Heavy Rain: ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಚೆನ್ನೈ, ನವೆಂಬರ್ 12: ಹವಾಮಾನದಲ್ಲಿ ಕಳೆದೊಂದು ವಾರದಿಂದ ಬದಲಾವಣೆಗಳ ಆಗಿವೆ. ಪರಿಣಾಮ ಪರಿಣಾಮ ಚಳಿ, ಮಬ್ಬು ವಾತಾವರಣ ಸಹಿತ ಭಾರೀ ಮಳೆಯು ಸುರಿಯುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯು ಮುಂದಿನ ನಾಲ್ಕೈದು ದಿನಗಳ ಕಾಲ ತಮಿಳುನಾಡಿಗೆ ಭಾರೀ ಮಳೆ ಬರಲಿದೆ ಎಂದಿದ್ದು, ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲಟ್' ಘೋಷಿಸಿದೆ. ಇಂದು ಚೆನ್ನೈ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ಒಂದು ದಿನ ರಜೆ ಘೋಷಿಸಿದ್ದಾರೆ.
ಚೆನ್ನೈ ಮಹಾನಗರ ಸೇರಿದಂತೆ ತಮಿಳು ನಾಡು ರಾಜ್ಯದ ವಿವಿಧ ಜಿಲ್ಲೆಗಳಿಗೆ ನವೆಂಬರ್ 15ರವರೆಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಕಾರಣದಿಂದ ಮಕ್ಕಳ ಹಿತದೃಷ್ಟಿ ಗಮನದಲ್ಲಿರಿಸಿಕೊಂಡ ಚೆನ್ನೈ ಜಿಲ್ಲಾಧಿಕಾರಿಗಳಾದ ರಶ್ಮಿ ಸಿದ್ಧಾರ್ಥ್ ಝಾಗಡೆ ನಗರ ಎಲ್ಲ ಶಾಲೆಗಳಿಗೆ ಒಂದು ದಿನ ಸಾರ್ವತ್ರಿಕ ರಜೆ ನೀಡಿ ಆದೇಶಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು ರಾಜ್ಯ ಅನೇಕ ಜಿಲ್ಲೆಗಳಿಗೆ ಮುಂದಿನ ಮೂರು ಭಾರೀ ಮಳೆ ಬರಲಿದೆ ಎಂದು ಎಚ್ಚರಿಸಿದೆ. ಆ ಪೈಕಿ ಇಂದು ಮಂಗಳವಾರ ನವೆಂಬರ್ 12 ರಂದು 12 ಜಿಲ್ಲೆಳಿಗೆ, ನವೆಂಬರ್ 13 ರಂದು 17 ಜಿಲ್ಲೆಗಳಿಗೆ ಭಾರಿ ಮಳೆ ಆಗಲಿದೆ. ನಂತರ ನವೆಂಬರ್ 14 ರಂದು 27 ಹಾಗೂ ನವೆಂಬರ್ 15 ಬರೋಬ್ಬರಿ 25 ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಕಾರಣ 'ಯೆಲ್ಲೋ ಅಲರ್ಟ್' ಕೊಟ್ಟಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಚೆನ್ನೈನಲ್ಲಿ ಎಲ್ಲೆಲ್ಲಿ ಜೋರು ಮಳೆ ಸಂಭವ
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ತಮಿಳು ನಾಡಿನ ಕಾಂಚೀಪುರಂ, ಚೆಂಗಲ್ಪಟ್ಟು, ಕಡಲೂರು, ಚೆನ್ನೈ, ತಿರುವಳ್ಳೂರು, ಮೈಲಾಡುತುರೈ, ನಾಗಪಟ್ಟಿಣಂ, ತಂಜಾವೂರು, ತಿರುವರೂರ್, ಪುದುಚೇರಿ, ಕಾರೈಕಲ್, ವಿಲ್ಲುಪ್ಪುರಂ, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 11ಸೆಂಟಿ ಮೀಟರ್‌ಗಳಷ್ಟು ಮಳೆ ಆಗಲಿದೆ.
ಕಳೆದೊಂದು ವಾರದ ಹಿಂದಷ್ಟೇ ಸುರಿದ ಜೋರು ಮಳೆಗೆ ತಮಿಳುನಾಡಿನ ರಾಮೇಶ್ವರಂನಲ್ಲಿ ಅನೇಕ ಪ್ರದೇಶಗಳು ಜಲಾವೃತವಾಗಿದ್ದವು. ರಸ್ತೆಗಳ ಮೇಲೆ ಮಳೆ ನೀರು ಕೋಡಿ ಹರಿದು ಸಂಚಾರ, ಜನಜೀವನ ಅಸ್ತವೆಸ್ತವಾಯಿತು. ತಿತಿಗುಡಿ, ಪ್ರದ್ಯಂತೇರು ಮತ್ತು ಮೆಟ್ಟುತೇರು ಪ್ರದೇಶಗಳಲ್ಲಿ ಅತ್ಯಧಿಕ ತೊಂದರೆ ಆಗಿತ್ತು ಎಂದು ವರದಿ ಆಗಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಮನ್ನಾರ್ ಕೊಲ್ಲಿ ದಕ್ಷಿಣ ಪೆನಿನ್ಸುಲರ್ ಪ್ರದೇಶದಲ್ಲಿ ಚಂಡಮಾರುತ ಪರಿಚಲನೆ ಕಂಡು ಬಂದಿತ್ತು. ಇದರಿಂದ ನವೆಂಬರ್ 3ರವರೆಗೆ ಭಾರೀ ಮಳೆ ಆಗಿತ್ತು. ಈಗಲೇ ಅಂತದ್ದ ವಾತಾವರಣ ಬಂಗಳಕೊಲ್ಲಿಯಲ್ಲಿ ಸೃಷ್ಟಿಯಾಗಿದೆ. ಇದರಿಂದ ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications