CM Ibrahim: 3 ಸೀಟಿಗಾಗಿ ಅಮಿತ್ ಶಾ ಮುಂದೆ ನಿಮ್ಮ ಮಗ ನಿಮ್ಮನ್ನ ಅಡ ಇಡ್ತಿದ್ದಾರೆ: ಸಿಎಂ ಇಬ್ರಾಹಿಂ
ನವದೆಹಲಿ,ಅಕ್ಟೋಬರ್ 25: ಲೋಕಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಿಗಾಗಿ ಹೆಚ್ಡಿ ಕುಮಾರಸ್ವಾಮಿ ಅವರನು ನಿಮ್ಮನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಡ ಇಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುರಿತು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಅವರು, ಜನತಾದಳದ ಎಲ್ಲಾ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಮೀಟಿಂಗ್ ಮಾಡ್ತಾ ಇದ್ದೇವೆ. ಕೇರಳ, ಮಹಾರಾಷ್ಟ್ರ, ಬಿಹಾರ್ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡ್ತಾ ಇದ್ದೇನೆ, ನಾಳೆ ಮೀಟಿಂಗ್ ಮಾಡ್ತೇವೆ, ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆoತ್. ಮೀಟಿಂಗ್ ಮಾಡಿ ನಾವು ದೇವೇಗೌಡರಿಗೆ ಹೇಳುತ್ತೇವೆ. ನೀವು ಹಿರಿಯರು ಇದ್ದೀರಿ, ನಿಮ್ಮನ್ನ ನಾವು ತಂದೆ ಸ್ಥಾನದಲ್ಲಿ ಕಾಣ್ತಾ ಇದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ, ಮಕ್ಕಳ ಮಾತು ಕೇಳಿ ಹಾಳಾಗಬೇಡಿ ಎಂದು ಸಿಎಂ ಇಬ್ರಾಹಿಂ ಹೇಳಿದರು.

ದೇಶ ಮುಖ್ಯ, ನಾವು ನಿಮ್ಮ ಮಕ್ಕಳಂತೆ. ರಾಮ್ ವಿಲಾಸ್ ಪಾಸ್ವಾನ್, ಜೆ ಎಚ್ ಪಟೇಲ್ ಬಿಜೆಪಿ ಜೊತೆ ಹೋದ್ರು ಅಂತ ಅದುನ್ನ ಬಿಟ್ಟು ಬಂದು, ನಾನು ಸಿದ್ದರಾಮಯ್ಯ ಎಲ್ಲಾ ಸೇರಿ ಮಾಡಿದ್ದು ಇದನ್ನ ಈಗ ನೀವು ಮಕ್ಕಳ ಮಾತು ಕೇಳಿ ನಮ್ಮನ್ನ ನಡು ನೀರಿನಲ್ಲಿ ಬಿಟ್ಟು ಹೋಗ್ತಾ ಇದ್ದೀರಾ. ಆದರೆ, ನಾವು ಹೋರಾಟ ಮಾಡೋದನ್ನ ನಿಮ್ಮಿಂದಲೇ ಕಲ್ತಿದ್ದೇವೆ. ಅದಕ್ಕೆ ನಾನು ತಿರುಗಾಟ ಮಾಡ್ತಾ ಇದ್ದೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷವನ್ನ ಹೇಗೆ ಉಳಿಸಬೇಕು ಅಂತ ನಾವು ತೀರ್ಮಾನ ಮಾಡುತ್ತೇವೆ. ಎಲ್ಲಾ ರಾಜ್ಯದ ನಾಯಕರು ಸೇರಿ ನಾವು ತೀರ್ಮಾನ ಮಾಡುತ್ತೇವೆ, ಸಭೆ ಪಾಟ್ನದಲ್ಲಿ ಮಾಡಿ ಅಂತ ಹೇಳಿದ್ದಾರೆ, ನಾನು ಬೆಂಗಳೂರಲ್ಲೇ ಮಾಡಣ ಅಂತ ಹೇಳಿದ್ದೀನಿ. ಅದಕ್ಕೆ ನಾಳೆ ನಾವೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬರ್ತೇವೆ, ಎಲ್ಲಿ ಸಭೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ, ಮುಂದಿನ ನಡೆ ಏನು ಎಂಬುದರ ಬಗ್ಗೆ ತೀರ್ಮಾನ ಮಾಡೋಕೆ ನಾಳೆ ಸಭೆ ಸೇರುತ್ತೇವೆ.
ನಾನು ಎಲೆಕ್ಟೆಡ್ ಪ್ರೆಸಿಡೆಂಟ್, ನನ್ನನ್ನ ತೆಗಿಯೋಕೆ ಬರುವುದಿಲ್ಲ. ಜನತಾದಳ ಪ್ರಕಾರ ಅವಿಶ್ವಾಸ ತಂದು ಅದು ಪಾಸ್ ಆದ್ಮೇಲೆ 45 ದಿನಕ್ಕೆ ನಾನು ರಾಜೀನಾಮೆ. ಇನ್ನು ಗಂಡ ಸತ್ತೇ ಇಲ್ಲಾ, ನೀವು ಎರಡನೇ ಮದುವೆಗೆ ರೆಡಿ ಅಂದ್ರೆ ಹೇಗೆ? ಕೋರ್ಟ್ ಗೆ ಹೋಗುವ ಅವಶ್ಯಕತೆ ಬೀಳುವುದಿಲ್ಲ ಅಂತ ನಾನು ಅನ್ಕೊಂಡಿದ್ದೇನೆ. ಎಲೆಕ್ಷನ್ ಕಮಿಷನ್ ಅವ್ರೆ ತೀರ್ಮಾನ ಮಾಡುತ್ತಾರೆ. ನಮ್ಮ ಗೌಡ್ರು ಒಪ್ಪದೇ ಇದ್ರೆ ಮುಂದೆ ಅನಿವಾರ್ಯ, ಅಧ್ಯಕ್ಷರನ್ನ ಬದಲಾವಣೆ ಮಾಡ್ಬೇಕಾಗುತ್ತದೆ ಎಂದು ಹೇಳಿದರು.

