Rain News: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ!
ಈ ಮಳೆ ಅನ್ನೋದೆ ಹೀಗೆ, ಬಾ ಮಳೆಯೆ ಬಾ ಅಂತಾ ಜನರು ಕರೆದಾಗ ಬರೋದೆ ಇಲ್ಲ. ಆದರೆ ಬರಬೇಡಪ್ಪ ಮಳೆರಾಯ ಅಂದಾಗ, ವರುಣ ದೇವ ಬೇಕು ಅಂತಲೇ ತನ್ನ ಕೋಪ ತೋರಿಸಿ ಭೂಮಿಯ ಮೇಲೆ ವಿನಾಶ ಸೃಷ್ಟಿ ಮಾಡಿಬಿಡುತ್ತಾನೆ. ಇದೇ ರೀತಿ ಮುಂಗಾರಿನ ವೇಳೆ ಮಳೆಯೇ ಬರದೆ, ರೈತರ ಹೊಟ್ಟೆ ಮೇಲೆ ಹೊಡೆದಿದ್ದಾನೆ ಮಳೆರಾಯ. ಆದ್ರೆ ಈಗ ಹಿಂಗಾರು ಮಳೆ ಆರ್ಭಟಕ್ಕೆ ಮತ್ತೆ ರೈತರು ಬೆಚ್ಚಿಬಿದ್ದಿದ್ದಾರೆ.
ಹೌದು ಚಂಡಮಾರುತ.. ಆ ಮಾರುತ.. ಈ ಮಾರುತ.. ಅಂದುಕೊಂಡು ವಿಪರೀತವಾಗಿ ಮಳೆ ಬೀಳುತ್ತಿದೆ ದಕ್ಷಿಣ ಭಾರತದಲ್ಲಿ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡು, ಕೇರಳ ಹಾಗೂ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಇಂತಹ ಪರಿಸ್ಥಿತಿ ಎದುರಾಗಿರುವ ಸಮಯದಲ್ಲೇ, ನಿಲ್ಲಿಸೋ ಮಳೆ ನಿನ್ನ ಆರ್ಭಟ ಅಂತಾ ರೈತರು ಕೇಳಿಕೊಳ್ಳುತ್ತಿದ್ದಾರೆ. ಆದರೆ ಹವಾಮಾನ ಇಲಾಖೆಯಿಂದ ಮಾತ್ರ ಭಾರಿ ಮಳೆಯ ಬಗ್ಗೆ ಭೀಕರ ಎಚ್ಚರಿಕೆ ಸಂದೇಶ ಸಿಕ್ಕಿದೆ.

ಭೀಕರ ಮಳೆ ಯಾವಾಗ ನಿಲ್ಲುತ್ತೆ?
ಹೌದು, ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತನಕವೂ ಹೇಳಿಕೊಳ್ಳುವಷ್ಟು ಮಳೆ ಸುರಿಯಲೇ ಇಲ್ಲ. ಆಗಸ್ಟ್ ತಿಂಗಳಲ್ಲಿ ಮಳೆ ಪೂರ್ಣ ಕೈಕೊಟ್ಟಿತ್ತು. ಈ ಕಾರಣ ರೈತರು ಕೂಡ ಮುಂಗಾರು ಮಳೆ ಪೂರ್ಣ ಕೈಕೊಟ್ಟಿದೆ ಅಂತ ನಿರ್ಧರಿಸಿದ್ರು. ನೋಡ ನೋಡುತ್ತಲೇ ಮುಂಗಾರು ಮಳೆಯ ಸಮಯ ಕೂಡ ಮುಗಿದಿತ್ತು. ಕೊನೆಗೂ ಈಗ ಹಿಂಗಾರು ಮಳೆ ದಕ್ಷಿಣ ಭಾರತದ ರಾಜ್ಯಗಳ ಕೈ ಹಿಡಿಯುತ್ತಿದೆ. ಆದ್ರೆ ಯಾಕಪ್ಪಾ ಇಷ್ಟೊಂದು ಮಳೆ ಬೀಳುತ್ತಿದೆ ಎಂಬ ಚಿಂತೆ ಕೂಡ ಈಗ ಶುರುವಾಗಿದೆ. ಇದೇ ಸಮಯದಲ್ಲಿ ಮಹಾನಗರವೇ ಮುಳುಗಿ ಹೋಗಿದೆ.
ಮುಳುಗಿ ಹೋಗುತ್ತಿದೆ ಮಹಾನಗರ!
ಅಂದಹಾಗೆ ದಕ್ಷಿಣ ಭಾರತದ ಅತ್ಯಂತ ದೊಡ್ಡ ನಗರಗಳ ಪೈಕಿ ಒಂದು ಎಂಬ ಹೆಮ್ಮೆಯ ಪಡೆದಿರುವ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಈಗ ವರುಣನ ಕೋಪವೇ ಶಾಪವಾಗಿದೆ. ಭೀಕರ ಮಳೆಯ ಕಾರಣ ಚೆನ್ನೈ ನಲುಗಿ ಹೋಗಿದೆ. ಅದ್ರಲ್ಲೂ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಇನ್ನೂ ಭೀಕರವಾಗಿದೆ. ಇಂದು ಎಡಬಿಡದೆ ಸುರಿದ ಮಳೆಯಿಂದ ಇಡೀ ನಗರವೇ ನೀರಿನಲ್ಲಿ ಮುಳುಗಿ ಹೋಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಇನ್ನೂ ಕಾದಿದೆ ಮಳೆಯ ಕಂಟಕ!
ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಾಲ್ ಮತ್ತು ಕೇರಳ ಸೇರಿ ಇನ್ನ ಕೆಲ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆಯಿದೆ. ಈ ಕಾರಣಕ್ಕೆ ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ನವೆಂಬರ್ 30 & ಡಿಸೆಂಬರ್ 1ಕ್ಕೆ ಕೇರಳದಲ್ಲೂ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆಯ ನೀಡಲಾಗಿದೆ. ಈ ಮೂಲಕ ಮುಂದಿನ ಕೆಲ ದಿನಗಳ ಕಾಲ ಹೀಗೆ ಭಾರಿ ಮಳೆ ಬೀಳುವ ಕುರಿತು ಮುನ್ನೆಚ್ಚರಿಕೆ ಸಿಕ್ಕಿದೆ.
ಮಳೆಗೆ ಕಾರಣ ಏನು ಗೊತ್ತಾ?
ಬಾಂಗ್ಲಾದಲ್ಲಿ ಇತ್ತೀಚೆಗೆ ಚಂಡಮಾರುತ ಒಂದು ಭಾರಿ ವಿನಾಶ ಸೃಷ್ಟಿ ಮಾಡ್ತು ಕೇವಲ ಒಂದು ವಾರದ ಬಳಿಕ ಈಗ 'ಮೈಚಾಂಗ್' ಚಂಡಮಾರುತ ಪ್ರಭಾವ ಬೀರಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲೂ ಚಂಡಮಾರುತವಾಗಿ ಈ ಸುಳಿಗಾಳಿ ಬದಲಾಗುತ್ತಿದೆ. ಹಾಗೆಯೇ, ಈ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದು ಕಡೆ ಇದೇ ಸಮಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಜಲಾಶಯದ ನೀರಿನ ಮಟ್ಟದ ಬಗ್ಗೆ ಸಿಹಿಸುದ್ದಿ ಸಿಗುತ್ತಿದೆ.












Click it and Unblock the Notifications