ಧಾರಾಕಾರ ಮಳೆಗೆ ಗುಜರಾತ್ ನಲ್ಲಿ ಜಲಪ್ರಳಯ
ನವದೆಹಲಿ, ಜೂ. 25: ಮುಂಗಾರು ಮಾರುತಗಳ ಆರ್ಭಟ ದೇಶಾದ್ಯಂತ ಜೋರಾಗಿದೆ. ಮುಂಬೈ, ದೆಹಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಬ್ಬರಿಸಿದ್ದ ವರುಣ ಈಗ ಗುಜರಾತ್ ನಲ್ಲಿ ತನ್ನಪ್ರತಾಪ ತೋರಿಸುತ್ತಿದ್ದಾನೆ.
ಗುಜರಾತ್ ನಲ್ಲಿ ಬೀಳುತ್ತಿರುವ ಧಾರಾಕಾರ ಮಳೆ 40 ಜೀವಗಳನ್ನು ಬಲಿ ಪಡೆದುಕೊಂಡಿದೆ. ರಾಜ್ ಕೋಟ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಾಯುಭಾರ ಕುಸಿತದಿಂದ ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ.[ಕರ್ನಾಟಕದಲ್ಲಿ ಮಳೆ ಮಾಡಿದ ಹಾನಿ ಚಿತ್ರಗಳು]
ಉಳಿದಂತೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.(ಪಿಟಿಐ ಚಿತ್ರಗಳು)

ದಾರಿ ಯಾವುದಯ್ಯಾ?
ಮಳೆ ಹೊಡೆತಕ್ಕೆ ಸಿಕ್ಕಿರುವ ಗುಜರಾತ್ ನ ಅಮ್ರೇಲಿ ಜಿಲ್ಲೆಯ ಜನರನ್ನು ಭಾರತೀಯ ಸೈನಿಕರು ರಕ್ಷಣೆ ಮಾಡಿದ್ದಾರೆ. ಇನ್ನು ಹಲವರು ರಕ್ಷಣೆಗಾಗಿ ಸಹಾಯಕ್ಕಾಗಿ ಕಾದು ನಿಂತಿದ್ದಾರೆ.

ಮುಳುಗಿದ ಮನೆ, ಹೊಲ
ಧಾರಾಕಾರ ಮಳೆಗೆ ಹೊಲ ಗದ್ದೆ, ಮನೆಗಳು ಜಲಾವೃತವಾಗಿದ್ದು ಸುರಕ್ಷಿತ ತಾಣಕ್ಕೆ ಕರೆದೊಯ್ಯಲು ಆಗಮಿಸುತ್ತಿರುವ ಹೆಲಿಕಾಪ್ಟರ್ ಗೆ ಮನೆ ಮೇಲೇರಿ ಕಾದು ಕುಳಿತ ಜನರು.

ಭರದಿಂದ ಸಾಗಿರುವ ರಕ್ಷಣಾ ಕಾರ್ಯ
ಭಾರೀ ಮಳೆ ಗುಜರಾತ್ ನ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದ್ದು ವಿಮಾನ ಮತ್ತು ಹೆಲಿಕಾಪ್ಟರ್ ನೆರವಿನಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಅತ್ತ ಅಸ್ಸಾಂನ 25 ಜಿಲ್ಲೆಗಳ ಸುಮಾರು 22 ಸಾವಿರ ಮಂದಿ ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

ರಾಜಸ್ಥಾನಕ್ಕೂ ಎಫೆಕ್ಟ್
ರಾಜಸ್ಥಾನಕ್ಕೆ ಮುಂಗಾರು ಪ್ರವೇಶ ಮಾಡಿದ್ದು ಅಕ್ಕ ಪಕ್ಕದ ರಾಜ್ಯಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಉತ್ತರ ಭಾರತದ ಒಂದೊಂದೇ ರಾಜ್ಯಗಳು ವರುಣನ ಆರ್ಭಟಕ್ಕೆ ಸಿಕ್ಕಿ ನಲುಗುತ್ತಿವೆ.

ಎಲ್ಲಿಗೆ ಪಯಣ? ಯಾವುದು ದಾರಿ?
ಧಾರಾಕಾರ ಮಳೆಗೆ ತುತ್ತಿನ ಚೀಲ ತುಂಬುತ್ತಿದ್ದ ಸೈಕಲ್ ರಿಕ್ಷಾವನ್ನು ನಡೆಸಲು ಸಾಧ್ಯವಾಗದಂತೆ ಮಾಡಿದೆ. ಸುರಿಯುತ್ತಿರುವ ಮಳೆ ನಿತ್ಯದ ಬದುಕಿಗೂ ಅಡ್ಡಗಾಲಾಗಿ ಪರಿಣಮಿಸಿದೆ.

ಹೋಗುವುದಾದರೂ ಎಲ್ಲಿಗೆ
ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಸೈನ್ಯ ಸೇರಿದಂತೆ ಸ್ವಯಂ ಸೇವಕರು ನೆರವಿಗೆ ಧಾವಿಸಿದ್ದಾರೆ.

ಮಳೆಯಲ್ಲೇ ಬೈಕ್ ಸವಾರಿ
ಧಾರಾಕಾರ ಮಳೆಯ ನಡುವೆಯೇ ಮನೆ ಸೇರಲು ಹೊರಟ ಯುವಕನೊಬ್ಬ ಸೈನ್ಯದ ಹೆಲಿಕಾಪ್ಟರ್ ಕಣ್ಣಿಗೆ ಬಿದ್ದದ್ದು ಹೀಗೆ.












Click it and Unblock the Notifications