ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ ಡೊನಾಲ್ಡ್ ಹಿಂದಕ್ಕೆ ಹಾಕಿದ ಹಲ್ದಿರಾಮ್

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಪಿಜ್ಜಾ, ಬರ್ಗರ್ ಮಾರಾಟವಾಡುವ ಅಮೆರಿಕದ ದೊಡ್ಡ ಸಂಸ್ಥೆಯ ಆದಾಯವನ್ನು ಮೀರಿ ರಾಜಸ್ಥಾನ ಮೂಲದ 'ಖಾರ ಸೇವು' ಸೇರಿದಂತೆ ಕುರುಕುಲು ತಿಂಡಿ ಮಾರುವ ಭಾರತದ ಕಂಪನಿ ಬೆಳೆದಿದೆ. ಹೌದು, ಮೆಕ್ ಡೋನಾಲ್ಡ್ ಸಂಸ್ಥೆಯನ್ನು ರಾಜಸ್ಥಾನದ ಬಿಕಾನೇರ್ ನಲ್ಲಿ ಆರಂಭವಾದ ಹಲ್ದಿರಾಮ್ ಸಂಸ್ಥೆ ಸೋಲಿಸಿದೆ.

ಅಮೆರಿಕದ ಫಾಸ್ಟ್ ಪುಡ್ ಸಂಸ್ಥೆಗಳಾದ ಡೋಮಿನೋಸ್, ಮೆಕ್ ಡೋನಾಲ್ಡ್ ಎರಡು ಸೇರಿ ಗಳಿಸುತ್ತಿರುವ ಆದಾಯವನ್ನು ಮೀರಿ ಹಲ್ದಿರಾಮ್ ಬೆಳೆದಿದೆ. ಹಲ್ದಿರಾಮ್ ಸಂಸ್ಥೆಯ ವಾರ್ಷಿಕ ಆದಾಯ 4,000 ಕೋಟಿ ರು ದಾಖಲಾಗಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

 Haldiram beats McDonald's with an annual turnover of Rs 4,000 crore

ಭಾರತದಲ್ಲಿ ಪಾರ್ಲೆ ನಂತರ ಹಲ್ದಿರಾಮ್ ಅತಿದೊಡ್ಡ ಸಂಸ್ಥೆ ಎನಿಸಿಕೊಂಡಿದೆ. ಕುರುಕುಲು (ಸ್ನಾಕ್ಸ್) ಮಾರುಕಟ್ಟೆಯಲ್ಲಿ ಬಾಲಾಜಿ ವೇಫರ್ಸ್, ಪ್ರತಾಪ್ ಸ್ನಾಕ್ಸ್, ಬಿಕಾನೇರ್ ವಾಲ,ಬಿಕಾಜಿ ಫುಡ್ಸ್ ಹಾಗೂ ಡಿಎಫ್ಎಂ ಫುಡ್ ಇನ್ನಿತರ ಸ್ಪರ್ಧಿಗಳಾಗಿದ್ದಾರೆ.

ಗುಣಮಟ್ಟ ಕಾಯ್ದುಕೊಂಡಿರುವುದರಿಂದ ಗ್ರಾಹಕರನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹಲ್ದಿರಾಮ್ಸ್ ನ ಕಮಲ್ ಅಗರವಾಲ್ ಅವರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.

English summary
Haldiram’s, a business venture which started with a small shop in Rajasthan’s Bikaner, is now the biggest snacks maker in India, with an annual turnover of Rs 4,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X