• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ 2022: ಮತದಾರರ ಮೌನದಿಂದಾಗಿ ಬಿಜೆಪಿಯ ಪ್ರಬಲ ನಾಯಕರಲ್ಲಿ ತಲ್ಲಣ

|
Google Oneindia Kannada News

ಗಾಂಧಿನಗರ, ನವೆಂಬರ್ 13: ಗುಜರಾತ್‌ನಲ್ಲಿ 150 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳಿಕೊಂಡಿದೆ. ಆದರೆ ಈ ಬಾರಿ ಚುನಾವಣೆಯನ್ನು ಗೆಲ್ಲುವುದು ಬಿಜೆಪಿಗೆ ಸುಲಭದ ಮಾತಲ್ಲ. ಒಂದು ಕಡೆ, ಆಮ್ ಆದ್ಮಿ ಪಕ್ಷವು ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಮತ್ತೊಂದೆಡೆ, 27 ವರ್ಷಗಳ ಆಡಳಿತ ಮಾಡಿದ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಈಗ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನಲ್ಲಿ ಪ್ರಚಾರದ ನೇತೃತ್ವವನ್ನು ವಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ಮೋದಿ ಅವರೇ ಭಾಗವಹಿಸಲಿದ್ದು, ಮನೆ ಮನೆಗೆ ವೋಟಿಂಗ್ ಸ್ಲಿಪ್ ಹಂಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇಷ್ಟೇ ಅಲ್ಲ, 27 ವರ್ಷಗಳ ಕಾಲ ಗುಜರಾತ್‌ನಲ್ಲಿ ಆಡಳಿತ ನಡೆಸಿದ ನಂತರವೂ ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ವ್ಯಯಿಸಬೇಕಿದೆ. ಬಿಜೆಪಿಯ 100ಕ್ಕೂ ಹೆಚ್ಚು ಸಂಸದರು, 150 ಶಾಸಕರು ಮತ್ತು 5 ಮುಖ್ಯಮಂತ್ರಿಗಳು ಗುಜರಾತ್‌ನಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಉತ್ತರ ಭಾರತದ ಮತದಾರರ ಪ್ರಾಬಲ್ಯವಿರುವ ಸೂರತ್ ಜಿಲ್ಲೆಯ 16 ವಿಧಾನಸಭಾ ಸ್ಥಾನಗಳಲ್ಲಿ ಪ್ರಚಾರ ನಡೆಸಲು ಯೋಗಿ ಆದಿತ್ಯನಾಥ್ ಅವರಿಗೆ ಆದೇಶ ನೀಡಲಾಗಿದೆ.

ಗುಜರಾತ್ ಚುನಾವಣೆ: ಸೂರತ್‌ನಲ್ಲಿ 75 ಲಕ್ಷ ರೂ ನಗದು ವಶ, ಇಬ್ಬರ ಬಂಧನ ಗುಜರಾತ್ ಚುನಾವಣೆ: ಸೂರತ್‌ನಲ್ಲಿ 75 ಲಕ್ಷ ರೂ ನಗದು ವಶ, ಇಬ್ಬರ ಬಂಧನ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರಕ್ಕೆ ಸೇರಿದ ಮರಾಠಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬೀಡು ಬಿಡುವಂತೆ ಹೇಳಲಾಗಿದೆ. ಎಲ್ಲಾ ಸಂಸದರು ಮತ್ತು ಶಾಸಕರು ತಮ್ಮ ಜಾತಿ ಆಧರಿತ ಪ್ರದೇಶಗಳಲ್ಲಿ ಜಾತಿವಾರು ಸಭೆಗಳನ್ನು ನಡೆಸಿ ಮನೆ ಮನೆಗೆ ಪ್ರಚಾರ ನಡೆಸುವಂತೆ ತಿಳಿಸಲಾಗಿದೆ. ಕೇಂದ್ರ ಸಚಿವ ಮತ್ತು ಬುಡಕಟ್ಟು ನಾಯಕ ಅರ್ಜುನ್ ಮುಂಡಾ ಅವರನ್ನು ಬುಡಕಟ್ಟು ಪ್ರದೇಶಗಳಲ್ಲಿ ಪ್ರಚಾರ ಮಾಡಲು ತಿಳಿಸಲಾಗಿದೆ.

ಎಎಪಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ

ಎಎಪಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ

ಗುಜರಾತ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ, ಆಮ್ ಆದ್ಮಿ ಪಕ್ಷವು ಗುಜರಾತ್‌ನ ಮತದಾರರಿಗೆ ಮೂರನೇ ಆಯ್ಕೆಯಾಗಿ ಲಭ್ಯವಿದೆ. ಇಲ್ಲಿಯವರೆಗೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಪ್ರಮುಖ ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿ ಎರಡೂ ಪಕ್ಷಗಳ ಆಟ ಕೆಡಿಸಲು ಆಮ್ ಆದ್ಮಿ ಪಕ್ಷ ಪೈಪೋಟಿಗಿಳಿದಿದೆ. ಗುಜರಾತ್‌ನ ಮತದಾರರು ಆಮ್ ಆದ್ಮಿ ಪಕ್ಷ ಮತ್ತು ಅದರ ಮುಖ್ಯಸ್ಥ ಕೇಜ್ರಿವಾಲ್ ಅವರನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ಡಿಸೆಂಬರ್ 8 ರ ಚುನಾವಣಾ ಫಲಿತಾಂಶದ ದಿನದಂದು ತಿಳಿಯುತ್ತದೆ. ಆದರಲ್ಲಿ ಮತದಾರರು ಎಎಪಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಯ ಸರ್ವೋಚ್ಚ ನಾಯಕ ಮತ್ತು ದೇಶದ ಪ್ರಧಾನಿ ಮೋದಿ ಅವರು ಕೇಜ್ರಿವಾಲ್ ಅವರನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಪ್ರಧಾನಿ ಮೋದಿ ಅವರಿಂದ ಹಿಡಿದು ಪಕ್ಷದ ಹಿರಿಯ ನಾಯಕರು ಮಂತ್ರಿಗಳು, ಶಾಸಕರು ಚುನಾವಣಾ ಕಣದಲ್ಲಿ ನಿರತರಾಗಿದ್ದಾರೆ.

ಬಿಜೆಪಿಯಲ್ಲಿ ಪ್ರಚಾರದ ಭರಾಟೆ ಶುರು

ಬಿಜೆಪಿಯಲ್ಲಿ ಪ್ರಚಾರದ ಭರಾಟೆ ಶುರು

ಹೀಗಾಗಿ ಮತದಾರರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಮೋದಿ ಅವರೇ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನವೆಂಬರ್ 19 ರಿಂದ ಐದು ದಿನಗಳ ಪ್ರವಾಸದಲ್ಲಿ ಗುಜರಾತ್ ತಲುಪಿರುವ ಮೋದಿ, 16 ಜಿಲ್ಲೆಗಳಲ್ಲಿ ಭವ್ಯ ರ್‍ಯಾಲಿ ನಡೆಸುತ್ತಿದ್ದಾರೆ. ಮೋದಿ ತಮ್ಮ ಚುನಾವಣಾ ಪ್ರವಾಸದಲ್ಲಿ 109 ವಿಧಾನಸಭಾ ಸ್ಥಾನಗಳನ್ನು ಕವರ್ ಮಾಡಲಿದ್ದಾರೆ. ಇದಲ್ಲದೇ ಬುಡಕಟ್ಟು ಜನಾಂಗದ ಮೇಲೂ ಮೋದಿ ಗಮನ ಕೇಂದ್ರಿಕರಿಸಿದ್ದಾರೆ. ಅದಾಗ್ಯೂ 2017ರ ಚುನಾವಣೆಯಲ್ಲಿ ಈ 109 ಸ್ಥಾನಗಳ ಪೈಕಿ ಬಿಜೆಪಿ 45 ಸ್ಥಾನಗಳಲ್ಲಿ ಸೋಲು ಅನುಭವಿಸಬೇಕಾಯಿತು.

