• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಭಾರತ್ ತೋಡೋ ಯಾತ್ರೆ ಮಾಡುತ್ತಿದೆ: ಗುಜರಾತ್‌ನಲ್ಲಿ ಜೆ.ಪಿ. ನಡ್ಡಾ ಹೇಳಿಕೆ

|
Google Oneindia Kannada News

ಅಹಮದಾಬಾದ್ ನವೆಂಬರ್ 18: ಕಾಂಗ್ರೆಸ್ ದೇಶವನ್ನು ಒಡೆಯಲು ಮಾತ್ರ ಸಾಧ್ಯ, ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಭಾರತ್ ಜೋಡೋ ಯಾತ್ರೆ ವಿರುದ್ಧ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹರಿಹಾಯ್ದಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆಯ ಬೆನ್ನಲ್ಲೆ ಪ್ರಬಲ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಪ್ರತಿಷ್ಠೆಯ ರಾಜ್ಯವಾಗಿರುವ ಗುಜರಾತ್ ನಲ್ಲಿ ಗೆಲುವು ಸಾಧಿಸಲು ರಾಷ್ಟ್ರೀಯ ಪಕ್ಷಗಳು ಪರಸ್ಪರ ಸೆಣಸಾಟ ನಡೆಸುತ್ತಿವೆ. ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ಕುರಿತು ಭಾರತೀಯ ಜನತಾ ಪಕ್ಷ ವಾಗ್ದಾಳಿ ನಡೆಸಿದೆ.

ಗುಜರಾತ್‌ನ ನವಸಾರಿ ಕ್ಷೇತ್ರಕ್ಕೆ ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಇಂದು ದಕ್ಷಿಣ ಗುಜರಾತ್‌ನ ನವಸಾರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಾಕೇಶ್ ದೇಸಾಯಿ ಪರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮಾತನಾಡಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿರೋಧ ಪಕ್ಷ ದೇಶವನ್ನು ಒಡೆಯಲು ಮಾತ್ರ ಸಾಧ್ಯವೇ ಹೊರತು ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಭಾರತ್ ತೋಡೋ ಯಾತ್ರೆ ಮಾಡುತ್ತಿದೆ: ಗುಜರಾತ್‌ನಲ್ಲಿ ಜೆ.ಪಿ. ನಡ್ಡಾ ಹೇಳಿಕೆ ಕಾಂಗ್ರೆಸ್ ಭಾರತ್ ತೋಡೋ ಯಾತ್ರೆ ಮಾಡುತ್ತಿದೆ: ಗುಜರಾತ್‌ನಲ್ಲಿ ಜೆ.ಪಿ. ನಡ್ಡಾ ಹೇಳಿಕೆ

'ಕಾಂಗ್ರೆಸ್ ದೇಶವನ್ನು ಒಡೆಯಲು ಮಾತ್ರ ಸಾಧ್ಯ' ನಡ್ಡಾ

'ಕಾಂಗ್ರೆಸ್ ದೇಶವನ್ನು ಒಡೆಯಲು ಮಾತ್ರ ಸಾಧ್ಯ' ನಡ್ಡಾ

"ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿಲ್ಲ ಬದಲಿಗೆ ಭಾರತ್ ತೋಡೋ ಯಾತ್ರೆಯನ್ನು ಕೈಗೊಂಡಿದೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಕಾಂಗ್ರೆಸ್ ನಾಯಕರು ಭಾರತವನ್ನು ಒಂದುಗೂಡಿಸಿ ಎಂದು ಹೇಳುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಏನು ಮಾಡುತ್ತಾರೆ? ರಾಹುಲ್ ಗಾಂಧಿ ಮಾಸ್ಟರ್ ಮೈಂಡ್ ಅಫ್ಜಲ್ ಗುರು ಅವರ ಪರವಾಗಿ ಘೋಷಣೆ ಕೂಗುವವರಿಗೆ ಬೆಂಬಲ ನೀಡಿದರು" ಎಂದು ನಡ್ಡಾ ಹೇಳಿದ್ದಾರೆ.

