ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುತ್ವವಾದಿ ಪಕ್ಷ ಸ್ಥಾಪಿಸಿದ ಮಾಜಿ ಎನ್‌ಕೌಂಟರ್ ಸ್ಪೆಷಲಿಸ್ಟ್

|
Google Oneindia Kannada News

ಅಹಮದಾಬಾದ್, ನ.9: ಗುಜರಾತ್ ಚುನಾವಣೆಗೆ ವಿವಿಧ ಪಕ್ಷಗಳು ಭರ್ಜರಿಯಾಗಿ ತಯಾರಿಯೊಂದಿಗೆ ಕಣಕ್ಕಿಳಿಯುತ್ತಿವೆ. ಈ ನಡುವೆ ಹೊಸ ಪಕ್ಷಗಳು, ಪಕ್ಷಾಂತರ, ಬೆಂಬಲ ಘೋಷಣೆ ಸುದ್ದಿಗಳು ಹರಿದು ಬರುತ್ತಿವೆ. ನಿವೃತ್ತ ಐಪಿಎಸ್‌ ಅಧಿಕಾರಿ, ಗುಜರಾತ್‌ನ ಮಾಜಿ ಡಿಐಜಿ ಡಿಜಿ ವಂಜಾರಾ ಹೊಸ ಪಕ್ಷ ಘೋಷಿಸಿದ್ದಾರೆ. ಮಾಜಿ ಎನ್‌ಕೌಂಟರ್ ಸ್ಪೆಷಲಿಸ್ಟ್ ವಂಜಾರಾ ಹಿಂದುತ್ವವಾದಿ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಪ್ರಜಾ ವಿಜಯ್ ಪಾರ್ಟಿ(ಪಿವಿಪಿ) ಎಂದು ಹೆಸರಿಡಲಾಗಿದೆ.

ಗುಜರಾತ್ ರಾಜ್ಯದ 182 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತದಲ್ಲಿ ಡಿಸೆಂಬರ್ 1 ಹಾಗೂ 5 ರಂದು ಚುನಾವಣೆ ನಿಗದಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪಿವಿಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ವಂಜಾರಾ ಹೇಳಿದರು.

ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ 40 ಪಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ 40 ಪಕ್ಷಾಂತರ ಅಭ್ಯರ್ಥಿಗಳು ಪೈಪೋಟಿ

"ಗುಜರಾತ್ ಜನತೆ ಹಿಂದುಯೇತರ ಪಕ್ಷವನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹಿಂದುತ್ವವಾದಿ ಪಕ್ಷದಿಂದ ಮಾತ್ರ ಬಿಜೆಪಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಇಂದು ರಾಜ್ಯ ಮತ್ತು ದೇಶದ ಜನತೆಗೆ 'ಪ್ರಜಾ ವಿಜಯ್ ಪಕ್ಷ' ಹಿಂದುತ್ವದ ಪಕ್ಷ ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ,'' ಎಂದು ವಂಜಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Gujarat Elections 2022: Former Encounter Specialist Vanzara launches political party

ಬಿಜೆಪಿಗೆ ಕಾಂಗ್ರೆಸ್ ಪರ್ಯಾಯವಾಗಿದ್ದರೆ, ಕಳೆದ 27 ವರ್ಷಗಳಿಂದ ರಾಜ್ಯದಲ್ಲಿ ಏಕಪಕ್ಷೀಯ (ಬಿಜೆಪಿ) ಆಡಳಿತ ಇರುತ್ತಿರಲಿಲ್ಲ ಎಂದು ವಂಜಾರಾ ಹೇಳಿದ್ದಾರೆ. ಬಿಜೆಪಿ ಸೇರದೆ ಹೊಸ ಪಕ್ಷ ಸ್ಥಾಪಿಸಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿ, ಟಿಕೆಟ್ ಸಿಗದೆ ನಾನು ಪಕ್ಷ ಸ್ಥಾಪಿಸುತ್ತಿಲ್ಲ, ಟಿಕೆಟ್‌ಗಾಗಿ ನಾನು ಕ್ಯೂನಲ್ಲಿ ನಿಲ್ಲುವ ಪೈಕಿಯಲ್ಲ ಎಂದಿದ್ದಾರೆ.

ಪಿವಿಪಿಯ ಪ್ರಧಾನ ಕಾರ್ಯದರ್ಶಿ ಸಮತ್ ಸಿನ್ಹಾ ಚೌಹಾಣ್ ಮಾತನಾಡಿ, ಹೊಸದಾಗಿ ಆರಂಭವಾದ ಪಕ್ಷವು ಹಿಂದುತ್ವ ಪಕ್ಷ ಎಂಬ ವಿಶಿಷ್ಟ ಗುರುತನ್ನು ಹೊಂದಿ ಹೋರಾಟಕ್ಕಿಳಿಯಲಿದೆ ಎಂದರು.

