ಜಾಟ್ - ಬಿಜೆಪಿ ಸಂಘರ್ಷಕ್ಕೆ ಬೆಚ್ಚಿದ ಹರ್ಯಾಣ, ಇಂಟರ್ನೆಟ್ ಸ್ಥಗಿತ

Subscribe to Oneindia Kannada

ಚಂಡೀಗಢ, ನವೆಂಬರ್ 25: ಹರ್ಯಾಣ ಸರಕಾರ ಶುಕ್ರವಾರದಿಂದ ಆರಂಭಿಸಿ ಮೂರು ದಿನಗಳ ಕಾಲ ಅಂದರೆ ಭಾನುವಾರ ಮಧ್ಯರಾತ್ರಿವರೆಗೆ 13 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಯಶ್ಪಾಲ್ ಮಲಿಕ್ ನೇತೃತ್ವದ 'ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ ಸಮಿತಿ' ಭಾನುವಾರ ರೋಹ್ಟಕ್ ಜಿಲ್ಲೆಯ ಜಾಸ್ಸಿಯಾ ಗ್ರಾಮದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಅದೇ ದಿನ ಚಿತ್ರಕೂಟ ಬಿಜೆಪಿ ಸಂಸದ ರಾಜ್ ಕುಮಾರ್ ಸೈನಿ ಜಿಂದ್ ನಲ್ಲಿ ಮತ್ತೊಂದು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

 Haryana: Mobile internet services suspended till Nov 26 in 13 districts

ರಾಜ್ ಕುಮಾರ್ ಸೈನಿ ಸಮಾವೇಶವನ್ನು ಜಾಟರು ವಿರೋಧಿಸಿದ್ದು ಈಗಾಗಲೇ ಪೊಲೀಸರ ಜತೆ ಸಂಘರ್ಷಕ್ಕೆ ಇಳಿದಿದ್ದಾರೆ. ಸದ್ಯ ಜಿಂದ್ ನಲ್ಲಿ ಜಿಂದ್-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ.

ಒಟ್ಟಾರೆ ಹರ್ಯಾಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಪರಿಸ್ಥಿತಿ ಯಾವಾಗ ಕೈ ಮೀರಲಿದೆಯೋ ಗೊತ್ತಿಲ್ಲ. ಈ ಹಿನ್ನಲೆಯಲ್ಲಿ ಗೃಹ ಕಾರ್ಯದರ್ಶಿ ಎಸ್.ಎಸ್ ಪ್ರಸಾದ್ ಹೇಳಿಕೆ ನೀಡಿದ್ದು, "ಮೊಬೈಲ್ ಕರೆಗಳನ್ನು ಹೊರತುಪಡಿಸಿ ಇಂಟರ್ನೆಟ್ ಸೇವೆಯನ್ನು 13 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದೆ," ಎಂದು ಹೇಳಿದ್ದಾರೆ.

ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ಬಂಧನದ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಹರ್ಯಾಣ ಈಗ ಮತ್ತೊಂದು ಹಿಂಸಾಚಾರಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Haryana government on Friday suspended mobile internet services in 13 districts of the state till the midnight of November 26. This decision has been taken by the state government in view of maintaining law and order ahead of the two public rallies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