ಮೋದಿ ಶನಿವಾರ ವಲ್ಸಾದ್‌ನಿಂದ ಪ್ರಚಾರ ಆರಂಭಿಸಿದರು. ವಿಶೇಷವೆಂದರೆ 1962 ರಿಂದ ವಲ್ಸಾದ್‌ನಿಂದ ಯಾವ ರಾಜಕೀಯ ಪಕ್ಷ ಗೆದ್ದರೂ ಗುಜರಾತ್‌ನಲ್ಲಿ ಅದರ ಸರ್ಕಾರ ರಚನೆಯಾಗಿದೆ. ಚುನಾವಣೆ ಘೋಷಣೆಯಾಗುವ ಮುನ್ನವೇ ಮೋದಿ ಇಲ್ಲಿ ಪ್ರಚಾರ ನಡೆಸಿದ್ದರು. ಭಾನುವಾರ ಸೋಮನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮೋದಿ ಅವರು ವೆರಾವಲ್‌ನಲ್ಲಿ ರ್‍ಯಾಲಿ ನಡೆಸಿದರು. ಸೋಮವಾರ ಸುರೇಂದ್ರ ನಗರ, ಭರೂಚ್ ಮತ್ತು ನವಸಾರಿಯಲ್ಲಿ ಮೋದಿ ರ್‍ಯಾಲಿ ನಡೆಸಲಿದ್ದಾರೆ. ಈ ಮೂರು ಜಿಲ್ಲೆಗಳಲ್ಲಿ 14 ಸ್ಥಾನಗಳಿವೆ. 2017ರ ಚುನಾವಣೆಯಲ್ಲಿ ಇಲ್ಲಿನ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಕಳೆದುಕೊಂಡಿತ್ತು.

ಬಿಜೆಪಿಗೆ ಕಠಿಣ ಸವಾಲು ಎಎಪಿ, ಕಾಂಗ್ರೆಸ್‌

ಬಿಜೆಪಿಗೆ ಕಠಿಣ ಸವಾಲು ಎಎಪಿ, ಕಾಂಗ್ರೆಸ್‌

2017ರ ಚುನಾವಣೆಯಲ್ಲಿ ಬಿಜೆಪಿ ಈ ಪ್ರದೇಶದಲ್ಲಿ 7 ಸ್ಥಾನಗಳನ್ನು ಪಡೆದಿತ್ತು. ನವಸಾರಿ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರ ಭದ್ರಕೋಟೆ. ಭರೂಚ್‌ ಕಾಂಗ್ರೆಸ್‌ ಅಹಮದ್‌ ಪಟೇಲ್‌ ಅವರ ಭದ್ರಕೋಟೆಯಾಗಿದೆ. ಮಂಗಳವಾರ ಮೋದಿ ಅವರು ಮೆಹ್ಸಾನಾ, ದಾಹೋದ್, ವಡೋದರಾ ಮತ್ತು ಭಾವನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

2017ರಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿ 30ರಲ್ಲಿ 22 ಸ್ಥಾನಗಳನ್ನು ಗೆದ್ದಿತ್ತು. ಬುಧವಾರ ಬನಸ್ಕಾಂತ, ಗಾಂಧಿನಗರ, ಖೇಡಾ ಮತ್ತು ಅಹಮದಾಬಾದ್‌ನಲ್ಲಿ ಮೋದಿ ರ್‍ಯಾಲಿ ನಡೆಸಲಿದ್ದಾರೆ. ಈ ನಾಲ್ಕು ಜಿಲ್ಲೆಗಳಲ್ಲಿ 41 ಸ್ಥಾನಗಳಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈ 41 ಸ್ಥಾನಗಳಲ್ಲಿ ಬಿಜೆಪಿ 23 ಸ್ಥಾನಗಳನ್ನು ಗೆದ್ದಿತ್ತು.