"ರಾಹುಲ್ ಗಾಂಧಿ ಜೆಎನ್‌ಯುನಲ್ಲಿ ಇಂತಹ ಘೋಷಣೆಗಳನ್ನು ಕೂಗಿದವರಿಗೆ ಬೆಂಬಲವಾಗಿದ್ದಾಗ ಕೆಲವರು 'ಭಾರತ್ ತೇರೆ ತುಕಡೆ ಹೊಂಗೆ, ಇನ್ಶಾ ಅಲ್ಲಾ ಇನ್ಶಾ ಅಲ್ಲಾ' ಎಂಬ ಘೋಷಣೆಯನ್ನೂ ಎತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಬಗ್ಗೆ ನಿನ್ನೆ ನಿಮ್ಮ (ರಾಹುಲ್ ಗಾಂಧಿ) ಹೇಳಿಕೆ ಕೂಡ ಖಂಡನೀಯ. ಹೀಗಾಗಿ ಅವರು (ಕಾಂಗ್ರೆಸ್) ದೇಶವನ್ನು ಒಡೆಯಬಹುದು, ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಇದು ತೋರಿಸುತ್ತದೆ ಎಂದು ನಡ್ಡಾ ಆರೋಪಿಸಿದ್ದಾರೆ.

'ಹಿಮಾಚಲವನ್ನು ಎಎಪಿ ಕಳೆದುಕೊಳ್ಳುತ್ತದೆ' ನಡ್ಡಾ

'ಹಿಮಾಚಲವನ್ನು ಎಎಪಿ ಕಳೆದುಕೊಳ್ಳುತ್ತದೆ' ನಡ್ಡಾ

ಆಮ್ ಆದ್ಮಿ ಪಕ್ಷವನ್ನು (ಎಎಪಿ) "ಹೊಸ ಪಕ್ಷ" ಎಂದು ತಳ್ಳಿಹಾಕಿದ ನಡ್ಡಾ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಂಘಟನೆಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 350 ಸ್ಥಾನಗಳಲ್ಲಿ 349 ರಲ್ಲಿ ಠೇವಣಿ ಕಳೆದುಕೊಂಡಿದೆ. ಹಾಗೆ ಅವರು ಇತ್ತೀಚಿನ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ 67 ಸ್ಥಾನಗಳಲ್ಲಿ ತಮ್ಮ ಠೇವಣಿ ಕಳೆದುಕೊಳ್ಳುತ್ತಾರೆ ಎಂದರು.

'ಇತರ ಪಕ್ಷಗಳದ್ದು ಕಮಿಷನ್‌ಗಾಗಿ ಕೆಲಸ'

'ಇತರ ಪಕ್ಷಗಳದ್ದು ಕಮಿಷನ್‌ಗಾಗಿ ಕೆಲಸ'

ಬಿಜೆಪಿಯು "ಮಿಷನ್" ಮೋಡ್‌ನಲ್ಲಿ (ಅಭಿವೃದ್ಧಿಗಾಗಿ) ಕೆಲಸ ಮಾಡಿದೆ ಎಂದು ನಡ್ಡಾ ಹೇಳಿದ್ದಾರೆ, ಆದರೆ ಇತರ ಪಕ್ಷಗಳು "ಕಮಿಷನ್" (ಕಿಕ್‌ಬ್ಯಾಕ್‌ಗಳು) ಗಾಗಿ ಕೆಲಸ ಮಾಡಿದೆ. ಕೊರೊನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ನಡ್ಡಾ, ಭಾರತವು ಕೇವಲ ಒಂಬತ್ತು ತಿಂಗಳಲ್ಲಿ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜನಸಂಖ್ಯೆಯನ್ನು ಸುರಕ್ಷಿತಗೊಳಿಸಿದೆ ಎಂದು ಹೇಳಿದರು.

ಮೋದಿ ಕಾರ್ಯ ಶ್ಲಾಘಿಸಿದ ನಡ್ಡಾ

ಮೋದಿ ಕಾರ್ಯ ಶ್ಲಾಘಿಸಿದ ನಡ್ಡಾ

"ನಾವು 38 ದೇಶಗಳಿಗೆ ಉಚಿತವಾಗಿ ಲಸಿಕೆಗಳನ್ನು ಕಳುಹಿಸಿದ್ದೇವೆ. ಈಗ ಭಾರತವು ಕೊಡುವವರ ದೇಶವಾಗಿದೆ ತೆಗೆದುಕೊಳ್ಳುವವರಲ್ಲ" ಎಂದು ನಡ್ಡಾ ಹೇಳಿದರು. ಒಟ್ಟಿನಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕುಟುಕಿದ ನಡ್ಡಾ ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ ಜಯ ಸಾಧಿಸಲು ಸಾಕಷ್ಟು ಪ್ರಯತ್ನ ನಡೆಸಿದೆ. ಡಿಸೆಂಬರ್ 1 ಮತ್ತು 5 ರಂದು ಗುಜರಾತ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ

English summary
BJP President JP Nadda lashed out against Bharat Jodo Yatra saying that Congress can only divide the country and not unite it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X