Get Updates
Get notified of breaking news, exclusive insights, and must-see stories!

'ಬಾಬಾ ಜತೆಗೆ ಹನಿಪ್ರೀತ್ ಬೆತ್ತಲಾಗಿದ್ದಿದ್ದನ್ನು ನೋಡಿದ್ದೇನೆ'

"ಬಾಬಾ ರಾಮ್ ರಹೀಮ್ ಜತೆಗೆ ಹನಿಪ್ರೀತ್ ಒಟ್ಟಿಗೆ ಮಲಗಿದ್ದನ್ನು ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು, ಅಷ್ಟೇ ಅಲ್ಲ ಆಕೆ ಬಾಬಾ ಜತೆಗೆ ಬೆತ್ತಲೆಯಾಗಿ ಇದ್ದಿದ್ದನ್ನು ನೋಡಿದ್ದೇನೆ" ಎಂದು ಬಾಬಾ ರಾಮ್ ರಹೀಮ್ ನ 'ದತ್ತು ಪುತ್ರಿ' ಎನ್ನಲಾದ ಹನಿಪ್ರೀತ್ ಳ ಮಾಜಿ ಪತಿ ವಿಶ್ವಾಸ್ ಗುಪ್ತಾ ಶುಕ್ರವಾರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಆರೋಪಗಳನ್ನು ಮಾಡಿದ್ದಾರೆ. ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಛಾ ಸೌಧದ 'ಗುಹೆ' ಎಂದು ಕರೆಯುವ ಬಾಬಾ ರಹೀಮ್ ನ ಕೋಣೆಯಲ್ಲೇ ಹನಿಪ್ರೀತ್ ಮಲಗುತ್ತಿದ್ದಳು. ಆಕೆ ಕೋಣೆಯಲ್ಲಿರುವಾಗ ತನಗೆ ಹೊರಗಿರುವಂತೆ ಬಾಬಾ ಹೇಳುತ್ತಿದ್ದ. ಈ ಬಗ್ಗೆ ಹೊರಗೆಲ್ಲೂ ಬಾಯಿ ಬಿಡಬೇಡ ಎಂದು ಧಮಕಿ ಹಾಕಿದ್ದ ಎಂದು ಕೂಡ ವಿಶ್ವಾಸ್ ಹೇಳಿದ್ದಾರೆ.

ಬಾಬಾನ ಗುಹೆಯಲ್ಲಿ ನಮಗೆ ಬಿಗ್ ಬಾಸ್ ನಂತೆ ಆಟವಾಡಿಸುತ್ತಿದ್ದ. ನಾವು ಆರು ಜೋಡಿಗಳು (ಕುಟುಂಬ ಸದಸ್ಯರು) ಇಪ್ಪತ್ತೆಂಟು ದಿನ ಕಳೆದಿದ್ದೆವು. ಹನಿಪ್ರೀತ್ ಳನ್ನು ಕಾನೂನುಬದ್ಧವಾಗಿ ದತ್ತು ಸ್ವೀಕರಿಸಿಲ್ಲ. ನನ್ನನ್ನು ಕೊಲ್ಲಲು ಬಾಬಾ ಆದೇಶ ನೀಡಿದ್ದ ಎಂಬ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಬಾಬಾ ಜತೆಗೆ ಹನಿಪ್ರೀತ್ ಹೆಂಡತಿಯಂತೆಯೇ ಇದ್ದಾಳೆ

ಬಾಬಾ ಜತೆಗೆ ಹನಿಪ್ರೀತ್ ಹೆಂಡತಿಯಂತೆಯೇ ಇದ್ದಾಳೆ

2009ರಿಂದಲೂ ಬಾಬಾ ಜತೆಗೆ ಹನಿಪ್ರೀತ್ ಹೆಂಡತಿಯಂತೆಯೇ ಇದ್ದಾಳೆ. ಬೇಕಾದರೆ ಡೇರಾದ ದಾಖಲೆಗಳನ್ನು ಪರಿಶೀಲಿಸಿ. 2009ಕ್ಕೂ ಮುಂಚೆ ಆಡಳಿತದಲ್ಲಿ ಉನ್ನತ ಸ್ಥಾನಗಳನ್ನು ಪುರುಷರಿಗೇ ನೀಡಲಾಗುತ್ತಿತ್ತು. ಆದರೆ ಆ ನಂತರ ಹನಿಪ್ರೀತ್ ಡೇರಾದ ಮುಖ್ಯ ಸ್ಥಾನಗಳನ್ನು ನಿರ್ವಹಿಸಲು ಆರಂಭಿಸಿದಳು ಎಂದು ಗುಪ್ತಾ ಹೇಳಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ

ವಿಚ್ಛೇದನಕ್ಕೆ ಅರ್ಜಿ

ಹನಿಪ್ರೀತ್ ಳನ್ನು 2009ರಲ್ಲಿ ರಾಮ್ ರಹೀಮ್ ದತ್ತು ಸ್ವೀಕರಿಸಿದ್ದ. ಆಕೆಯ ಮುಂಚಿನ ಹೆಸರು ಪ್ರಿಯಾಂಕಾ ತನೇಜಾ. ಇನ್ನು ಹನಿಪ್ರೀತ್ ಳನ್ನು ವಿಶ್ವಾಸ್ ಗುಪ್ತಾ ಮದುವೆಯಾಗಿದ್ದು 1999ರಲ್ಲಿ. 2011ರಲ್ಲಿ ಅವರಿಬ್ಬರಿಗೆ ವಿಚ್ಛೇದನವಾಯಿತು. ರಾಮ್ ರಹೀಮ್- ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಕಾರಣಕ್ಕೆ ವಿಶ್ವಾಸ್ ಗುಪ್ತಾ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

"ನನ್ನ ಅರ್ಜಿಯಲ್ಲಿ ರಾಮ್ ರಹೀಮ್ ಉಳಿದುಕೊಳ್ಳುತ್ತಿದ್ದ ವಸತಿ ಬಗ್ಗೆ ವಿವರವಾಗಿ ತಿಳಿಸಿದ್ದೆ. ಆದರೆ ಹನಿಪ್ರೀತ್ ಳಿಂದ ಬೇರೆ ಆದ ನಂತರ ಆ ಸ್ಥಳ ಹೇಗಿದೆ ಎಂಬುದು ನನಗೆ ಗೊತ್ತಿಲ್ಲ" ಎಂದಿದ್ದಾರೆ ವಿಶ್ವಾಸ್.

ಸುಳ್ಳು ವರದಕ್ಷಿಣೆ ಕೇಸು

ಸುಳ್ಳು ವರದಕ್ಷಿಣೆ ಕೇಸು

"ಆತನಿಂದ ನಾನು ಬಹಳ ಅನುಭವಿಸಿಬಿಟ್ಟೆ. ಮದುವೆಯಾದ ಹನ್ನೊಂದು ವರ್ಷದ ನಂತರ ನನ್ನ ಮೇಲೆ ಸುಳ್ಳು ವರದಕ್ಷಿಣೆ ದೂರು ದಾಖಲಿಸಲಾಯಿತು. ಕೊನೆಗೆ ನಾನು ಅವರ ಕ್ಷಮೆ ಕೇಳಬೇಕಾಯಿತು" ಎಂದು ಅಲವತ್ತುಕೊಂಡಿದ್ದಾರೆ. ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ ನಂತರ ಎರಡು ಲಕ್ಷ ರುಪಾಯಿ ವರದಕ್ಷಿಣೆ ಪಡೆದಿದ್ದಾರೆ ಎಂದು ವಿಶ್ವಾಸ್ ಮೇಲೆ ದೂರು ದಾಖಲಿಸಲಾಗಿತ್ತು.

ಮನೆಗೆ ತೆರಳಿದ ಮೇಲೂ ಕಣ್ಗಾವಲು

ಮನೆಗೆ ತೆರಳಿದ ಮೇಲೂ ಕಣ್ಗಾವಲು

ಡೇರಾದಿಂದ ಆಚೆ ಬಂದು, ಪಂಚ್ ಕುಲದಲ್ಲಿನ ಮನೆಯಲ್ಲಿ ಇದ್ದಾಗಲೂ ಬಾಬಾನ ಆಣತಿ ಮೇಲೆ ನನ್ನ ಚಲನವಲನದ ಮೇಲೆ ಕೆಲವರು ಕಣ್ಣಿಟ್ಟಿದ್ದರು. ನಾನು ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಿದ ಮೇಲೆ ಅವರು ಏಳು ಮಂದಿಯನ್ನು ಬಂಧಿಸಿದ್ದರು ಎಂದಿದ್ದಾರೆ ವಿಶ್ವಾಸ್.

ಬಾಬಾ ಈಗಲೂ ಪ್ರಭಾವಿ

ಬಾಬಾ ಈಗಲೂ ಪ್ರಭಾವಿ

ಬಾಬಾ ಯಾವ ಕಾರಿನಲ್ಲಿ ಪ್ರಯಾಣ ಮಾಡುತ್ತಾನೋ ಅದರಲ್ಲಿ ಶಸ್ತ್ರಾಸ್ತ್ರಗಳ ಬಾಕ್ಸ್ ಇಡಲಾಗುತ್ತಿತ್ತು. ರಾಮ್ ರಹೀಮ್ ಜೈಲಿನಲ್ಲೇ ಇರಬಹುದು. ಆದರೆ ಆತ ಈಗಲೂ ಪ್ರಭಾವಿ. ಈ ಪತ್ರಿಕಾಗೋಷ್ಠಿ ಮುಗಿಸಿಕೊಂಡು ಹೋದ ಮೇಲೆ ನನಗೇನಾಗುತ್ತದೋ ಗೊತ್ತಿಲ್ಲ ಎಂದು ವಿಶ್ವಾಸ್ ಆತಂಕ ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+