ಕಾಳಧನಿಕರ ಬಗ್ಗೆ ಮಾಹಿತಿ ಇದ್ದರೆ ಈ ಐಡಿಗೆ ಇಮೇಲ್ ಮಾಡಿ!
ಕಾಳಧನಿಕರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಸ್ವಯಂ ಘೋಷಣೆ ಅವಧಿ ವಿಸ್ತರಿಸಲಾಗಿದೆ. ಜತೆಗೆ ಕಾಳಧನಿಕರ ಮಾಹಿತಿ ನೀಡಲು ಹೊಸ ಇ ಮೇಲ್ ವಿಳಾಸ ನೀಡಲಾಗಿದೆ
ನವದೆಹಲಿ, ಡಿಸೆಂಬರ್ 17: ಕಾಳಧನಿಕರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಸ್ವಯಂ ಘೋಷಣೆ ಅವಧಿ ವಿಸ್ತರಿಸಲಾಗಿದೆ. ಜತೆಗೆ ಕಾಳಧನಿಕರ ಮಾಹಿತಿ ನೀಡಲು ಹೊಸ ಇ ಮೇಲ್ ವಿಳಾಸ ನೀಡಲಾಗಿದೆ.
ಕಪ್ಪುಹಣ ಹೊಂದಿದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಕೇಂದ್ರ ಸರ್ಕಾರ ಹೊಸ ಇ ಮೇಲ್ ವಿಳಾಸ [email protected] ಆರಂಭ ಮಾಡಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧ್ಯ ಅವರು ಹೇಳಿದ್ದಾರೆ.
ಕಾಳಧನಿಕರ ಬಗ್ಗೆ ಮಾಹಿತಿ ನೀಡಿದವರ ಹೆಸರು ಹಾಗೂ ಮಾಹಿತಿಯನ್ನು ಬಹಿರಂಗ ಪಡಿಸದೆ ಗೌಪ್ಯವಾಗಿ ಇರಿಸಲಾಗುವುದು ಎಂದು ಹಸ್ಮುಖ್ ತಿಳಿಸಿದರು.

* ಸ್ವಯಂ ಘೋಷಣೆ ಯೋಜನೆಯನ್ನು ಮಾರ್ಚ್ 31, 2017ರ ತನಕ ವಿಸ್ತರಿಸಲಾಗಿದೆ.
* ಹಳೆ ನೋಟುಗಳನ್ನು ಬಳಸಿ ಬ್ಯಾಂಕಿಗೆ ಜಮೆ ಮಾಡುವ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ, ಆದರೆ, ವೈಯಕ್ತಿಕ ದೇಣಿಗೆ ಪಡೆಯುವವರಿಗೆ 20 ಸಾವಿರ ರುಪಾಯಿ ಮಿತಿ.
* ಉಪಯುಕ್ತ ಬಿಲ್ ಪಾವತಿಗೆ ಹಳೆ ನೋಟು ಬಳಕೆ ಕೊನೆ ದಿನಾಂಕ ಡಿಸೆಂಬರ್ 15 ನ್ನು ವಿಸ್ತರಿಸಲು ನಿರಾಕರಿಸಿದ ಸುಪ್ರೀಂಕೋರ್ಟ್.
* ಅಪನಗದೀಕರಣ ಪ್ರಕರಣ ಈಗ 5 ಜಡ್ಜ್ ಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ.
* ವಿದೇಶಿ ನಾಗರಿಕರು ಡಿಸೆಂಬರ್ 31 ರ ತನಕ 5 000 ಪ್ರತಿವಾರದಂತೆ ಹಣ ವಿನಿಮಯವನ್ನು ಮಾಡಿಕೊಳ್ಳಬಹುದು.
* ಅಪನಗದೀಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ತನಕ 3 ಸಾವಿರಕ್ಕೂ ಅಧಿಕ ನೋಟಿಸ್ ಕಳಿಸಲಾಗಿದ್ದು, 291 ಕೇಸುಗಳು ದಾಖಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications