Haryana Election 2024: ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಉಚಿತ ಹಣ, 5 ಲಕ್ಷ ಮನೆ ನಿರ್ಮಾಣ, ಅಡುಗೆ ಅನಿಲ ಭರವಸೆ

ನವದೆಹಲಿ, ಸೆಪ್ಟಂಬರ್ 19: ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ. ನೆನ್ನೆಯಷ್ಟೇ ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಉಚಿತ ಯೋಜನೆಗಳ ಭರವಸೆ ನೀಡಿದೆ. ಇದನ್ನು ವಿರೋಧಿಸಿತ್ತಿದ್ದ ಬಿಜೆಪಿಯು ಸಹ ಉಚಿತ ಯೋಜನೆಗಳು ಇರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಹೌದು, ಬಿಜೆಪಿ ಹಿರಿಯ ನಾಯಕ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರು ಇಂದು ಗುರುವಾರ ಹರಿಯಾಣದ ರೋಹ್ತಕ್‌ನಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಇದನ್ನು ಉಚಿತ ಗ್ಯಾರೆಂಟಿಗಳು ಎನ್ನದೇ ಬಿಜೆಪಿ ಭರವಸೆ ಎಂಬ ಹೆಸರಿನಲ್ಲಿ ಭರಪೂರ ಕೊಡುಗೆ ಘೋಷಣೆ ಮಾಡಿದ್ದಾರೆ.

Haryana Assembly Election 2024 BJP has Releases Manifasto Know more

ಪ್ರಣಾಳಿಕೆಯ ಪ್ರಕಾರ, ಹರಿಯಾಣದಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಿದರೆ, ಮಹಿಳೆಯರಿಗೆ ಮಾಸಿಕವಾಗಿ 'ಲಾಡೋ ಲಕ್ಷ್ಮಿ ಯೋಜನೆ' ಹೆಸರಿನಲ್ಲಿ 2100 ರೂಪಾಯಿಗೆ ಸಹಾಯಧನವನ್ನು ನೇರ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯಡಿ 24 ಬೆಳೆಗಳನ್ನು ಖರೀದಿಸುವುದರ ಜೊತೆಗೆ ಮಹಿಳೆಗೆ ಮಾಸಿಕ ಹಣ ಹಾಕುವುದಾಗಿ ಅವರು ಭರವಸೆ ನೀಡಿದ್ದಾರೆ.

5ಲಕ್ಷ ಮನೆ, 02 ಲಕ್ಷ ಉದ್ಯೋಗ

ಹರ್ ಘರ್ ಗೃಹಿಣಿ ಯೋಜನೆಯಡಿ ಅಡುಗೆ ಅನಿಲವನ್ನು ಕೇವಲ 500 ರೂಪಾಯಿಗೆ ವಿತರಣೆ ಮಾಡಲಾಗುವುದು. ರಾಜ್ಯದ ಗ್ರಾಮೀಣ ಪ್ರದೇಶಗಳು ಮತ್ತು ನಗರದಲ್ಲಿ ಒಟ್ಟು 5ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗುವುದು. 02 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಿ, ನಿರುದ್ಯೋಗ ಹೋಗಲಾಡಿಸಲು ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.

ನೆನ್ನೆಯಷ್ಟೇ ಕಾಂಗ್ರೆಸ್ ಪಕ್ಷವು ಹರಿಯಾಣದಲ್ಲಿ ಮಹಿಳೆಯರಿಗೆ 2000 ರೂಪಾಯಿ ಸಹಾಯಧನ ನೀಡುವುದು ಸೇರಿದಂತೆ ಹಲವು ಉಚಿತ ಭರವಸೆ ಘೋಷಿಸಿದೆ. ಅದೇ ರೀತಿ ಇಂದು ಬೃಹತ್ ಕಾರ್ಯಕ್ರಮದಲ್ಲಿ ಸಚಿವ ಜೆ.ಪಿ ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಉಚಿತ ಭರವಸೆ ನೀಡಿದರು.

ರಾಜ್ಯದಲ್ಲಿ 1031 ಅಭ್ಯರ್ಥಿಗಳು ಕಣಕ್ಕೆ

ಹರಿಯಾಣದಲ್ಲಿ ಒಟ್ಟು 1031 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಂಡಾಯದ ಬಿಸಿ ಎದುರಿಸಿವೆ. ಇನ್ನೇನು ಚುನಾವಣೆಗೆ ನಡೆಯಲು ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 05ರಂದು ಒಂದೇ ಹಂತದಲ್ಲಿ ಹರಿಯಾಣದ 90 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಕ್ಟೋಬರ್ 08ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+