• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನಾಚರಣೆಗೆ ಅಪ್‌ಲೋಡ್‌ ಆದ ಸೆಲ್ಫಿಗಳೆಷ್ಟು?

|
Google Oneindia Kannada News

ನವದೆಹಲಿ, ಆಗಸ್ಟ್‌ 16: 'ಹರ್ ಘರ್ ತಿರಂಗಾ' ಅಭಿಯಾನದ ಹಿನ್ನೆಲೆಯಲ್ಲಿ ಸಂಸ್ಕೃತಿ ಸಚಿವಾಲಯ ತೆರೆದಿದ್ದ ವಿಶೇಷ ವೆಬ್‌ಸೈಟ್‌ನಲ್ಲಿ ಇದುವರೆಗೆ ಐದು ಕೋಟಿಗೂ ಹೆಚ್ಚು ತಿರಂಗ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗ' ಅಭಿಯಾನದ ಭಾಗವಾಗಲು ಜುಲೈ 22, 2022 ರಂದು ಕರೆ ನೀಡಿದ್ದರು. ಇದಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಹರ್‌ ಘರ್‌ ತಿರಂಗ ವೆಬ್‌ಸೈಟಿಗೆ ಬರೋಬ್ಬರಿ ಐದು ಕೋಟಿಗೂ ಹೆಚ್ಚು 'ತಿರಂಗಾ' ಸೆಲ್ಫಿಗಳನ್ನು ಅಪ್‌ಲೋಡ್ ಮಾಡಲಾಗಿದೆ" ಎಂದು ಸಂಸ್ಕೃತಿ ಸಚಿವಾಲಯ ಮಾಹಿತಿ ನೀಡಿದೆ. ಇದನ್ನು ಅದು "ಅದ್ಭುತ ಸಾಧನೆ" ಎಂದು ಬಣ್ಣಿಸಿದೆ.

ಸ್ವಾತಂತ್ರ್ಯ ದಿನದಂದು ಮೋದಿಗೆ ಸವಾಲು ಹಾಕಿದ್ದ ಹಳೇ ವಿಡಿಯೋ ವೈರಲ್ಸ್ವಾತಂತ್ರ್ಯ ದಿನದಂದು ಮೋದಿಗೆ ಸವಾಲು ಹಾಕಿದ್ದ ಹಳೇ ವಿಡಿಯೋ ವೈರಲ್

ಭಾರತ ಹರ್‌ ಘರ್‌ ತಿರಂಗದ ಅಭಿಯಾನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಪ್ರತಿಯೊಬ್ಬರ ಭಾಗವಹಿಸುವಿಕೆಯಿಂದಾಗಿ ಭಾನುವಾರ ಮಧ್ಯಾಹ್ನ ಸುಮಾರು 4 ಗಂಟೆಗೆ ಬರೋಬ್ಬರಿ 5 ಕೋಟಿ ತಿರಂಗ ಸೆಲ್ಫಿಗಳನ್ನು ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಲಾಗಿದೆ. 75 ವರ್ಷ ತುಂಬಿದ ಸ್ವಾತಂತ್ರ್ಯದ ಸ್ಮರಣಾರ್ಥ 12 ಮಾರ್ಚ್ 2021ರಂದು ಆರಂಭವಾದ ಸ್ವಾತಂತ್ರ್ಯ ಅಮೃತ ಮಹೋತ್ಸವವು 75 ವಾರಗಳನ್ನು ಮುಗಿಸಿ 15 ಆಗಸ್ಟ್ 2023 ರವರೆಗೆ ಮುಂದುವರಿಯುತ್ತದೆ.

ಸೋಮವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಹರ್‌ ಘರ್‌ ತಿರಂಗ ಐದು ಕೋಟಿ 'ತಿರಂಗ' ಸೆಲ್ಫಿಯ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಬ್ಬರ ಭಾಗವಹಿಸುವಿಕೆಗೆ ಧನ್ಯವಾದಗಳನ್ನು ಇಲಾಖೆ ತಿಳಿಸಿದೆ. ತ್ರಿವರ್ಣ ಧ್ವಜದೊಂದಿಗೆ ಆಳವಾದ ವೈಯಕ್ತಿಕ ಭಾವನೆ ಬೆಳೆಸಲು ಮೀಸಲಾಗಿರುವ ಈ ಅಭಿಯಾನವು ರಾಷ್ಟ್ರ ನಿರ್ಮಾಣದ ಬದ್ಧತೆಯಾಗಿ ಮನೆಯಲ್ಲಿ ಅಥವಾ ಅವರ ಕೆಲಸದ ಸ್ಥಳದಲ್ಲಿ ಧ್ವಜವನ್ನು ಹಾರಿಸುವಂತೆ ಎಲ್ಲ ಭಾರತೀಯರನ್ನು ವಿನಂತಿಸಿತ್ತು.

