ಉದ್ಯಮಿ ಮೇಲೆ ಭೀಕರ ಗುಂಡಿನ ದಾಳಿ; ವಿಡಿಯೋ ವೈರಲ್

ಭಾನುವಾರ ಬೆಳಗ್ಗೆ ಹರಿಯಾಣದಲ್ಲಿ ಉದ್ಯಮಿಯೊಬ್ಬರು ತಮ್ಮ ಎಸ್‌ಯುವಿ ವಾಹನದಲ್ಲಿ ಧಾಬಾದ ಪಾರ್ಕಿಂಗ್ ಸ್ಥಳದಲ್ಲಿ ಮಲಗಿದ್ದಾಗ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಜಜ್ಜಾರ್‌ನಲ್ಲಿ ಐಎನ್‌ಎಲ್‌ಡಿ ನಾಯಕನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದ ಕೆಲವೇ ವಾರಗಳ ನಂತರ ಈ ಘಟನೆ ನಡೆದಿದೆ.

ಪ್ರಸ್ತುತ ಘಟನೆಯು ಹರಿಯಾಣದ ಮುರ್ತಾಲ್‌ನ ಗುಲ್ಶನ್ ಧಾಬಾದಲ್ಲಿ ಬೆಳಿಗ್ಗೆ 8:30 ಕ್ಕೆ ನಡೆದಿದೆ. ಮೃತ ವ್ಯಕ್ತಿಯನ್ನು ಗೊಹಾನಾದ ಸರಗ್ತಾಲ್ ಗ್ರಾಮದ ಸುಂದರ್ ಮಲಿಕ್, ಮದ್ಯದ ವ್ಯಾಪಾರಿ ಎಂದು ಗುರುತಿಸಲಾಗಿದೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.

Haryana

ಇಬ್ಬರು ದಾಳಿಕೋರರು ಗುಂಡು ಹಾರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಕಿತ್ತಳೆ ಬಣ್ಣದ ಟೀಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಉದ್ಯಮಿ ಎಸ್‌ಯುವಿಯಿಂದ ಮುಗ್ಗರಿಸಿದ ಬಳಿಕವೂ ಅವರ ಮೇಲೆ ಗುಂಡಿನ ದಾಳಿ ಮುಂದುವರೆಯುತ್ತದೆ.

ವ್ಯಾಪಾರಿಯು ಗುಂಡು ಹಾರಿಸುವವರಲ್ಲಿ ಒಬ್ಬನನ್ನು ನೆಲಕ್ಕೆ ಎಳೆಯುತ್ತಾನೆ ಮತ್ತು ಇನ್ನೊಬ್ಬ ಶೂಟರ್ ಅವನ ಮೇಲೆ ಶೂಟ್ ಮಾಡುವುದನ್ನು ಮುಂದುವರಿಸುತ್ತಾನೆ. ಹಲವು ಗುಂಡಿನ ಏಟು ತಿಂದ ಬಳಿಕ ಉದ್ಯಮಿ ಕದಲುವುದನ್ನು ನಿಲ್ಲಿಸುತ್ತಾನೆ. ಬಳಿಕ ಇಬ್ಬರು ಕಿರಾತಕರು ಗುಂಡಿನ ದಾಳಿಯನ್ನು ಮುಂದುವರೆಸಿದ್ದರು.

ಢಾಬಾ ಮಾಲೀಕರು ಬಳಿಕ ಪೊಲೀಸರಿಗೆ ಕರೆ ಮಾಡಿದರು. ಸುಮಾರು 35 ಸುತ್ತು ಗುಂಡು ಹಾರಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ 8 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಫೋನ್‌ನಲ್ಲಿ ಮಾಹಿತಿ ಪಡೆದರು ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದಾಗ ಸುಮಾರು 30 ರಿಂದ 35 ಸುತ್ತು ಗುಂಡು ಹಾರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ರಾಜಪುರೋಹಿತ್ ಹೇಳಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಯಾವುದೇ ಗ್ಯಾಂಗ್ವಾರ್ ಕೋನವನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+