ಗೌಡ್ರಿಗೆ ಅವಮಾನ ಆಗುವುದಕ್ಕೆ ಬಿಡಬಾರದು, ಅವರಿಗೆ ಗೌರವ ಕೊಡ್ಬೇಕು. ಅವ್ರು ತಂದೆ ಸಮಾನ, ನಮ್ಮ ಜೊತೆ ನೀವೇ ನಾಯಕರಾಗಿ ಮುಂದುವರೆಯಿರಿ ಅಂತ ಕೇಳ್ತೇವೆ. ಅದಾದ್ಮೇಲೆ ಅವ್ರು ಏನು ತೀರ್ಮಾನ ಮಾಡ್ತಾರೋ ನೋಡೋಣ. ಬಸ್ ಸ್ಟ್ಯಾಂಡ್ ನಲ್ಲಿ ಲವ್ ಮಾಡಿದ್ದು ಉಳಿಯುತ್ತಾ? ಅರೇಂಜ್ ಮ್ಯಾರೇಜ್ ಮಾಡಿದ್ರೆ ನಿಲ್ಲಲ್ಲ, ಇನ್ನು ಬಸ್ ಸ್ಟ್ಯಾಂಡ್ ನಲ್ಲಿ ಲವ್ ಮಾಡಿದ್ದು ಉಳಿಯುತ್ತಾ ಎಂದು ಪ್ರಶ್ನಿಸಿದರು.
ಪಾರ್ಟಿಯಲ್ಲಿ ತೀರ್ಮಾನ ಆಗಿದ್ಯಾ, ಯಾರಿಗೆ ಏನು ಅಧಿಕಾರ ಇದೆ. MLA ಗಳು ಎಲ್ಲಾ ಕಾದು ನೋಡಬೇಕು, ಈ ಹಿಂದೆ ಕೇಳಿದ್ರೆ ಅಂತದ್ದು ಯಾವುದು ಇಲ್ಲಾ ಅಂತಾನೆ ಗೌಡ್ರು ನನ್ನ ಹತ್ರ ಹೇಳುತ್ತಾ ಬಂದಿದ್ರು. ಅವರು ಮನಸ್ಸು ಬದಲಾಯಿಸಿಲ್ಲ ಅಂದ್ರೆ ರೆಸಲ್ಯೂಷನ್ ಮಾಡಿ ಬೇರೆ ಅಧ್ಯಕ್ಷರನ್ನ ಆಯ್ಕೆ ಮಾಡ್ತೇವೆ. ಉಚ್ಚಾಟನೆ ಮಾಡೋಕೆ ನಾವು ಹೋಗಲ್ಲ, ಆದ್ರೆ ಅನಿವಾರ್ಯವಾಗಿ ಅಧ್ಯಕ್ಷರನ್ನ ಬದಲಾವಣೆ ಮಾಡ್ತೇವೆ ಅಷ್ಟೇ. NDA ಮೈತ್ರಿಕೂಟಕ್ಕೆ ಸೇರಿದ್ದೇವೆ ಅಂತ ಅನೌನ್ಸ್ ಮಾಡೋಕೆ ಕುಮಾರಸ್ವಾಮಿ ಯಾರು? ಅವರು ಓನ್ಲಿ MLA ಅಷ್ಟೇ ಎಂದು ಹೇಳಿದರು.
ಹೆಣ್ಣಿಗೆ ಧಾರೆ ಎರೆಯೋದು ಅವ್ರ ಅಪ್ಪ ಆಗಿರಬೇಕು. ಯಾರೋ ಬಸ್ ಸ್ಟ್ಯಾಂಡ್ ನಲ್ಲಿ ಇರೋನು ಬಂದು ಧಾರೆ ಎರೆಯೋಕೆ ಆಗುತ್ತಾ? ಗೋವಾ ಸಿಎಂ ಗೆ ಬುದ್ದಿ ಇಲ್ಲಾ, ರಾಜ್ಯ ಬಿಜೆಪಿ ನಾಯಕರನ್ನ ಸಹಿತ ಅವರ ಕರ್ದಿಲ್ಲ, ಏನನ್ನೂ ಸಹ ಕೇಳಿಲ್ಲ, ಈ ಕರ್ನಾಟಕ ದಲ್ಲಿ ಇರುವ ಬಿಜೆಯವ್ರು ಸಹ ಆ ಕಡೆ ನೂ ಇಲ್ಲಾ ಈ ಕಡೆ ನೂ ಇಲ್ಲ. ಜನತಾದಳ ಎಲ್ಲವಕ್ಕಿಂತ ಆಕ್ಟಿವ್ ಆಗಿದೆ. ನಾವು ರಾಜ್ಯಾಧ್ಯಕ್ಷ ಆಗೇ ಇರ್ತೀವಿ ಅಷ್ಟೇ, ರಾಷ್ಟ್ರ ಅಧ್ಯಕ್ಷ ಆಗಲ್ಲ ಎಂದು ಹೇಳಿದರು.












Click it and Unblock the Notifications