27 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕಾಂಗ್ರೆಸ್ ಅಥವಾ ಆಪ್ ಅನ್ನು ಹಗುರವಾಗಿ ಪರಿಗಣಿಸುತ್ತಿಲ್ಲ ಎಂಬ ಸಂದೇಶವನ್ನು ರವಾನಿಸಲು ಪ್ರಧಾನಿ ಮೋದಿಯವರು ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ ಮಾಡಿದ ಆಕ್ರಮಣಕಾರಿ ಪ್ರಚಾರ ಸಾಕು. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎದುರಾದ ಕಠಿಣ ಸವಾಲನ್ನು ಬಿಜೆಪಿ ಮರೆತಿಲ್ಲ.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಮತ್ತು ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದಿವೆ. ಆದರೆ 2017ರ ನಂತರ 12 ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಈ ಬಾರಿ ಕಾಂಗ್ರೆಸ್ ಗಿಂತ ಆಮ್ ಆದ್ಮಿ ಪಕ್ಷದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ತಡೆಯಲು, ಮೋದಿಯವರು ಗುಜರಾತ್‌ನಲ್ಲಿ ಇಡೀ ಕ್ಯಾಬಿನೆಟ್ ಅನ್ನು ಪುನರ್‌ ಉಚ್ಛರಿಸಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯ ಈ ಪ್ರಯೋಗ ಗುಜರಾತ್‌ನಲ್ಲಿ ಯಶಸ್ವಿಯಾದರೆ ಮತ್ತು ಬಿಜೆಪಿ 115 ಸ್ಥಾನಗಳನ್ನು ಗೆದ್ದರೆ, ಈ ಸೂತ್ರವನ್ನು ಇತರ ರಾಜ್ಯಗಳಲ್ಲಿಯೂ ಜಾರಿಗೆ ತರಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಬಿಜೆಪಿಯ ಲೆಕ್ಕಾಚಾರಗಳೇನು?

ಬಿಜೆಪಿಯ ಲೆಕ್ಕಾಚಾರಗಳೇನು?

ಬಿಜೆಪಿಯ ಸ್ಥಾನಗಳು 100 ರ ಆಸುಪಾಸಿನಲ್ಲಿ ಉಳಿದರೆ, ಮೋದಿ ಮತ್ತು ಶಾ ಇತರ ರಾಜ್ಯಗಳಲ್ಲಿ ಈ ತಂತ್ರವನ್ನು ಪ್ರಯೋಗ ಮಾಡುವುದು ಸುಲಭವಲ್ಲ. 2024ಕ್ಕೆ ಮೋದಿ ಹೊಸ ತಂತ್ರ ರೂಪಿಸಬೇಕು. ಗುಜರಾತ್‌ನಲ್ಲಿ ಮೂರನೇ ಆಯ್ಕೆಯಾಗಿ ಕಣಕ್ಕಿಳಿದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅದು ದೊಡ್ಡ ಗೆಲುವು ಎಂದು ಪರಿಗಣಿಸಲಾಗುವುದು ಮತ್ತು ಭವಿಷ್ಯದಲ್ಲಿ ಎಎಪಿ ಬಿಜೆಪಿಗೆ ಪರ್ಯಾಯವಾಗಿ ಕಾಣಿಸುತ್ತದೆ. ಕೇಜ್ರಿವಾಲ್ ಕೂಡ ಗುಜರಾತ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮೋದಿಗೆ ಸರಿಸಮಾನವಾಗಿ ತಮ್ಮ ಸ್ಥಾನವನ್ನು ತೋರಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಎಎಪಿ 5-7 ಸ್ಥಾನಗಳಿಗೆ ಇಳಿದರೆ, ಕೇಜ್ರಿವಾಲ್ ಪ್ರಚಾರಕ್ಕೆ ಭಾರೀ ಹಿನ್ನಡೆಯಾಗಲಿದೆ. ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಚಳುವಳಿ, ಅಲ್ಪೇಶ್ ಠಾಕೂರ್ ನೇತೃತ್ವದ ಒಬಿಸಿ ಚಳವಳಿ, 2017ರಲ್ಲಿ ನಡೆದ ಜಿಗ್ನೇಶ್ ಮೇವಾನಿ ನೇತೃತ್ವದ ದಲಿತ ಹಕ್ಕುಗಳ ಚಳವಳಿಯಂತಹ ಚಳವಳಿ ಈ ಬಾರಿ ಇಲ್ಲ ಎಂಬುದಕ್ಕೆ ಬಿಜೆಪಿ ಈ ಚುನಾವಣೆಯಲ್ಲಿ ನಿರಾಳವಾಗಿದೆ. 2017 ರಲ್ಲಿ ಈ ಆಂದೋಲನಗಳು ಗುಜರಾತ್ ಸರ್ಕಾರದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸಿದ್ದವು.

