ಪತಿಯನ್ನು 8 ತುಂಡಾಗಿ ಕತ್ತರಿಸಿ ಕೊಂದಿದ್ದ ಮಹಿಳೆಗೆ 30 ವರ್ಷ ಜೈಲು

Posted By:
Subscribe to Oneindia Kannada

ಚಂಡೀಗಢ, ನವೆಂಬರ್ 22: ಪತಿಯನ್ನು ಎಂಟು ತುಂಡುಗಳಾಗಿ ಕತ್ತರಿಸಿ, ಕೊಲೆ ಮಾಡಿದ್ದ ಮಹಿಳೆಗೆ ಹರಿಯಾಣದ ಝಜ್ಜರ್ ನಲ್ಲಿರುವ ಕೋರ್ಟ್ ಮೂವತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಆದೇಶ ನೀಡಿದೆ.

ಕುಡುಕರು ಮಾಡಿದ ಯಡವಟ್ಟು: ಹೊರಬಂತು ಪತಿಹಂತಕಿಯ ಗುಟ್ಟು!

ಝಜ್ಜರ್ ಜಿಲ್ಲೆಯ ಅಸಂಡ ಗ್ರಾಮದಲ್ಲಿ ಕಳೆದ ವರ್ಷ ಏಪ್ರಿಲ್ ನಲ್ಲಿ ಬಲ್ಜಿತ್ ಎಂಬ ಮೂವತ್ತೆಂಟು ವರ್ಷದವರ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ ಆತನ ಪತ್ನಿ ಪೂಜಾಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್.ದಹಿಯಾ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ. ಇದೇ ಪ್ರಕರಣದಲ್ಲಿ ಇತರ ನಾಲ್ವರು ಆರೋಪಿಗಳನ್ನು ಖುಲಾಸೆ ಮಾಡಿದ್ದು, ಇಂಥ ಕ್ರೂರವಾದ ಹತ್ಯೆಗೆ ಪೂಜಾಳೇ ಕಾರಣ ಎನ್ನಲಾಗಿದೆ.

Haryana Woman Cut Her Husband Into Eight Pieces, Jailed For 30 Years

ನಮ್ಮ ಸೋದರ ನಾಪತ್ತೆಯಾಗಿದ್ದಾರೆ ಎಂದು ಬಲ್ಜಿತ್ ಸಹೋದರ ಕುಲ್ ಜಿತ್ ಕಳೆದ ವರ್ಷ ಏಪ್ರಿಲ್ ನಲ್ಲಿ ದೂರು ದಾಖಲಿಸಿದ್ದರು. ಪೂಜಾಗೆ ಬೇರೆ ವ್ಯಕ್ತಿ ಜತೆಗೆ ವಿವಾಹೇತರ ಸಂಬಂಧ ಇತ್ತು. ಆದ್ದರಿಂದ ಆಕೆ ತನ್ನ ಪತಿಯನ್ನು ಕೊಲೆ ಮಾಡಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿತ್ತು.

ಕುಲ್ ಜಿತ್ ಮತ್ತು ಅವರ ಸಹೋದರಿ, ಪೂಜಾಳ ಬಳಿ ಬಲ್ಜಿತ್ ಬಗ್ಗೆ ವಿಚಾರಿಸಲು ಮನೆಗೆ ತೆರಳಿದ್ದಾಗ ಸಮಾಧಾನಕರ ಉತ್ತರ ನೀಡಿರಲಿಲ್ಲ. ಮತ್ತು ಮನೆಯ ಕೋಣೆಯಲ್ಲಿದ್ದ ಸೂಟ್ ಕೇಸ್ ನಿಂದ ದುರ್ನಾತ ಬರುತ್ತಿತ್ತು. ಆ ಬಗ್ಗೆ ಅನುಮಾನಗೊಂಡು ಅದನ್ನು ತೆರೆದಾಗ ರುಂಡವಿಲ್ಲದ ಬಲ್ಜಿತ್ ನ ದೇಹ ಪತ್ತೆಯಾಗಿತ್ತು.

ಆ ನಂತರ ಗೊತ್ತಾಗಿದ್ದೇನೆಂದರೆ, ಬಲ್ಜಿತ್ ನನ್ನು ತುಂಡಾಗಿ ಕತ್ತರಿಸಿದ್ದ ಪೂಜಾ ಮನೆಯ ನಾನಾ ಭಾಗದಲ್ಲಿ ಅವುಗಳನ್ನು ಇರಿಸಿದ್ದಳು. ಮನೆಯ ನೆಲದಲ್ಲಿ ಗುಳಿ ತೋಡಿ, ತಲೆಯನ್ನು ಹೂತಿಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A court in Jhajjar town in Haryana has sentenced a woman to 30 years imprisonment for brutally murdering her husband by cutting him into eight pieces.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