Savitri Jindal: ಬಿಜೆಪಿ 'ಬಿ' ಟೀಂ ಆರೋಪ ತಳ್ಳಿಹಾಕಿದ ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿ ಸಾವಿತ್ರಿ ಜಿಂದಾಲ್

ಹರಿಯಾಣ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಬಂಡಾಯದ ಬಿಸಿ ಎದುರಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಸೆಣಸಿ ಗೆಲ್ಲಲು ತಂತ್ರಗಾರಿಕೆ ನಡೆಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರವಾಗಿ ಕಣಕ್ಕಿಳಿದ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು, ಗೆದ್ದ ಮೇಲೆ ಮರಳಿ ಕೇಸರಿ ಪಡೆ ಸೇರುತ್ತಾರೆ?, ಅವರು ಬಿಜೆಪಿಯ 'ಬಿ' ಟೀಮ್? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಅವರೇ ಉತ್ತರಿಸಿದ್ದಾರೆ.

ಇದೇ ವರ್ಷ ಕಾಂಗ್ರೆಸ್ ಪಕ್ಷ ತೊರೆದು 74 ವರ್ಷದ ಸಾವಿತ್ರಿ ಜಿಂದಾಲ್ ಅವರು ಹರಿಯಾಣ ಚುನಾವಣೆಗೆ ಟಿಕೆಟ್ ನಿರೀಕ್ಷೆ ಇಟ್ಟುಕೊಂಡೆ ಅವರು ಬಿಜೆಪಿ ಸೇರಿದ್ದರು. ಆದರೆ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾರಣ ನಾನು ಅನಿವಾರ್ಯವಾಗಿ ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕಾಯಿತು ಎಂದು ಅವರು 'ಎನ್‌ಡಿಟಿವಿ' ಜತೆ ಮಾತನಾಡಿದ್ದಾರೆ.

Haryana Assembly Election 2024 Savitri Jindal Denies BJP B Team Allegations

ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರಿಗೆ ಸಚಿವ ಸ್ಥಾನ ನಿರ್ವಹಿಸಿದ ಅನುಭವ ಇದೆ. ಬಿಜೆಪಿಯು ನಿಮಗೆ ಟಿಕೆಟ್ ನಿರಾಕರಿಸಿ ಹಿಸಾರ್ ಹಾಲಿ ಶಾಸಕ ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಲಾಯಿತು. ಆಗ ನೀವು ಏಕೆ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸ್ಪರ್ಧಿಸಿದರೆ ಬಿಜೆಪಿಯಿಂದ ಮಾತ್ರವೇ ಎಂಬ ನಿರ್ಧಾರ ಮಾಡಿದ್ದೆ. ಅದಲ್ಲಿ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಬೇಕಾಯಿತು.

ನಾನು ಬಿಜೆಪಿ 'ಬಿ' ಟೀಮ್ ಅಲ್ಲ

ಬಿಜೆಪಿ ಹಾಲಿ ಸಂಸದರ ತಾಯಿ ಆಗಿರುವ ಸಾವಿತ್ರಿ ಜಿಂದಾಲ್ ಅವರು ಒಂದು ವೇಳೆ ಈ ಕ್ಷೇತ್ರದಿಂದ ಗೆದ್ದರೆ ನೀವು ಬಿಜೆಪಿ ಬಿ ಟೀಮ್ ಆಗುತ್ತಾರೆ ಎಂಬ ಮಾತಿದೆ. ಇದಕ್ಕೆ ಉತ್ತರಿಸಿದ ಅವರು, ನಾಣು ಮರಳಿ ಬಿಜೆಪಿ ಬೆಂಬಲಿಸುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು, ನಾನು ಬಿಜೆಪಿಯ ಬಿ ಟೀಮ್ ಎಂದು ತಿಳಿಸಿದರು.

