Rain Alert: ಭಾರಿ ಮಳೆ, ಗುಡುಗು & ಸಿಡಿಲು ಗ್ಯಾರಂಟಿ: ಮಾರ್ಚ್ 1ರಿಂದ ಮಳೆ ಅಬ್ಬರ ಶುರು!

ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ರೈತರು, ಜನರು ಕಾಯುತ್ತಾ ಕೂತಿದ್ದಾರೆ. ಆದರೂ ಈವರೆಗೂ ಮಳೆರಾಯ ಕರುಣೆ ತೋರಿಸುತ್ತಿಲ್ಲ. ಮಳೆ ಬಿಡಿ ಬೇಸಿಗೆ ಆರಂಭಕ್ಕೂ ಮೊದಲು ಈ ಸಮಯದಲ್ಲಿ ಕೊತ ಕೊತ ಕುದಿಯುವ ಬಿಸಿಲು ಇದೆ. ಹೀಗಾಗಿ ಜನರು ಕೂಡ ಪ್ರತಿನಿತ್ಯ ಭಾರಿ ದೊಡ್ಡ ಸಂಕಷ್ಟ ಎದುರಿಸುವಂತಾಗಿದೆ. ಹೀಗಿದ್ದಾಗ ಹವಾಮಾನ ಇಲಾಖೆಯಿಂದ ಗುಡ್ ನ್ಯೂಸ್ ಹೊರಬಿದ್ದಿದೆ, ಭಾರಿ ಮಳೆಯ ಮುನ್ಸೂಚನೆ ಕೂಡ ನೀಡಲಾಗಿದೆ! ಹಾಗಾದರೆ ಯಾವ ಯಾವ ಜಾಗದಲ್ಲಿ ಮಳೆ ಬೀಳಲಿದೆ ಗೊತ್ತಾ?

ಬೇಸಿಗೆ ಕೊತ ಕೊತ ಕುದಿಯುತ್ತಿದೆ. ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆ ಎದುರಾದ ಕಾರಣ, ಈಗ ಕುಡಿಯುವ ನೀರಿಗೆ ಕೂಡ ಬರ ಬಂದಿದೆ. ಗ್ರಾಮೀಣ ಭಾಗದಲ್ಲಿ ಅಂದರೆ, ಹಳ್ಳಿ ಜನರಿಗೆ ನೀರು ತುಂಬಿಸುವುದೇ ಸಾಹಸ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಹವಾಮಾನ ಇಲಾಖೆಯ ಕಡೆಯಿಂದ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ಕೆಲ ದಿನ ಕಾಲ ಭರ್ಜರಿ ಮಳೆ ಬಿದ್ದು, ಭೂಮಿ ತಂಪಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿಯೆ ಜನ, ಅನ್ನದಾತ ರೈತರು ಈ ಸುದ್ದಿಯಿಂದ ನಿಟ್ಟುಸಿರನ್ನ ಬಿಡುತ್ತಿದ್ದಾರೆ. ಅಲ್ಲದೆ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೊಂದಿದ್ದಾರೆ ನಮ್ಮ ರಾಜ್ಯದ ರೈತರು. ಹಾಗಾದರೆ ಇದೀಗ ಮಳೆ ಬೀಳುವ ಪ್ರದೇಶಗಳು ಯಾವುವು?

Heavy Rain Alert Has Been Issued For 01 03 2024 In These Areas

ಕರ್ನಾಟಕದಲ್ಲಿ ಮಳೆ ಯಾವಾಗ?

ಚಳಿಗಾಲ ಮುಗಿದು ಇನ್ನೇನು ಬಿರು ಬೇಸಿಗೆ ಶುರುವಾಗುತ್ತಿದೆ, ಹೀಗಿದ್ದಾಗ ನೀರಿಗೆ ಎಲ್ಲಾ ಕಡೆಗೆ ಕೊರತೆ ಉಂಟಾಗಿದೆ. ಜನ ಕೂಡ ನೀರು ಸಂಗ್ರಹಿಸಲು ಪರದಾಡುತ್ತಿದ್ದಾರೆ, ಈ ಹೊತ್ತಲ್ಲಿ ಮಳೆ ಬೀಳಬೇಕು ಅಂತಾ ಆಕಾಶ ನೋಡುವ ಸಮಯದಲ್ಲೇ ಮಾರ್ಚ್ 1 ರಿಂದ 3ರ ತನಕ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ಅದ್ರಲ್ಲೂ ಪಶ್ಚಿಮ ಹಿಮಾಲಯದ ತಪ್ಪಲಿನಲ್ಲಿ ದೊಡ್ಡ ಪ್ರಮಾಣದ ಹವಾಮಾನ ಬದಲಾವಣೆ ಉಂಟಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ಭಾರತದ ಕಿರೀಟ ಜಮ್ಮು & ಕಾಶ್ಮೀರ ಸೇರಿದಂತೆ, ಹಿಮಾಚಲ ಪ್ರದೇಶ ಸುತ್ತ ಇದೀಗ ಭಾರಿ ಮಳೆಯಾಗಲಿದೆ ಎನ್ನಲಾಗಿದೆ. ಹಾಗೇ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆ ಬೀಳುವ ಸೂಚನೆ ಸಿಕ್ಕಿದೆ.