'ಪ್ರಜಾ ವಿಜಯ ಪಕ್ಷ' ಹೊಸ ರಾಜಕೀಯ ಮತ್ತು ಆಧ್ಯಾತ್ಮಿಕ ದೃಷ್ಟಿಯೊಂದಿಗೆ ಅಖಾಡಕ್ಕಿಳಿದಿದೆ' , ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ ನೀಡಲಾಗುವುದು, ಬಿಜೆಪಿಗೆ 'ರಾಜಸತ್ತಾ' (ಅಧಿಕಾರ) ಮೀರಿದ ದೃಷ್ಟಿ ಇಲ್ಲ ಎಂದು ಹೇಳಿದರು.

Gujarat Elections 2022: Former Encounter Specialist Vanzara launches political party

ನಕಲಿ ಎನ್‌ಕೌಂಟರ್‌ ಆರೋಪದಡಿ ಜೈಲು ಸೇರಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ವಂಜಾರಾಗೆ 2014ರಲ್ಲಿ ಜಾಮೀನು ಸಿಕ್ಕಿದೆ. 2005ರ ಸೋಹ್ರಾಬುದ್ದೀನ್‌ ಶೇಖ್‌ ಮತ್ತು ಆತನ ಪತ್ನಿ ಎನ್‌ಕೌಂಟರ್‌ ಹಾಗೂ 2006ರ ತುಳಸಿರಾಮ್ ಪ್ರಜಾಪತಿ, ಇಶ್ರಾಂತ್‌ ಜಹಾನ್‌, ಸಾದಿಕ್‌ ಜಾಮಾಲ್‌, ಮತ್ತಿತರ ಎನ್‌ಕೌಂಟರ್‌ಗೆ ಸಂಬಂಧಿಸಿ ವಂಜಾರಾ ಅವರನ್ನು ಬಂಧಿಸಲಾಗಿತ್ತು.

ಸೋಹ್ರಾಬುದ್ದೀನ್‌ ಮತ್ತು ಆತನ ಪತ್ನಿ ಎನ್‌ಕೌಂಟರ್‌ಗೆ ಸಂಬಂಧಿಸಿ ಒಟ್ಟು 13 ಜನ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ವಂಜಾರಾ ಶಿಕ್ಷೆ ಅನುಭವಿಸಿದ್ದರು.

2007 ರ, ಏಪ್ರಿಲ್ 24ರಲ್ಲಿ ಬಂಧಿತರಾಗಿದ್ದ 1987ರ ಬ್ಯಾಚಿನ ಅಧಿಕಾರಿ ವಂಜಾರಾ ಜೈಲಿನಲ್ಲಿರುವಾಗಲೇ ರಾಜೀನಾಮೆ ನೀಡಿದ್ದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಂಜಾರಾ ನಕಲಿ ಎನ್‌ಕೌಂಟರ್‌ ಆರೋಪ ಎದುರಿಸಿದ್ದರು.

2004 ರಲ್ಲಿ ಮುಂಬೈ ನಿವಾಸಿ ಇಶ್ರತ್ ಜಹಾನ್ ಮತ್ತು ಇತರ ಮೂವರನ್ನು ಅಹಮದಾಬಾದ್ ಬಳಿ ಗುಜರಾತ್ ಪೊಲೀಸ್ ಅಧಿಕಾರಿಗಳು ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ನಕಲಿ ಎನ್‌ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಲಾಯಿತು. 2004 ರಲ್ಲಿ ಸಿಬಿಐ ನ್ಯಾಯಾಲಯದಿಂದ ವಂಜಾರಾ ಅವರನ್ನು ಬಿಡುಗಡೆಗೊಳಿಸಿತ್ತು.

2015 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು ಸುಮಾರು ಎಂಟು ವರ್ಷಗಳ ಹಿಂದೆ ಬಾರ್‌ಗಳ ಹಿಂದೆ ಕಳೆದ ನಂತರ 2005 ರಲ್ಲಿ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿ ಪ್ರಜಾಪತಿಯ ನಕಲಿ ಎನ್‌ಕೌಂಟರ್‌ಗಳಲ್ಲಿ ಅವರನ್ನು 2017 ರಲ್ಲಿ ಖುಲಾಸೆಗೊಳಿಸಲಾಯಿತು.

English summary
Gujarat Elections 2022: Former Encounter Specialist Vanzara launches 'Hindutva'-based political party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X