ಹಿಸಾರ್ ವಿಧಾನಸಭಾ ಕ್ಷೇತ್ರವನ್ನು ಪತಿ ಓಂ ಪ್ರಕಾಶ್ ಜಿಂದಾಲ್ ಅವರು ಪ್ರತಿನಿಧಿಸುತ್ತಿದ್ದರು. ಅವರು ಕಾಲಾನಂತರ ನಾನು ರಾಜಕೀಯ ಪ್ರವೇಶಿಸಿದೆ. ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಅವರ ಆಶಯದಂತೆಯೇ ನಾನು ಪಕ್ಷೇತರವಾಗಿ ಸ್ಪರ್ಧಿಸಿದ್ದೇನೆ. ದಶಕದ ಹಿಂದೆ 2014 ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದೆ. ಹೀಗಾಗಿ ಮತ್ತೆ 2019 ರಲ್ಲಿ ಸ್ಪರ್ಧಿಸುವುದು ಬೇಡೆ ಎಂದು ನಿರ್ಧರಿಸಿದ್ದೆ. ಈ ಬಾರಿ ಹಿಸಾರ್ ಕ್ಷೇತ್ರದ ಜನರು ಒಕ್ಕೋರಲಿನಿಂದ ಕಣಕ್ಕಿಳಿಯುವಂತೆ ಒತ್ತಾಯಿಸಿದರು ಎಂದು ಅವರು ತಿಳಿಸಿದ್ದಾರೆ.

ತಾಯಿ ಬಂಡಾಯ ಎದ್ದಿಲ್ಲ: ಪುತ್ರ, ಬಿಜೆಪಿ ಸಂಸದ ನವೀನ್ ಜಿಂದಾಲ್

ಕಾಂಗ್ರೆಸ್‌ ಸಂಬಂಧ ಮುರಿದುಕೊಂಡು ಬಂದರೆ ತಾಯಿ ಸಾವಿತ್ರಿ ಜಿಂದಾಲ್ ಅವರು ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿಲ್ಲ ಎಂದು ಅವರ ಪುತ್ರ ಹಾಗೂ ಬಿಜೆಪಿ ಸಂಸದ ನವೀನ್ ಜಿಂದಾಲ್ ಅವರು ಸ್ಪಷ್ಟಪಡಿಸಿದ್ದಾರೆ. ತಾಯಿ ಆಸೆ, ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ ಎಂದರು.

ಸದ್ಯ ಬಿಜೆಪಿಯಿಂದ ಡಾ.ಕಮಲ್ ಗುಪ್ತಾ ಅವರನ್ನು ಹಿಸಾರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಇತ್ತ ಕಾಂಗ್ರೆಸ್ ಕಾಂಗ್ರೆಸ್ ರಾಮ್ ನಿವಾಸ್ ರಾರಾ ಅವರಿಗೆ ಟಿಕೆಟ್ ನೀಡಿದೆ. ಇವರ ಮಧ್ಯೆ ಸಾವಿತ್ರಿ ಜಿಂದಾಲ್ ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ರಾಜಕೀಯ ಆರೋಪ ಮಾಡದೇ ಪ್ರಚಾರ

ಫೋರ್ಬ್ಸ್ ಇಂಡಿಯಾ ವರದಿ ಪ್ರಕಾರ, ಈ ಸಾವಿತ್ರಿ ಜಿಂದಾಲ್ ಅವರ ನಿವ್ವಳ ಮೌಲ್ಯವು 29.1 ಶತಕೋಟಿ ಡಾಲರ್ ಆಗಿದ್ದು, ಅವರು ದೇಶದ ಶ್ರೀಮಂತ ಮಹಿಳಯಾಗಿದ್ದಾರೆ. ಅವರು ಬಿಜೆಪಿ, ಕಾಂಗ್ರೆಸ್ ಮೇಲೆ ಆಕ್ರಮಣಕಾರಿ ರೀತಿಯಲ್ಲಿ, ರಾಜಕೀಯ ಆರೋಪ ಪ್ರತ್ಯಾರೋಪ ಮಾಡದೇ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವುದು ವಿಶೇಷವಾಗಿದೆ.

ಹರಿಯಾಣ ಚುನಾವಣೆಯು ಮುಂದಿನ ಅಕ್ಟೋಬರ್ 5ಕ್ಕೆ ನಡೆಯಲಿದೆ. ಮೂರು ದಿನಗಳ ನಂತರ ಮತ ಎಣಿಕೆ ನಡೆದು ಫಲಿತಾಶ ಪ್ರಕಟಗೊಳ್ಳಲಿದೆ. ಇಲ್ಲಿನ ಅಧಿಕಾರ ಹಿಡಿಯಲು ಒಟ್ಟು 90 ಕ್ಷೇತ್ರಗಳ ಪೈಕಿ 46 ಸೀಟುಗಳನ್ನು ಗೆಲ್ಲಬೇಕಿದೆ. ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+