31 ಡಿಗ್ರಿ ಸೆಲ್ಸಿಯಸ್ ತಾಪಮಾನ!

ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಲ್ಲಿ 31 ಡಿಗ್ರಿ ಸೆಲ್ಸಿಯಸ್ ಮೀರಿ ತಾಪಮಾನ ಹೆಚ್ಚಾಗಿದೆ. ಬೆಂಗಳೂರು ಸೇರಿ, ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತ ಇದೆ. ಕರ್ನಾಟಕದಲ್ಲೂ ತಾಪಮಾನ ಈ ಬಾರಿ ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‍ ಹೆಚ್ಚಾಗಿದೆ ಅಂತಿವೆ ಅಂಕಿ, ಅಂಶಗಳು. ಇದೀಗ ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆ ತೋರಿಸಲಿದ್ದು, ಮುಂದಿನ ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮಾರ್ಚ್‍ ಮೊದಲ ವಾರದಲ್ಲಿ ದಾವಣಗೆರೆ, ಬೆಂಗಳೂರು, ಕೊಡಗು, ಮೈಸೂರು ಮತ್ತು ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತೆ ಅಂತಿದ್ದಾರೆ, ಹವಾಮಾನ ಇಲಾಖೆ ತಜ್ಞರು.

Heavy Rain Alert Has Been Issued For 01 03 2024 In These Areas

ನದಿ ಹರಿಯುವ ಪ್ರದೇಶದಲ್ಲೇ ಸಂಕಷ್ಟ

ಕಾವೇರಿ, ಕೃಷ್ಣಾ, ಹೇಮಾವತಿ, ತುಂಗಾ, ಭದ್ರಾ ಹೀಗೆ ಕನ್ನಡಿಗರ ನಾಡಿನಲ್ಲಿ ದೊಡ್ಡ ದೊಡ್ಡ ನದಿಗಳೇ ಬತ್ತುತ್ತಿವೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು ಜನ & ರೈತರು. ಹವಾಮಾನ ಇಲಾಖೆ ಇದೀಗ ನೀಡುತ್ತಿರುವ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಜನ ಕೂಡ ಖುಷಿಯಿಂದ ಕಾಯುತ್ತಿದ್ದಾರೆ.

ಮಳೆ ಬಾರದೆ ಭೂಮಿ ಬಾಯಿ ಬಿಟ್ಟಿದೆ, ದೇಶದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೊರತೆ ದೊಡ್ಡ ಸಮಸ್ಯೆ ತಂದೊಡ್ಡಿದ್ದು. ಹೀಗಿದ್ದಾಗ ದಿಢೀರ್ ವರುಣ ದೇವ ಕರ್ನಾಟಕವು ಸೇರಿದಂತೆ, ಭಾರತದ ಹಲವು ರಾಜ್ಯದಲ್ಲಿ ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾನೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮೊದಲೇ ಮಳೆಯ ಮುನ್ಸೂಚನೆ ಸಿಕ್ಕಂತಾಗಿದೆ. ಆದಷ್ಟು ಬೇಗ ಮಳೆ ಬೀಳಬೇಕು ಅನ್ನೋದೆ ಎಲ್ಲರ ಆಶಯ, ಅದಕ್ಕೆ ತಕ್ಕ ವಾತಾವರಣ ಕೂಡ ಈಗ ಸೃಷ್ಟಿ ಆಗುತ್ತಿದೆ. ಈ ನಡುವೆ ಒಂದಷ್ಟು ಮಳೆ ಬಿದ್ದರೆ ಬರ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಒಂದಷ್ಟು ಅವಕಾಶ ಸಿಗಲಿದೆ.

ಮಳೆಗಾಗಿ ಜನರಿಂದ ವಿಶೇಷ ಪೂಜೆ

ಮಳೆ ಬಾರದೆ ಭೂಮಿ ಬಾಯಿ ಬಿಟ್ಟಿದೆ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೊರತೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಹೀಗಿದ್ದಾಗ ದಿಢೀರ್ ವರುಣ ದೇವ ಕರ್ನಾಟಕವು ಸೇರಿದಂತೆ, ಭಾರತದ ಹಲವು ರಾಜ್ಯದಲ್ಲಿ ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮೊದಲೇ ಮಳೆಯ ಮುನ್ಸೂಚನೆ ಸಿಕ್ಕಂತಾಗಿದೆ. ಆದರೆ ಆದಷ್ಟು ಬೇಗ ಮಳೆಯ ಆಗಮನ ಆಗಬೇಕು ಅನ್ನೋದೆ ಜನರ ಆಗ್ರಹ. ಹೀಗಾಗಿ ಹಲವು ಕಡೆ ವಿಶೇಷ ಪೂಜೆಯನ್ನ ಕೂಡ ಜನ ನೆರವೇರಿಸಿದ್ದಾರೆ, ಈ ಮೂಲಕ ವರುಣ ದೇವನ ಬಳಿ ಜನರು ಬೇಡಿಕೆ ಇಟ್ಟಿದ್ದಾರೆ. ಪ್ರಾರ್ಥನೆಯನ್ನೂ ಮಾಡಿದ್ದಾರೆ, ಹೀಗಾಗಿ ವರುಣ ದೇವ ಜನರ ಪ್ರಾರ್ಥನೆಗೆ ಫಲ ನೀಡ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+