ಆನ್‌ಲೈನ್‌ ಸ್ವರೂಪದಲ್ಲಿ ಆಯೋಜನೆಗೊಂಡಿದ್ದ ಈ ಅಭಿಯಾನವು ಧ್ವಜದೊಂದಿಗೆ ಭಾವನಾತ್ಮಕ ಸಂಬಂಧವನ್ನು ಕಲ್ಪಿಸಿದೆ. ಅಭಿಯಾನದ ಹಿನ್ನೆಲೆಯಲ್ಲಿ ತೆರೆಯಲಾದ ಈ ವಿಶೇಷ ವೆಬ್‌ಸೈಟ್‌ನಲ್ಲಿ ಸೆಲ್ಫಿಯನ್ನು ಅಪ್‌ಲೋಡ್ ಮಾಡುವ ಮೂಲಕ ಸಾಮೂಹಿಕ ಆಚರಣೆ ಮಾಡಲು ಕೋರಲಾಗಿತ್ತು. ಅಲ್ಲದೆ ಇದು ದೇಶಭಕ್ತಿಯ ಉತ್ಸಾಹವನ್ನು ವರ್ಧಿಸುತ್ತದೆ ಎಂದು ಸಚಿವಾಲಯ ತಿಳಿಸಿತ್ತು.

ಭಾರತೀಯರ ಈ ಮೈಲಿಗಲ್ಲನ್ನು ಶ್ಲಾಘಿಸಿದ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, 5 ಕೋಟಿ ತಿರಂಗಾ ಸೆಲ್ಫಿಗಳು ರಾಷ್ಟ್ರವನ್ನು ಮೊದಲು ಮತ್ತು ಯಾವಾಗಲೂ ಮೊದಲ ಸ್ಥಾನದಲ್ಲಿಡಲು ಕರ್ತವ್ಯಬದ್ಧ ಭಾರತೀಯರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಇದಕ್ಕೆ ಭಾರತಕ್ಕೆ ಧನ್ಯವಾದಗಳು. ಇದು ಮಾತೃಭೂಮಿಗಾಗಿ ಜನರ ಪ್ರೀತಿ ಮತ್ತು ಸಾಮೂಹಿಕ ಅಭಿವ್ಯಕ್ತಿಗಳ ಪ್ರತಿಬಿಂಬಿಸುವ ವಿಶೇಷ ಕ್ಷಣವಾಗಿದೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಅವರು ಹೇಳಿದ್ದಾರೆ.

Har Ghar Tiranga: How many selfies were uploaded on Independence Day?

ಪ್ರಧಾನಮಂತ್ರಿಯವರು ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ "ಯುವಜನರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ರಾಷ್ಟ್ರದ ಅಭಿವೃದ್ಧಿಗೆ ಮುಡಿಪಾಗಿಡಬೇಕೆಂದು ಒತ್ತಾಯಿಸಿದ್ದರು. ನಾವು ಇಡೀ ಮಾನವಕುಲದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿಯಾಗಿದೆ ಎಂದು ಅವರು ಹೇಳಿದ್ದರು. ಧ್ವಜದೊಂದಿಗೆ 5 ಕೋಟಿ ಸೆಲ್ಫಿಗಳು ಭಾರತವನ್ನು ಅಗ್ರಸ್ಥಾನದಲ್ಲಿ ಇರಿಸಲು ಮತ್ತು ಭಾರತವನ್ನು ಸರ್ವೋಚ್ಚ ರಾಷ್ಟ್ರವನ್ನಾಗಿ ಮಾಡುವ ಐದು ಕೋಟಿ ಭರವಸೆಗಳಿಗೆ ಸಾಕ್ಷಿಯಾಗಿದೆ ಎನ್ನಲಾಗಿದೆ.

'ಹರ್ ಘರ್ ತಿರಂಗಾ' ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ತ್ರಿವರ್ಣ ಧ್ವಜವನ್ನು ಮನೆಯಲ್ಲಿ ಹಾರಿಸಲು ಮತ್ತು ಭಾರತದ 75ನೇ ಸ್ವಾತಂತ್ರ್ಯದ ವರ್ಷವನ್ನು ಆಚರಣೆಗೆ ಜನರನ್ನು ಪ್ರೋತ್ಸಾಹಿಸಲು ಆಯೋಜಿಸಲಾದ ಒಂದು ಅಭಿಯಾನವಾಗಿದೆ. 'ಹರ್ ಘರ್ ತಿರಂಗ' ಅಭಿಯಾನವು ಆಗಸ್ಟ್ 15 ರಂದು ಕೊನೆಗೊಂಡಿದೆ. ಈ ಕಾರ್ಯಕ್ರಮವು ಎಲ್ಲೆಡೆ ಭಾರತೀಯರನ್ನು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಉದ್ದೇಶವು ರಾಷ್ಟ್ರಧ್ವಜದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಸಾಂಸ್ಥಿಕವಾಗಿ ಇಟ್ಟುಕೊಳ್ಳುವ ಬದಲು ಹೆಚ್ಚು ವೈಯಕ್ತಿಕವಾಗಿಸುವುದಾಗಿತ್ತು.

Recommended Video

   ವೇದಿಕೆ ಮೇಲೆಯೇ ಆಂಕರ್ ಮೇಲೆ CM ಬೊಮ್ಮಾಯಿ ಕೋಪಗೊಳ್ಳಲು ಏನ್ ಕಾರಣ? | Oneindia Kannada
   English summary
   Har Ghar Tiranga: How many selfies were uploaded on Independence Day?, Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X