ಮಹಾರಾಷ್ಟ್ರದಲ್ಲಿ ವಿಚಿತ್ರ ಕಾಯಿಲೆ: ಉದುರುತ್ತಿವೆ ಜನರ ಕೂದಲು, ಉಗುರುಗಳು
ಮುಂಬೈ ಏಪ್ರಿಲ್ 18: ಮಹಾರಾಷ್ಟ್ರದಲ್ಲಿ ವಿಚಿತ್ರ ಮತ್ತು ಭಯಾನಕ ಕಾಯಿಲೆಯೊಂದು ಹರಡಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನರಿಗೆ ಏಕಾಏಕಿ ತಲೆ ಕೂದಲು ಉದುರುತ್ತಿದ್ದು ಬೆರಳಿನ ಉಗುರುಗಳು ಕಿತ್ತಿಕೊಂಡು ಬರುತ್ತಿವೆ. ಜನ ಇದನ್ನು ಸಾಮಾನ್ಯ ಎಂದು ಭಾವಿಸಿದರೂ ಕೆಲ ತಿಂಗಳುಗಳಿಂದ ಈ ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಆತಂಕಗೊಂಡಿದ್ದಾರೆ.
ಹೌದು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಶೇಗಾಂವ್‌ನ ಹಲವಾರು ಹಳ್ಳಿಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಡಿಸೆಂಬರ್ 2024ರ ಆರಂಭದಲ್ಲಿ ಬಾಂಡ್‌ಗಾಂವ್ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 300 ಜನರಿಗೆ ಏಕಾಏಕಿ ಕೂದಲು ಉದುರಲು ಆರಂಭಿಸಿದೆ. ಮೊದಲಿಗೆ ಜನರು ಇದು ಸಾಮಾನ್ಯ ಕೂದಲು ಉದುರುವಿಕೆ ಸಮಸ್ಯೆ ಎಂದು ಭಾವಿಸಿದ್ದರು.

ಆದರೆ ಈ ಘಟನೆ ನೂರಾರು ಜನರಿಗೆ ಏಕಕಾಲದಲ್ಲಿ ಸಂಭವಿಸಿದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇದಾಗಿ ಕೆಲವು ತಿಂಗಳುಗಳ ನಂತರ ಮತ್ತೊಂದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಲ್ಲಿನ ಜನರಿಗೆ ಈಗ ತಲೆ ಕೂದಲ ಜೊತೆಗೆ ಉಗುರುಗಳು ಉದುರಲು ಪ್ರಾರಂಭಿಸಿವೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಉಗುರು ಉದುರುವಿಕೆಯಿಂದ ಹೆಚ್ಚಿದ ಕಳವಳ
ಡಿಸೆಂಬರ್ ಕೊನೆಯ ವಾರದಲ್ಲಿ ಜನರಿಗೆ ಕೂದಲು ಉದುರುವಿಕೆ ಪ್ರಾರಂಭವಾಯಿತು. ಕಳೆದ ಕೆಲವು ದಿನಗಳಿಂದ ಉಗುರುಗಳು ಸಹ ಉದುರಲು ಪ್ರಾರಂಭಿಸಿವೆ ಎಂದು ಬಾಂಡ್‌ಗಾಂವ್‌ನ ಸರಪಂಚ್ ರಾಮೇಶ್ವರ್ ಧಾರ್ಕರ್ ಹೇಳಿದ್ದಾರೆ. ಈ ಸಮಸ್ಯೆ ಕ್ರಮೇಣ ಖಟ್ಖೇರ್, ಭೋಂಗಾವ್ ಮತ್ತು ಇತರ ಗ್ರಾಮಗಳಿಗೂ ಹರಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ವೈದ್ಯರ ತಂಡ ಹಳ್ಳಿಗಳನ್ನು ತಲುಪಿ ತನಿಖೆ ಪ್ರಾರಂಭಿಸಿದೆ. ಪ್ರಾಥಮಿಕ ತನಿಖೆಯಲ್ಲಿ 29 ಜನರಲ್ಲಿ ಉಗುರು ಬಿದ್ದು ವಿರೂಪಗೊಂಡಿರುವುದು ದೃಢಪಟ್ಟಿದೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಪರೀಕ್ಷೆಗಾಗಿ ಶೇಗಾಂವ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹೆಚ್ಚುವರಿ ಸೆಲೆನಿಯಮ್ ಈ ಕಾಯಿಲೆಗೆ ಕಾರಣ
ದೇಹದಲ್ಲಿ ಹೆಚ್ಚುವರಿ ಸೆಲೆನಿಯಂ ಇರುವುದರಿಂದ ಈ ಕಾಯಿಲೆ ಉಂಟಾಗಬಹುದು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಸೆಲೆನಿಯಮ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿದ್ದರೆ ಪ್ರಯೋಜನಕಾರಿಯಾಗಿದೆ. ಆದರೆ ಅದು ಅಧಿಕವಾದರೆ ಹಾನಿಕಾರಕವಾಗಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮೋಲ್ ಗೀತೆ ಮಾತನಾಡಿ, ಸೆಲೆನಿಯಂ ಮಟ್ಟ ಹೆಚ್ಚಾಗುವುದು ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣವಾಗಿರಬಹುದು. ಇದಿನ್ನು ದೃಢವಾಗಬೇಕಿದೆ. ಹೀಗಾಗಿ ಬಾಧಿತ ಜನರನ್ನು ವಿಶೇಷ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ಪಡಿತರ ಗೋಧಿಯಿಂದ ಕಾಯಿಲೆ
ಆಘಾತಕಾರಿ ವಿಷಯವೆಂದರೆ ಈ ರೋಗ ಸರ್ಕಾರದ ಪಡಿತರ ಮೂಲಕ ಒದಗಿಸುವ ಗೋಧಿಯಿಂದ ಬಂದರಬಹುದು ಎಂದು ಹೇಳಲಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣದಿಂದ ಈ ಗ್ರಾಮಗಳಿಗೆ ಕಳುಹಿಸಲಾದ ಗೋಧಿಯಲ್ಲಿ ಸ್ಥಳೀಯ ಗೋಧಿಗಿಂತ 600 ಪಟ್ಟು ಹೆಚ್ಚಿನ ಸೆಲೆನಿಯಮ್ ಮಟ್ಟವಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ಕಾರಣಕ್ಕಾಗಿ ಈ ಗೋಧಿ ಈ ರೋಗದ ಮೂಲ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯಿಂದ ಇದು ವೈರಸ್ ಅಲ್ಲದಿರಬಹುದು ಆದರೆ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿರುವ ಸೆಲೆನಿಯಮ್ ವಿಷತ್ವದ ಪ್ರಕರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications