• search

ಜಿಗ್ನೇಶ್ ಮೆವಾನಿ ಎನ್ ಕೌಂಟರ್ ಹತ್ಯೆಗೆ ಸಂಚು ರೂಪಿಸಲಾಗಿದೆಯಾ..?!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಜಿಗ್ನೇಶ್ ಮೆವಾನಿ ಎನ್ ಕೌಂಟರ್ ಹತ್ಯೆಗೆ ಸಂಚು ? | Oneindia Kannada

    ವಡ್ಗಾಂ, ಫೆಬ್ರವರಿ 24: ದಲಿತ ಪರ ಹೋರಾಟದ ಮೂಲಕ ರಾಷ್ಟ್ರದ ಪ್ರಭಾವಿ ನಾಯಕರಲ್ಲೊಬ್ಬರಾಗಿ ಬೆಳೆದು ನಿಂತ ವಡ್ಗಾಂ ಶಾಸಕ ಜಿಗ್ನೇಶ್ ಮೆವಾನಿ ಅವರನ್ನು ಎನ್ ಕೌಂಟರ್ ಮೂಲಕ ಹತ್ಯೆಗೈಯ್ಯಲು ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ವಿಷಯವನ್ನು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ!

    ಗುಜರಾತ್ ಪೊಲೀಸರ whatsapp ಗ್ರೂಪ್ ವೊಂದರಲ್ಲಿ ತನ್ನ ಎನ್ ಕೌಂಟರ್ ಹತ್ಯೆಯ ಕುರಿತು ಸಂಚು ರೂಪಿಸಲಾಗಿತ್ತು ಎಂದಿರುವ ಜಿಗ್ನೇಶ್ ಮೆವಾನಿ ಅದರ whatsapp ಗುಂಪಿನಲ್ಲಿ ನಡೆದ ಚರ್ಚೆಯ ಸ್ಕ್ರೀನ್ ಶಾಟ್ ನ ಲಿಂಕ್ ಅನ್ನೂ ತಮ್ಮ ಟ್ವೀಟ್ ನಲ್ಲಿ ನೀಡಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಜಿಗ್ನೇಶ್ ಸಂಕಲ್

    'ಮೇರಾಸುದ್ದಿ' ಎಂಬ ವೆಬ್ ಪೋರ್ಟಲ್ ನಲ್ಲಿ ಈ whatsapp ಸ್ಕ್ರೀನ್ ಶಾಟ್ ನ ಫೋಟೋ ಪ್ರಕಟವಾಗಿದ್ದು, ಇದು ಗುಜರಾತಿ ಭಾಷೆಯಲ್ಲಿದೆ. ಈ ಗ್ರೂಪ್ ನಿಜಕ್ಕೂ ಗ ಉಜರಾತ್ ಪೊಲೀಸರಿಗೇ ಸಂಬಂಧಿಸಿದ್ದಾ ಎ<ಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಜಿಗ್ನೇಶ್ ಮೆವಾನಿ ಅವರ ಟ್ವೀಟ್ ಅಂತೂ ದೇಶದಲ್ಲಿ ಸಂಚಲನ ಮೂಡಿಸಿರುವುದು ಸುಳ್ಳಲ್ಲ.

    ಇಲ್ಲಿದೆ ನೋಡಿ ಲಿಂಕ್!

    ಜಿಗ್ನೇಶ್ ಮೆವಾನಿ ಎನ್ ಕೌಂಟರ್!? ಗುಜರಾತಿ ವೆಬ್ ಪೋರ್ಟಲ್ ವೊಂದು ಪ್ರಕಟಿಸಿದ ಲಿಂಕ್ ಇಲ್ಲಿದೆ ನೋಡಿ, ಈ ಸುದ್ದಿಯಲ್ಲಿ ಗುಜರಾತ್ ಪೊಲೀಸ್ ಗೆ ಸಂಬಂಧಿಸಿದ whatsapp ಗ್ರೂಪ್ ವೊಂದರಲ್ಲಿ ನನ್ನ ಎನ್ ಕೌಂಟರ್ ಬಗ್ಗೆ ಚರ್ಚೆ ನಡೆದಿರುವ ಸ್ಕ್ರೀನ್ ಶಾಟ್ ನೀಡಲಾಗಿದೆ. ಇಬ್ಬರು ಪೊಲೀಸರು ನನ್ನ ಎನ್ ಕೌಂಟರ್ ಹತ್ಯೆಯ ಬಗ್ಗೆ ಹೀಗೆ ಚರ್ಚೆ ಮಾಡುತ್ತಾರೆ ಎಂದರೆ ನೀವು ನಂಬುತ್ತೀರಾ? ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ ಮೆವಾನಿ.

    ಈ ಸೂಚನೆ ಎಲ್ಲಿಂದ ಬಂದಿದೆ?

    ಇದು ನಿಜಕ್ಕೂ ಅತ್ಯಂತ ಗಂಭೀರ ವಿಷಯ. ಪೊಲೀಸರು ನನ್ನ ಎನ್ ಕೌಂಟರ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಯಾರ ಸೂಚನೆಯ ಮೇಲೆ ಅವರು ನನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ? ಸೂಚನೆ ಬಂದಿದ್ದು ಗಾಂಧಿನಗರದಿಂದಲಾ? ದೆಹಲಿಯಿಂದಲಾ ಎಂದು ಪ್ರಶ್ನಿಸಿದ್ದಾರೆ ಜಿಗ್ನೇಶ್!

    ಯಾವ whatsapp ಗ್ರೂಪ್?

    ಯಾವ whatsapp ಗ್ರೂಪ್?

    ADR Police & Media ಎಂಬ whatsapp ಗ್ರೂಪಿನಲ್ಲಿ ಈ ಚರ್ಚೆ ನಡೆದಿದೆ. ಸದ್ಯಕ್ಕೆ ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ನಿಖತರ ಮಾಹಿತಿ ಲಭ್ಯವಿಲ್ಲ.

    ಅಲ್ಪಸಮಯದಲ್ಲೇ ನಾಯಕನಾಗಿ ಬೆಳೆದ ಜಿಗ್ನೇಶ್

    ಅಲ್ಪಸಮಯದಲ್ಲೇ ನಾಯಕನಾಗಿ ಬೆಳೆದ ಜಿಗ್ನೇಶ್

    ಯುವ, ದಲಿತ ನಾಯಕರಾಗಿ ಅಲ್ಪ ಸಮಯದಲ್ಲೇ ಬೆಳೆದು ನಿಂತ 38 ವರ್ಷದ ಜಿಗ್ನೇಶ್ ಮೆವಾನಿ, ಕಳೆದ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ವಡ್ಗಾಮ್ ಕ್ಷೇತ್ರದಿಂದ ಜಯಗಳಿಸಿದ್ದರು(ಒಟ್ಟು ಮತ: 63,471 ). ಬಿಜೆಪಿಯ ವಿಜಯ ಕುಮಾರ್ ಚಕ್ರವರ್ತಿ ಅವರನ್ನು 21,042 ಮತಗಳ ಅಂತರದಿಂಮದ ಸೋಲಿಸಿದ್ದ ಅವರು ಸದ್ಯಕ್ಕೆ ರಾಷ್ಟ್ರದ ಪ್ರಮುಖ ದಲಿತ ನಾಯಕರಲ್ಲೊಬ್ಬರಾಗಿ ಹೊರಹೊಮ್ಮಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Gujarat Police is planning to kill me in an encounter, Dalit activist and Vadgam MLA Jignesh Mevani tweets.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more