ಭಾರತದಲ್ಲಿ ಭಾರಿ ಮಳೆ: ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್, ದೆಹಲಿ ಸ್ಥಿತಿ ಹೇಗಿದೆ?
ನವದೆಹಲಿ, ಸೆಪ್ಟೆಂಬರ್ 14: ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ನವೀಕರಣದಲ್ಲಿ ಇಂದು ಕೂಡ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಅದರ ಪ್ರಕಾರ ಇಂದು ದೆಹಲಿ, ಜಾರ್ಖಂಡ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಾಖಂಡ, ಯುಪಿ, ಎಂಪಿ ಮತ್ತು ಮಹಾರಾಷ್ಟ್ರದಲ್ಲಿ ಅಧಿಕ ಮಳೆಯೊಂದಿಗೆ ಲಘು ಮಳೆಯಾಗಬಹುದು ಎಂದಿದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳುವಂತೆ ಐಎಂಡಿ ಕೋರಿದೆ.
ಉತ್ತರಾಖಂಡದಲ್ಲಿ ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 16 ರವರೆಗೆ ಧಾರಾಕಾರ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಸೆಪ್ಟೆಂಬರ್ 17-18 ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಯುಪಿಯ ಸುಮಾರು ಮೂವತ್ತು ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗಲಿದೆ. ಈ ಮೂವತ್ತು ಜಿಲ್ಲೆಗಳಲ್ಲೂ ಅಲರ್ಟ್ ಮುಂದುವರೆದಿದೆ. ಮತ್ತೊಂದೆಡೆ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೂಚನೆ ನೀಡಿದೆ. ಇಲ್ಲಿ ಈಗಾಗಲೇ ಹಲವು ಜಿಲ್ಲೆಗಳು ಜಲಾವೃತವಾಗಿವೆ.

ಹಲವು ಪ್ರದೇಶಗಳು ಜಲಾವೃತ
ಮಹಾರಾಷ್ಟ್ರದಲ್ಲಿ ನಿನ್ನೆ ರಾತ್ರಿಯಿಂದ ಮಳೆಯಾಗುತ್ತಿದೆ. ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳ ಪ್ರದೇಶಗಳು ಜಲಾವೃತವಾಗಿದೆ. ಗಮನಾರ್ಹ ಸಂಗತಿಯೆಂದರೆ, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಐದು ದಿನಗಳ ಎಚ್ಚರಿಕೆಯನ್ನು ನೀಡಿತ್ತು. ಇಲ್ಲಿ ಔರಂಗಾಬಾದ್ ಮತ್ತು ನಾಸಿಕ್‌ನಲ್ಲಿ ಈಗಾಗಲೇ ಭಾರೀ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ.

ದೆಹಲಿಯ ಸ್ಥಿತಿ ಹೇಗಿದೆ?
ಆದರೆ ದೇಶದ ರಾಜಧಾನಿ ದೆಹಲಿಯ ಬಗ್ಗೆ ಮಾತನಾಡಿದರೆ, ಇಂದು ಇಲ್ಲಿ ಸ್ವಲ್ಪ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆದರೆ ಇಲ್ಲಿ ಗರಿಷ್ಠ ತಾಪಮಾನವು ಸುಮಾರು 34 ಡಿಗ್ರಿ ಮತ್ತು ಕನಿಷ್ಠ ತಾಪಮಾನವು 25 ಡಿಗ್ರಿಗಳಷ್ಟು ಇರಬಹುದು. ಬೇಸೆಗೆಯಲ್ಲಿ ಅಧಿಕ ಬಿಸಿಲು, ವಾಯು ಮಾಲಿನ್ಯದಿಂದಾಗಿ ದೆಹಲಿಯ ಪರಿಸರ ಹಾಳಾಗಿ ಹೋಗಿದೆ. ವರುಣ ಕೃಪೆಯಿಂದ ಮಳೆಯಾದರೂ ಉತ್ತಮವಾಗುತ್ತೆ ಎಂದು ಭಾವಿಸಿದ್ದ ರಾಷ್ಟ್ರ ರಾಜಧಾನಿ ಮಂದಿಗೆ ನಿರಾಸೆಯಾಗಿದೆ. ಈ ಬಾರಿ ನಿರೀಕ್ಷೆಯಂತೆ ದೆಹಲಿ ಮಳೆಯನ್ನು ಕಂಡಿಲ್ಲ.
|
ಮಹಾರಾಷ್ಟ್ರ,ಯುಪಿ, ಕೇರಳದಲ್ಲಿ ಮಳೆ
ಖಾಸಗಿ ಹವಾಮಾನ ಮಾಹಿತಿ ಸಂಸ್ಥೆ ಸ್ಕೈಮೆಟ್ ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಕೇರಳ, ತಮಿಳುನಾಡು, ರಾಯಲಸೀಮಾ, ತೆಲಂಗಾಣ, ಛತ್ತೀಸ್‌ಗಢ, ಉತ್ತರಾಖಂಡ, ಅಸ್ಸಾಂ, ಸಿಕ್ಕಿಂನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಹೊರಗೆ ಹೋಗುವ ಮೊದಲು, ಒಮ್ಮೆ ನೀವು ಹವಾಮಾನದ ಸ್ಥಿತಿಯನ್ನು ತಿಳಿದುಕೊಳ್ಳುವುದು ಉತ್ತಮ.

ಬೆಂಗಳೂರಿಗೆ ತಟ್ಟಿದ ಚಳಿ
ನಿರಂತರ ಮಳೆಗೆ ತತ್ತರಿಸಿದ ಬೆಂಗಳೂರು ಸದ್ಯ ಕೊಂಚ ಚೇತರಿಸಿಕೊಳ್ಳುತ್ತಿದೆ. ಆದರೂ ಕರ್ನಾಟಕದ ಹಲವೆಡೆ ವರುಣನ ಅರ್ಭಟ ಕಡಿಮೆಯಾಗಿಲ್ಲ. ಚಿಕ್ಕಮಗಳೂರು, ಮಡಿಕೇರಿ, ಸಕಲೇಶಪುರಗಳಲ್ಲಿ ಇಂದಿಗೂ ಎಡಬಿಡದೆ ಮಳೆ ಸುರಿಯುತ್ತಿದೆ. ಇದರ ನಡುವೆ ಸಂಜೆಯಾಗುತ್ತಿದ್ದಂತೆ ಚಳಿ ಆವರಿಸಿಕೊಳ್ಳುತ್ತಿದೆ. ಮಳೆಯ ಕಡಿಮೆಯಾಗುತ್ತಿದ್ದಂತೆ ಚಳಿಗಾಲದ ಮೂನ್ಸೂಚನೆ ಈಗಾಗಲೇ ಶುರುವಾಗಿದೆ.












Click it and Unblock the Notifications