ಕೋಟಿ ಕೋಟಿ ಹಣವಿದ್ದರೂ ಐಷಾರಾಮಿ ಜೀವನ ಬೇಡ ಎಂದ 21ರ ಯುವತಿ: ಬಡ ವಿದ್ಯಾರ್ಥಿಗಳಿಗೆ ನಿರ್ಮಾಪಕಿ ಅನುಪ್ರಿಯಾ ನಗರ್ ಆಸರೆ

ಸಿನಿಮಾ ರಂಗದಲ್ಲಿ ಒಂದು ಹಿಟ್ ಸಿಕ್ರೆ ಸಾಕು, ರಾತ್ರೋರಾತ್ರಿ ಸ್ಟಾರ್ ಆಗುವವರೇ ಹೆಚ್ಚು. ಕೋಟಿ ಕೋಟಿ ಹಣ ಬಂದಾಗ ಸಹಜವಾಗಿಯೇ ದುಬಾರಿ ಕಾರು, ಐಷಾರಾಮಿ ಬಂಗಲೆ ಖರೀದಿಸುವುದು, ವಿದೇಶಿ ಪ್ರವಾಸ ಮಾಡುವುದು ಚಿತ್ರರಂಗದಲ್ಲಿ ಸಾಮಾನ್ಯ. ಆದರೆ, 'ಹನುಮಾನ್ ಅಂಶ್' ಸಿನಿಮಾದ ನಿರ್ಮಾಪಕಿ ಕೇವಲ 21 ವರ್ಷದ ಅನುಪ್ರಿಯಾ ನಗರ್ ಎಲ್ಲರಿಗಿಂತ ಭಿನ್ನವಾಗಿ ಆಲೋಚಿಸಿದ್ದಾರೆ.

2 ಕೋಟಿ ಬಜೆಟ್‌ನ ಹನುಮಾನ್‌ ಅಂಶ ಸಿನಿಮಾ ಬ್ಲಾಕ್‌ಬಸ್ಟರ್ ಆದ ನಂತರ ಬಂದಿರುವ ಭಾರಿ ಲಾಭವನ್ನ ನಿರ್ಮಾಪಕಿ ಅನುಪ್ರಿಯಾ ತಮ್ಮ ಐಷಾರಾಮಿ ಜೀವನಕ್ಕೆ ಬಳಸಿಕೊಳ್ಳದೆ, ಸಮಾಜದ ಒಳಿತಿಗಾಗಿ ಹಾಗೂ ಬಡ ವಿದ್ಯಾರ್ಥಿಗಳ ನೆರವಿಗೆ ಬಳಸಲು ನಿರ್ಧರಿಸುವ ಮೂಲಕ ಕೇವಲ ಚಿತ್ರರಂಗ ಮಾತ್ರವಲ್ಲ, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

Hanuman Ansh Producer Anupriya Nagar Donates Blockbuster Movie Wealth to Underprivileged Students

ಹನುಮಾನ್ ಅಂಶ್ ನಿರ್ಮಾಪಕಿ: ಕಿರಿಯ ವಯಸ್ಸಿನಲ್ಲಿ ಒಳ್ಳೆಯ ಸಾಧನೆ

ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಕೇವಲ 21ನೇ ವಯಸ್ಸಿಗೆ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ, ಸಕ್ಸಸ್ ಕಾಣುವುದು ನಿಜಕ್ಕೂ ಅದ್ಭುತ. ಅನುಪ್ರಿಯಾ ನಗರ್ ನಿರ್ಮಾಣದ ಹನುಮಾನ್ ಅಂಶ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿದ್ದು, ನಿರೀಕ್ಷೆಗೂ ಮೀರಿದ ಹಣ ಗಳಿಸಿದೆ.

ಈ ಯಶಸ್ಸಿನ ಬಗ್ಗೆ ಮಾತನಾಡಿರುವ ಅನುಪ್ರಿಯಾ, ಇಷ್ಟು ಕಿರಿಯ ವಯಸ್ಸಿನಲ್ಲಿ ತಾವು ಇಷ್ಟು ದೊಡ್ಡ ಮೊತ್ತದ ಹಣವನ್ನ ನೋಡೇ ಇರಲಿಲ್ಲ ಹಾಗೂ ನಿರ್ವಹಣೆಯೂ ಮಾಡಿರಲಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಈ ವಯಸ್ಸಿಗೆ ಇಷ್ಟೊಂದು ಹಣ ಕೈಸೇರಿದಾಗ ಯಾರಿಗಾದರೂ ದಾರಿ ತಪ್ಪುವ ಅಥವಾ ಅಹಂಕಾರ ಬರುವ ಸಾಧ್ಯತೆ ಇರುತ್ತದೆ.

