ಮುನ್ನಡೆ, ಹಿನ್ನಡೆಯ ತೂಗುಯ್ಯಾಲೆ, ಬಿಜೆಪಿಗೆ ನೀತಿಪಾಠ!
Recommended Video

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದ ಬಿಜೆಪಿ ಸದ್ಯಕ್ಕೆ ದಂಗಾಗಿ ಕೂತಿದೆ! ಬಿಜೆಪಿಗೆ ಸರಳ ಬಹುಮತ ಸಿಕ್ಕುವುದು ಕಷ್ಟವಾಗಲಾರದು ಅನ್ನಿಸಿದರೂ, ಕಾಂಗ್ರೆಸ್ ನೀಡುತ್ತಿರುವ ಸ್ಪರ್ಧೆಯನ್ನು ನೋಡಿದರೆ 22 ವರ್ಷಗಳ ಬಿಜೆಪಿ ಆಡಳಿತ ಗುಜರಾತ್ ಜನರಿಗೆ ತೃಪ್ತಿ ತಂದಿಲ್ಲವೇನೋ ಅನ್ನಿಸೋದು ಸುಳ್ಳಲ್ಲ.
ಗುಜರಾತ್ ಫಲಿತಾಂಶದ ಹಿನ್ನಡೆ, ಮುನ್ನಡೆಯ ತೂಗುಯ್ಯಾಲೆಯಲ್ಲಿ ತೂಗುತ್ತಿರುವ ಬಿಜೆಪಿಯನ್ನು ಟ್ವಿಟ್ಟರ್ ನಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪೂರ್ಣ ಫಲಿತಾಂಶ ಇನ್ನೂ ಹೊರಬೀಳದಿದ್ದರೂ ಕಾಂಗ್ರೆಸ್ ವಿರುದ್ಧ ಗೆಲ್ಲುವುದಕ್ಕೆ ಹೆಣಗಾಡುತ್ತಿರುವ ಬಿಜೆಪಿಯ ಸ್ಥಿತಿಯನ್ನು ಕಂಡ ಹಲವರು, ಇದು ಬಿಜೆಪಿಗೆ ನೀತಿಪಾಠ ಎಂದು ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಗೆಲ್ಲಲಿ, ಬಿಡಲಿ ಆದರೆ ಮೋದಿಯವರ ಬಿಜೆಪಿ ಮಾತ್ರ ಸೋಲೋದು ಖಂಡಿತ ಎಂದು ಟ್ವಿಟ್ಟಿಗರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಫಲಿತಾಂಶ ಬಿಜೆಪಿ ತನ್ನ ಸಾಮರ್ಥ್ಯವನ್ನು, ಸಾಧನೆಯನ್ನು ನಿಕಷಕ್ಕೆ ಹಚ್ಚುವುದಕ್ಕೆ ಕಾಲಕೂಡಿಬಂದಿರುವುದರ ಸಂಕೇತ ಎಂದು ಕೆಲವರು ಹೇಳಿದ್ದಾರೆ.
|
ಇದು ಪರಿವರ್ತನೆಯತ್ತ ಒಂದು ಹೆಜ್ಜೆ
ಕಾಂಗ್ರೆಸ್ ಗೆಲ್ಲಲಿ, ಸೋಲಲಿ, ಅದು ದೊಡ್ಡ ವಿಷಯವಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲುವುದು ಖಂಡಿತ. ಇದು ಪರಿವರ್ತನೆಯತ್ತ ಮೊದಲ ಹೆಜ್ಜೆ ಎಂದು ರಾವ್ ಗೋಪಾಲ ರಾವ್ ಟ್ವೀಟ್ ಮಾಡಿದ್ದಾರೆ.
|
ಬಿಜೆಪಿಗೆ ಎಚ್ಚರಿಕೆಯ ಗಂಟೆ!
ಗುಜರಾತ್ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ ಎಂಬುದು ಅರ್ಥವಾಗಲಿ. ಬಿಜೆಪಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮನಸ್ಸಿದ್ದರೆ ಅಲ್ಪಸಂಖ್ಯಾತರ ಓಲೈಕೆಯನ್ನು ನಿಲ್ಲಿಸಬೇಕು ಎಂದು ಡಾ.ಲತಾ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಬಿಜೆಪಿಗೆ ಇದೊಂದು ಉತ್ತಮ ಪಾಠ
ಬಿಜೆಪಿ ಗೆದ್ದರೂ, ಈ ಚುನಾವಣೆ ಅದಕ್ಕೊಮದು ಪಾಠವೆಂಬುದಂತೂ ಸತ್ಯ. ಮೊದಲು ಹಿಂದುತ್ವಕ್ಕೆ ಅಂಟಿಕೊಳ್ಳಿ. ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಡಿ. ಅಲ್ಪಸಂಖ್ಯಾತರ ಓಲೈಕೆಗೆ ತೊಡಗಿದಷ್ಟೂ ನೀವು ಹಿಂದು ಮತಗಳನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಮುಖ್ಯ ಬಲವೇ ಹಿಂದುತ್ವ ಎಂಬುದನ್ನು ಮರೆಯದಿರಿ. ನಿಮ್ಮ ಮತದಾರರಿಗೆ ಬೆಲೆಕೊಡಿ ಎಂದು ಜಿಎಸ್ ಎನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಬಿಜೆಪಿ ಬೆಂಬಲಿಗರಿಗೂ ಖುಷಿ!
ಕಾಮಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಎದ್ದಿರುವ ಕುರಿತು ನಾನು ಕೆಲವು ಬಿಜೆಪಿ ಬೆಂಬಲಿಗರೊಂದಿಗೆ ಮಾತನಾಡಿದೆ. ಅವರು ಹೇಳಿದ್ದಿಷ್ಟೆ, 'ನಮಗೆ ಖುಷಿಯಾಗುತ್ತಿದೆ. ಇದು ಬಿಜೆಪಿಗೆ ಮತ್ತು ಮೋದಿಯವರಿಗೆ ಒಂದು ಎಚ್ಚರಿಕೆಯ ಗಂಟೆ ಎಂಬುದು ಅರ್ಥವಾಗಲಿ. ಇಲ್ಲವೆಂದರೆ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ರಾಹುಲ್ ಪಂಡಿತ ಎಂಬುವವರು ಟ್ವೀತ್ ಮಾಡಿದ್ದಾರೆ.











Click it and Unblock the Notifications