• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋನಿಯಾ ಗಾಂಧಿ ಸತ್ತ ಇಲಿ: ಹರಿಯಾಣ ಸಿಎಂ

|

ಚಂಡೀಘಡ, ಅಕ್ಟೋಬರ್ 14: ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಸತ್ತ ಇಲಿಗೆ ಹೋಲಿಸಿದ್ದಾರೆ ಹರ್ಯಾಣಾದ ಬಿಜೆಪಿ ಸಿಎಂ ಮನೋಹರ ಲಾಲ್ ಕಟ್ಟರ್. ಹೇಳಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹರ್ಯಾಣ ಸಿಎಂ ಮನೋಹರ ಲಾಲ್ ಕಟ್ಟರ್ ಅವರು ಚುನಾವಣಾ rally ಅನ್ನುದ್ದೇಶಿಸಿ ಮಾತನಾಡುತ್ತಾ, ಲೋಕಸಭೆ ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ರಾಜೀನಾಮೆ ನೀಡಿ, ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಗಾಂಧಿ ಕುಟುಂಬದವರಾಗಿರುವುದಿಲ್ಲ ಎಂದಿದ್ದರು. ನಾವದನ್ನು ಸ್ವಾಗತಿಸಿದ್ದೆವು ಎಂದರು.

ಅಷ್ಟಿಲ್ಲದೇ ಸುಮ್ಮನೆ ಸೋನಿಯಾ, ವಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡುತ್ತಾರಾ?

'ಆದರೆ ಈ ಕಾಂಗ್ರೆಸ್‌ನವರು ಹೊಸ ಅಧ್ಯಕ್ಷರಿಗಾಗಿ ದೇಶವನ್ನೆಲ್ಲಾ ಮೂರು ತಿಂಗಳು ಹುಡುಕಿ ಕೊನೆಗೆ ಸೋನಿಯಾ ಗಾಂಧಿ ಯನ್ನೇ ಅಧ್ಯಕ್ಷರನ್ನಾಗಿ ಮಾಡಿದರು', ಇದು ಹೇಗಾಯಿತೆಂದರೆ ಬೆಟ್ಟ ಅಗೆದು ಇಲಿ ಹುಡುಕಿದ ಹಾಗಾಯಿತು, ಕಾಂಗ್ರೆಸ್‌ನವರು ಬೆಟ್ಟ ಅಗೆದು ಸತ್ತ ಇಲಿಯನ್ನು ಹುಡುಕಿದರು' ಎಂದು ಕಟ್ಟರ್ ಹೇಳಿದ್ದರು.

ಹರಿಯಾಣ ಸಿಎಂ ಅವರ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಮೋಹನ್‌ಲಾಲ್ ಕಟ್ಟರ್ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದೆ.

ಟಗರು ಡಿಚ್ಚಿಗೆ ಮೂಲ ಕಾಂಗ್ರೆಸ್ಸಿಗರು ಸೈಲೆಂಟ್: ಸಿದ್ದರಾಮಯ್ಯ ಆಯ್ಕೆಗೆ ಕಾರಣವಾದ 6 ಅಂಶಗಳು

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್-ಬಿಜೆಪಿ ಪರಸ್ಪರ ಎದುರಾಳಿಯಾಗಿದ್ದು, ಮೇಲ್ನೋಟಕ್ಕೆ ಬಿಜೆಪಿ ಪ್ರಬಲವಾಗಿರುವಂತೆ ತೋರುತ್ತಿದೆ.

English summary
Haryana CM Manohar Lal Khattar said AICC president Sonia Gandhi is like dead rat. Congress oppose to Haryana CM's statement and demand apology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X