ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ, 24 ಮಂದಿಗೆ ಜೀವಾವಧಿ

Posted By:
Subscribe to Oneindia Kannada

ಅಹಮದಾಬಾದ್, ಜೂನ್ 02: ಗೋಧ್ರಾ ಹಿಂಸಾಚಾರದ ಬಳಿಕ ಸಂಭವಿಸಿದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ತೀರ್ಪು ಪ್ರಕಟಗೊಂಡಿದೆ. ಅಹಮದಾಬಾದ್ ವಿಶೇಷ ನ್ಯಾಯಾಲಯವು ಗುರುವಾರ ಪ್ರಕಟಿಸಿದ ತೀರ್ಪಿನಂತೆ ಪ್ರಕರಣದಲ್ಲಿ ಬಂಧನಕ್ಕೊಳಗಾದ 66 ಮಂದಿ ಆರೋಪಿಗಳ ಪೈಕಿ 24 ಮಂದಿಯ ಮೇಲಿನ ಆರೋಪ ಸಾಬೀತಾಗಿದೆ. 36 ಮಂದಿಗೆ ಖುಲಾಸೆ ಸಿಕ್ಕಿದೆ.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾ.ಪಿಬಿ ದೇಸಾಯಿ ಅವರು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಕಾರ್ಪೋರೇಟರ್ ಬಿಪಿನ್ ಪಟೇಲ್, ವಿಎಎಚ್ ಪಿ ನಾಯಕ ಅತುಲ್ ವೈದ್ಯ ಸೇರಿ 36 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. 24 ಮಂದಿ ಮೇಲೆ ಆರೋಪ ಸಾಬೀತಾಗಿದೆ, ಜೂನ್ 06ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದಾರೆ.

Gulbarg society massacre: Court convicts 24, acquits 36

24 ಮಂದಿಗಳ ಪೈಕಿ 11 ಜನರ ಮೇಲೆ ಕೊಲೆ ಆರೋಪ ಸಾಬೀತಾಗಿದ್ದರೆ, ಉಳಿದ 13 ಮಂದಿ ಮೇಲೆ ಇತರ ಆರೋಪಗಳು ಸಾಬೀತಾಗಿದೆ. ಕೊಲೆ ಆರೋಪದಲ್ಲಿ ದೋಷಿಗಳಾಗಿರುವ 13 ಮಂದಿ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಇತರೆ ಆರೋಪ ಸಾಬೀತಾದ 13 ಮಂದಿಗೆ ಸಾಮಾನ್ಯ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.[ಗುಜರಾತ್ ಹಿಂಸಾಚಾರ: ಮೋದಿಗೆ ಎಸ್‌ಐಟಿ ಕ್ಲೀನ್‌ಚಿಟ್]

ಪ್ರಕರಣದ ಹಿನ್ನಲೆ: ಗೋದ್ರಾ ಹತ್ಯಾಕಾಂಡದ ಪ್ರತೀಕಾರವಾಗಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ನಡೆದಿದ್ದು, 2002 ಫೆ.28ರಂದು ನಡೆದ ಹತ್ಯಾಕಾಂಡದಲ್ಲಿ 10 ಅಪಾರ್ಟ್ಮೆಂಟ್, 29ಬಂಗಲೆಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಕಾಂಗ್ರೆಸ್ ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿಯನ್ನು ಹತ್ಯೆ ಮಾಡಿದ್ದರು.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ, 36 ಮಂದಿಗೆ ಖುಲಾಸೆ

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ, 36 ಮಂದಿಗೆ ಖುಲಾಸೆ

-
-
-

ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ನಡೆಸಿತ್ತು. ಎಸ್‍ಐಟಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಹೆಸರಿಸಿದ್ದ ಆರೋಪಿಗಳ ಪೈಕಿ 9 ಮಂದಿ 14 ವರ್ಷಗಳಿಂದ ಜೈಲಿನಲ್ಲಿದ್ದರು. ಉಳಿದವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಹಿಂಸಾಚಾರದಲ್ಲಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಭಾಗಿಯಾಗಿದ್ದಾರೆ ಎಂಬುದನ್ನು ದೃಢಪಡಿಸುವ ನಿಟ್ಟಿನಲ್ಲಿ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಅಂದಿನ ಎಸ್ ಐಟಿ ಮುಖ್ಯಸ್ಥ ರಾಘವನ್ ಅವರು ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A special court in Ahmedabad has convicted 24 persons and acquitted 36 in connection with the Gulbarg massacre case in which 69 persons were killed. The special court while delivering its verdict convicted 11 out of the 24 persons for murder.
Please Wait while comments are loading...