Breaking: ಪುಣೆಯಲ್ಲಿ ನಾಲ್ವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ
ಪುಣೆ, ಆಗಸ್ಟ್ 24: ಭಾರೀ ಮಳೆಯ ಕಾರಣ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಪುಣೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿಯಂತೆ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ಸಂಚಾರವನ್ನು ನಡೆಸುತ್ತಿತ್ತು.
ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು ಪುಣೆ ಜಿಲ್ಲೆಯ ಪೌಡ್ ಎಂಬ ಗ್ರಾಮದ ಜಮೀನಿನಲ್ಲಿ ಬಿದ್ದಿದೆ. ಹೆಲಿಕಾಪ್ಟರ್‌ನಲ್ಲಿ ನಾಲ್ವರು ಇದ್ದರು. ಕ್ಯಾಪ್ಟನ್‌ಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪುಣೆ ಗ್ರಾಮಾಂತರ ಎಸ್ಪಿ ಪಂಜಕ್ ದೇಶ್‌ಮುಖ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಖಾಸಗಿ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದೆ. ಮುಂಬೈನಿಂದ ಹೈದರಾಬಾದ್‌ಗೆ ಹಾರಾಟ ನಡೆಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹೆಲಿಕಾಪ್ಟರ್ ಪತನಗೊಂಡು ಜಖಂಗೊಂಡಿರುವ ಚಿತ್ರಗಳನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗ್ಲೋಬಲ್ ವಿಕ್ಟರಾ ಹೆಲಿಕ್ರಾಪ್ ಎಂಬ ಸಂಸ್ಥೆಗೆ ಹೆಲಿಕಾಪ್ಟರ್ ಸೇರಿದೆ.
ಪತನಗೊಂಡಿರುವ ಹೆಲಿಕಾಪ್ಟರ್ AW 139 ಮುಂಬೈನ ಜುಹುನಿಂದ ಹೈದರಾಬಾದ್‌ಗೆ ಹೊರಟಿತ್ತು. ಆದರೆ ಮೋಡ ಕವಿದ ವಾತಾವರಣ ಮತ್ತು ಭಾರೀ ಗಾಳಿಯ ಕಾರಣದಿಂದಾಗಿ ಪತನಗೊಂಡಿದೆ. ಕ್ಯಾಷ್ಟನ್ ಆನಂದ್ ಗಾಯಗೊಂಡಿದ್ದು ಸದ್ಘರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಶನಿವಾರ ಪುಣೆ, ಸತಾರಾ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿತ್ತು. ಆರೆಂಜ್ ಅಲರ್ಟ್ ಘೋಷಣೆ ಮಾಡಿತ್ತು. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಗಳ ಕಾಲ ಹೆಚ್ಚಿನ ಮಳೆಯ ಮುನ್ಸೂಚನೆ ಕೊಡಲಾಗಿದೆ.
ಇದೇ ವರ್ಷದ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಶಿವಸೇನೆಯ ನಾಯಕಿ ಸುಷ್ಮಾ ಅಂಧಾರೆ ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ತೊಂದರೆ ಕಾಣಿಸಿಕೊಂಡು ವಾಲಿತ್ತು. ಲೋಕಸಭೆ ಚುನಾವಣೆ ಪ್ರಚಾರದ ಸಮಾವೇಶಕ್ಕೆ ಹೆಲಿಕಾಪ್ಟರ್‌ನಲ್ಲಿ ಅವರು ಸಾಗುತ್ತಿದ್ದರು. ಘಟನೆಯಲ್ಲಿ ಪೈಲೆಟ್ ಗಾಯಗೊಂಡಿದ್ದರು.












Click it and Unblock the Notifications