ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನ ಉದ್ಯಮಿ ಬಾಯ್ಬಿಟ್ಟ ಬೆಚ್ಚಿ ಬೀಳುವ ಸಂಗತಿ

ನಾಪತ್ತೆಯಾಗಿದ್ದ ಉದ್ಯಮಿ ಮಹೇಶ್ ಶಹಾ ಪತ್ತೆಯಾಗಿದ್ದು, ಪೊಲೀಸರ ಅತಿಥಿಯಾಗಿದ್ದು ತಿಳಿದಿರಬಹುದು. ಮಹೇಶ್ ನಾಪತ್ತೆಗೆ ಶೇಕಡಾ 45ರಷ್ಟು ತೆರಿಗೆ ಮೊತ್ತ ಅಷ್ಟೇ ಅಲ್ಲ, ರಾಜಕಾರಣಿಗಳ ಗೌಪ್ಯತೆಯೂ ಕಾರಣ ಎಂದು ತಿಳಿದು ಬಂದಿದೆ.

By Mahesh
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 04: ಆದಾಯ ಗಳಿಕೆ ಘೊಷಣೆ ಯೋಜನೆ ಅಡಿಯಲ್ಲಿ 13,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಘೋಷಿಸಿ ನಂತರ ನಾಪತ್ತೆಯಾಗಿದ್ದ ಉದ್ಯಮಿ ಮಹೇಶ್ ಶಹಾ ಪತ್ತೆಯಾಗಿದ್ದು, ಪೊಲೀಸರ ಅತಿಥಿಯಾಗಿದ್ದು ತಿಳಿದಿರಬಹುದು. ಮಹೇಶ್ ನಾಪತ್ತೆಗೆ ಶೇಕಡಾ 45ರಷ್ಟು ತೆರಿಗೆ ಮೊತ್ತ ಅಷ್ಟೇ ಅಲ್ಲ, ರಾಜಕಾರಣಿಗಳ ಗೌಪ್ಯತೆಯೂ ಕಾರಣ ಎಂದು ತಿಳಿದು ಬಂದಿದೆ.

'ಈ ದುಡ್ಡೆಲ್ಲ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸೇರಿದ್ದು, ನನ್ನದ್ದೇನಿಲ್ಲ ಎಂದು ಉದ್ಯಮಿ ಮಹೇಶ ಷಹಾ ಅವರು ವಿಚಾರಣೆ ವೇಳೆ ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.[13,860 ಕೋಟಿ ಆದಾಯ ಘೋಷಿಸಿದ್ದ ಗುಜರಾತ್ ನ ಮಹೇಶ್ ನಾಪತ್ತೆ!]

Gujarat man who declared over Rs 13K crore questioned by IT officials

4 ಬೆಡ್ ರೂಮಿನ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ಉದ್ಯಮಿ ಷಹಾ ಅವರ ಕುಟುಂಬಕ್ಕೂ ರಕ್ಷಣೆ ಒದಗಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ವಿಮಲ್ ಮೀನಾ ಹೇಳಿದ್ದಾರೆ.

ಶನಿವಾರ ಸಂಜೆ ಗುಜರಾತಿನ ಸ್ಥಳೀಯ ಈಟಿವಿ ಗುಜರಾತಿ ವಾಹಿನಿಗೆ ಮಹೇಶ್ ಅವರು ಸಂದರ್ಶನ ನೀಡಿ 'ಆದಾಯ ಘೊಷಣೆ ಯೋಜನೆ ಅಡಿಯಲ್ಲಿ ತಾವು ಘೊಷಿಸಿರುವ ಹಣ ತಮಗೆ ಸೇರಿದ್ದಲ್ಲ. ರಾಜಕಾರಣಿಗಳು, ಬಾಬುಗಳು ಮತ್ತು ಬಿಲ್ಡರ್ ಗಳು ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಸೇರಿದ
್ದು' ಎಂದು ಹೇಳಿದ್ದರು. ಇದೇ ಮಾತನ್ನು ವಿಚಾರಣೆ ವೇಳೆ ಕೂಡಾ ಹೇಳಿದ್ದಾರೆ.

ಟಿವಿ ವಾಹಿನಿಯಲ್ಲಿ ಷಹಾ ಸಂದರ್ಶನ ಪ್ರಸಾರವಾದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಪೊಲೀಸರು, ಮಹೇಶ್ ರನ್ನು ಬಂಧಿಸಿದ್ದಾರೆ. ಮಹೇಶ್ ಅವರಿಂದ 40 ಲಕ್ಷ ನಗದು, 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, 6 ಬ್ಯಾಂಕ್ ಲಾಕರ್ಸ್ ಜಪ್ತಿ ಮಾಡಲಾಗಿದೆ.

ಆದಾಯ ಗಳಿಕೆ ಘೊಷಣೆ ಯೋಜನೆ ಅಡಿ(ಐಡಿಎಸ್)ಯಲ್ಲಿ ಸೆಪ್ಟೆಂಬರ್ 30ರಂದು 13,000 ಕೋಟಿ ರೂಪಾಯಿ ಆದಾಯ ತೋರಿಸಿದ್ದ ಮಹೇಶ್, ಶೇ 45ರಷ್ಟು ತೆರಿಗೆ ಮೊತ್ತವನ್ನು ಕಟ್ಟಬೇಕಿತ್ತು. ಇದರ ಮೊದಲ ಕಂತು(1560 ಕೋಟಿ ರು) ಕಟ್ಟಲು ನವೆಂಬರ್ 30 ಕೊನೆದಿನಾಂಕವಾಗಿತ್ತು.(ಒನ್ಇಂಡಿಯಾ ಸುದ್ದಿ)

English summary
Mahesh Shah, the Ahmedabad-based businessman, who had gone missing after declaring black money worth over Rs 13,000 crore was today questioned by Income Tax department officials. He first appeared before television channels where he said that the money was not his.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X