ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ

ನಕ್ಸಲರಿಗೆ ಪಾಕಿಸ್ತಾನದ ಐಎಸ್ ಐ ಏಜೆಂಟರು ಶಸ್ತ್ರಾಸ್ತ್ರ ಪೂರೈಕೆ ಮಾಡಿದರೆ, ಲೂಟಿ ಮಾಡುವ ಮೂಲಕ ಹಣ ಸಂಗ್ರಹಿಸುತ್ತಾರೆ. ಆದ್ದರಿಂದಲೇ ಅಪನಗದೀಕರಣದಿಂದ ಯಾವುದೇ ತೊಂದರೆಯಾಗಿಲ್ಲ ಎಂಬುದು ತಿಳಿಯುತ್ತದೆ

ಬೆಂಗಳೂರು, ಏಪ್ರಿಲ್ 25: ಈ ವರ್ಷದ ಜನವರಿಯಲ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, ಅಪನಗದೀಕರಣದಿಂದ ನಕ್ಸಲರಿಗೆ ನಗದಿಗಾಗಿ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಅಪನಗದೀಕರಣದ ನಂತರ ಹಣಕಾಸಿನ ಸಮಸ್ಯೆಯಾಗಿರುವ ನಕ್ಸಲರಿಗೆ ಕಾರ್ಯಾಚರಣೆಯೇ ಕಷ್ಟವಾಗಿದೆ ಎಂದಿದ್ದರು.

ಆ ಹೇಳಿಕೆ ನೀಡಿ ಮೂರು ತಿಂಗಳು ಕಳೆದಿದೆ. ಛತ್ತೀಸ್ ಗಢದಲ್ಲೇ ನಕ್ಸಲರಿಂದ ನಡೆದ ಎರಡು ಭೀಕರ ದಾಳಿಯಲ್ಲಿ ಒಟ್ಟು ಮೂವತ್ತೆಂಟು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಇದರರ್ಥ ಅಪನಗದೀಕರಣವು ನಕ್ಸಲರ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]

ಆದರೆ, ನಕ್ಸಲರ ಪ್ರಭಾವವಿರುವ ಹಳ್ಳಿಗಳ ಸಂಖ್ಯೆ 106ರಿಂದ 68ಕ್ಕೆ ಇಳಿದಿದೆ. ಆದರೆ ನಕ್ಸಲರ ಹಿಡಿತವು ಈ ಪ್ರದೇಶದಲ್ಲಿ ತುಂಬ ಬಲವಾಗಿದೆ. ಮೊದಲನೆಯದಾಗಿ ನಕ್ಸಲರಿಗೆ ಹಣ ಪೂರೈಕೆ ಆಗುತ್ತಿರುವುದು ದೇಶದ ಹೊರಭಾಗದಿಂದ. ದರೋಡೆ ಮಾಡುವ ಮೂಲಕವು ನಕ್ಸಲರು ಹಣ ಸಂಗ್ರಹಿಸುತ್ತಾರೆ.

Naxal

ಮೂಲಗಳು ತಿಳಿಸುವ ಪ್ರಕಾರ ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಆಗುವುದು ಪಾಕಿಸ್ತಾನದ ಐಎಸ್ ಐ ಏಜೆಂಟರ ಮೂಲಕ. ನಕ್ಸಲರ ಸಮಸ್ಯೆಯನ್ನು ನಿವಾರಿಸುವಲ್ಲಿ ಎಲ್ಲಿ ಸೋಲುತ್ತಿದ್ದೇವೆ ಅನ್ನೋದನ್ನು ಸರಕಾರ ಗುರುತಿಸಬೇಕು. ಸತ್ಯ ಏನೆಂದರೆ, ತಳಮಟ್ಟದ ಗುಪ್ತಚರ ದಳ ಹೀನಾಯವಾಗಿ ವೈಫಲ್ಯ ಕಂಡಿದೆ.['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']

ಇನ್ನೊಂದು ಕಡೆ ನಕ್ಸಲರಿಗೆ ಸ್ಥಳೀಯರ ಬೆಂಬಲ ದೊರೆಯುತ್ತಿದ್ದು, ಸ್ಥಳೀಯವಾಗಿ ಅವರಿಗೆ ಮಾಹಿತಿ ನೀಡುವ ಜಾಲ ತುಂಬ ಪ್ರಬಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+