಧ್ಯ ಉಷ್ಣಗೋಳದ ಮಟ್ಟಗಳವರೆಗೆ ವಿಸ್ತರಿಸಿರುವುದರಿಂದ ಚಂಡಮಾರುತದ ಚಲನೆಯು ಮುಂದುವರಿಯುತ್ತದೆ. ಮುಂದಿನ 24 ಗಂಟೆಗಳಲ್ಲಿ ಇದು ಹೆಚ್ಚು ಮಳೆ ತರುವ ಸಾಧ್ಯತೆಯಿದೆ ಎಂದು ಐಎಂಡಿ ಟ್ವೀಟ್‌ನಲ್ಲಿ ತಿಳಿಸಿದೆ.

Heavy rains in Tamil Nadu: Holidays for Myladuthurai district schools and colleges

ನವೆಂಬರ್ 12 ರ ಬೆಳಗ್ಗೆ ವರೆಗೆ ಇದು ವಾಯುವ್ಯ ದಿಕ್ಕಿನಲ್ಲಿ ತಮಿಳುನಾಡು ಪುದುಚೇರಿ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನಾ ಸಂಸ್ಥೆ ತಿಳಿಸಿದೆ. ನವೆಂಬರ್ 12 ಮತ್ತು 13ರಂದು ಕೂಡ ತಮಿಳುನಾಡು-ಪುದುಚೇರಿ ಮತ್ತು ಕೇರಳದಾದ್ಯಂತ ಪಶ್ಚಿಮ, ವಾಯುವ್ಯ, ಪಶ್ಚಿಮಾಭಿಮುಖವಾಗಿ ಇದು ಚಲಿಸುತ್ತದೆ ಎಂದು ಐಎಂಡಿ ಹೇಳಿದೆ.

ಪುದುಚೇರಿಯಲ್ಲಿ ನವೆಂಬರ್ 11 ಮತ್ತು ನವೆಂಬರ್ 12 ರಂದು ಭಾರೀ ಮಳೆಯಿಂದ ಜಲಾವೃತವಾದ ಪರಿಣಾಮ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಘೋಷಿಸಲಾಗಿದೆ. ತಮಿಳುನಾಡಿನ ತಿರುಚ್ಚಿ, ತಂಜಾವೂರು, ತಿರುವರೂರು, ಮೈಲಾದುತುರೈ, ಕರೂರ್, ಪುದುಕೊಟ್ಟೈ, ಪೆರಂಬಲೂರು, ಮತ್ತು ಅರಿಯಲೂರು ಜಿಲ್ಲೆಗಳಲ್ಲಿಯೂ ಸಹ ಶಾಲೆಗಳಿಗೆ ರಜೆ ಘೋಷಿಸಲಾಯಿತು. ಇದಕ್ಕೂ ಮೊದಲು ಚೆನ್ನೈನ ತಿರುವಳ್ಳೂರು, ಮಧುರೈ, ಶಿವಗಂಗಾ ಮತ್ತು ಕಾಂಚೀಪುರಂನ ಕೆಲವು ಭಾಗಗಳನ್ನು ಮುಚ್ಚುವಂತೆ ತಿಳಿಸಲಾಗಿತ್ತು. ನವೆಂಬರ್ 13ರಂದು ಕಡಲೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

English summary
In view of the continuous rains in the state of Tamil Nadu, a holiday has been declared for the schools and colleges of Myladuthurai district here, said the District Collector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X