ಆದರೆ, ಈ ಯುವ ನಿರ್ಮಾಪಕಿ ತಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಮೆರೆದಿದ್ದಾರೆ. ಇಂದಿನ ಯುವಜನತೆ ಕೇವಲ ಶೋಕಿಗಾಗಿ ಹಣ ಪೋಲು ಮಾಡುತ್ತಾರೆ ಎಂಬ ಮಾತಿಗೆ ಇವರು ತದ್ವಿರುದ್ಧವಾಗಿ ನಿಂತಿದ್ದಾರೆ.

ವಿಲಾಸಿ ಜೀವನ ಬಿಟ್ಟು ಅನುಪ್ರಿಯಾ ನಗರ್ ಸಮಾಜ ಸೇವೆ

ಸಾಮಾನ್ಯವಾಗಿ ಇತರ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಸೂಪರ್ ಹಿಟ್ ಆದಾಗ ಐಷಾರಾಮಿ ಮನೆಗಳನ್ನ ಅಥವಾ ದುಬಾರಿ ಬೆಲೆಯ ಕಾರುಗಳನ್ನ ಖರೀದಿಸುತ್ತಾರೆ. ಇದು ಚಿತ್ರರಂಗದ ವಾಡಿಕೆಯೂ ಹೌದು. ಆದರೆ, ಅನುಪ್ರಿಯಾ ನಗರ್ ಮಾತ್ರ ಆ ದಾರಿಯಲ್ಲಿ ಹೋಗಲಿಲ್ಲ. ಬದಲಿಗೆ, ತಾವು ಗಳಿಸಿದ ಹಣವನ್ನ ಮರಳಿ ಸಮಾಜಕ್ಕೆ ನೀಡುವ ಶ್ರೇಷ್ಠ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

"ನನಗೆ ಐಷಾರಾಮಿ ಜೀವನದ ಬಗ್ಗೆ ಆಸಕ್ತಿ ಇಲ್ಲ, ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು" ಎಂಬುದು ಅವರ ದಿಟ್ಟ ನಿಲುವು. ಅವರ ಈ ನಡೆ ಚಿತ್ರರಂಗದ ದಿಗ್ಗಜರಿಗೂ, ಕೋಟಿಗಟ್ಟಲೆ ಹಣ ಸಂಪಾದಿಸಿ ಸ್ವಾರ್ಥಕ್ಕಾಗಿ ಬದುಕುವವರಿಗೂ ದೊಡ್ಡ ಮಾದರಿಯಾಗಿದೆ. ಸಮಾಜದಿಂದ ನಾವು ಪಡೆದದ್ದನ್ನ, ಮತ್ತೆ ಸಮಾಜಕ್ಕೇ ಮರಳಿಸಬೇಕು ಎಂಬ ತತ್ವವನ್ನ ಇವರು ಅಳವಡಿಸಿಕೊಂಡಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಸಹಾಯ: ಮಹಾರಾಜ್ ಜೀ ಭಕ್ತರ ಹರ್ಷ

ತಮ್ಮ ಬಳಿ ಇರುವ ಹಣವನ್ನ ನಿರ್ಗತಿಕರು ಮತ್ತು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಲು ಅನುಪ್ರಿಯಾ ಮುಂದಾಗಿದ್ದಾರೆ. ಹಣಕಾಸಿನ ತೊಂದರೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಉದ್ದೇಶ ಅವರದ್ದಾಗಿದೆ. ಅನುಪ್ರಿಯಾ ಅವರ ಈ ಒಳ್ಳೆಯ ಗುಣ, 'ಮಹಾರಾಜ್ ಜೀ' ಅವರ ಭಕ್ತರ ಭಕ್ತಿಭಾವ ಮತ್ತು ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಜನರೂ ಕೂಡ ಈ ವಿಚಾರವನ್ನ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. "ನಾವು ಸರಿಯಾದ ಹುಡುಗಿಯನ್ನ ಫೇಮಸ್ ಮಾಡಿದ್ದೇವೆ, ಮಹಾರಾಜ್ ಜೀ ಕೂಡ ಈ ಕೆಲಸವನ್ನು ನೋಡಿ ತುಂಬಾ ಸಂತೋಷಪಡುತ್ತಾರೆ" ಎಂದು ಕಾಮೆಂಟ್ ಮಾಡುವ ಮೂಲಕ ಈ ನಿರ್ಮಾಪಕಿಯನ್ನ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ಒಟ್ಟಿನಲ್ಲಿ, ಕೇವಲ ಹಣ ಗಳಿಸುವುದಷ್ಟೇ ಅಲ್ಲ, ಆ ಹಣವನ್ನ ಹೇಗೆ ಸಾರ್ಥಕವಾಗಿ ಬಳಸಬೇಕು ಎಂಬುದನ್ನ ಕೇವಲ 21 ವರ್ಷದ ಅನುಪ್ರಿಯಾ ನಗರ್ ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಇವರ ಈ ಸೇವಾ ಕಾರ್ಯ ಇನ್ನಷ್ಟು ಬಡ ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾಗಲಿ ಹಾಗೂ ಇವರ ಈ ಶ್ರೇಷ್ಠ ಗುಣ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂಬುದೇ ಎಲ್ಲರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+