ಬಿಜೆಪಿ ಸಾರ್ವಜನಿಕರಿಂದ ಎದುರಿಸುತ್ತಿರುವ ಪ್ರಶ್ನೆಗಳು

ಬಿಜೆಪಿ ಸಾರ್ವಜನಿಕರಿಂದ ಎದುರಿಸುತ್ತಿರುವ ಪ್ರಶ್ನೆಗಳು

ಬಿಜೆಪಿಯಿಂದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ನಿಂದ ಜಿಗ್ನೇಶ್ ಮೇವಾನಿ ಅಭ್ಯರ್ಥಿಯಾಗಿದ್ದಾರೆ. ಆದರೂ ಕೆಲ ವಲಸೆ ಬಿಜೆಪಿಗರ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಅಸಮಧಾನವಿದೆ. ಹೀಗಾಗಿ ಅವರು ಬಿಜೆಪಿಯನ್ನು ಗೆಲ್ಲಿಸುತ್ತಾರಾ ಅನ್ನೋ ಅನುಮಾನಗಳು ಇವೆ.

ಗುಜರಾತಿನ ಮಣ್ಣಿಗೆ ಅಂಟಿಕೊಂಡಿದ್ದ ನರೇಂದ್ರ ಮೋದಿ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತಳಮಟ್ಟದಲ್ಲಿ ಹುಟ್ಟಿಕೊಂಡಿದ್ದ ಅಸಮಾಧಾನವನ್ನು ಕಣ್ಣಾರೆ ಕಂಡ ನಂತರ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಇಡೀ ಸಚಿವ ಸಂಪುಟವನ್ನೇ ಕಿತ್ತೊಗೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಭೂಪೇಂದ್ರ ಪಟೇಲ್. ಮೊದಲ ಬಾರಿಗೆ ಶಾಸಕರಾಗಿ ರಾಜ್ಯದ ಅಧಿಕಾರವನ್ನು ಹಸ್ತಾಂತರಿಸಿದರು. ಆದರೆ ಇದರ ನಂತರವೂ ಬಿಜೆಪಿ ಸಾರ್ವಜನಿಕರಿಂದ ಎದುರಿಸುತ್ತಿರುವ ಪ್ರಶ್ನೆಗಳೆಂದರೆ ಹಣದುಬ್ಬರ, ನಿರುದ್ಯೋಗ, ದುಬಾರಿ ಶಿಕ್ಷಣ, ಹದಗೆಟ್ಟ ರಸ್ತೆಗಳು, ಹಳ್ಳಿಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಮತ್ತು ದುಬಾರಿ ವಿದ್ಯುತ್. ಇಂತೆಲ್ಲಾ ಸಮಸ್ಯೆಗಳು ಬಿಜೆಪಿಗೆ ಇನ್ನೂ ಮುಳುವಾಗಿ ಕಾಡುತ್ತಿವೆ.

ರಾಜ್ಯದಲ್ಲಿ 27 ವರ್ಷ ಮತ್ತು ಕೇಂದ್ರದಲ್ಲಿ 8 ವರ್ಷಗಳ ಅಧಿಕಾರದ ಖಾತೆಯನ್ನು ನೀಡುವಂತೆ ಕಾಂಗ್ರೆಸ್ ಮತ್ತು ಎಎಪಿ ಬಿಜೆಪಿಗೆ ಕೇಳುತ್ತಿದೆ. ಆದರೆ ಅವರನ್ನು ಬಿಜೆಪಿಯು ನುಸುಳುಕೋರರು ಎಂದು ಕರೆಯುವ ಮೂಲಕ ಆಮ್ ಆದ್ಮಿ ಪಕ್ಷದಿಂದ ದೂರವಿರಲು ಸಾರ್ವಜನಿಕರಿಗೆ ಸಲಹೆ ನೀಡುತ್ತಿದೆ. ಏನೇ ಆಗಲಿ ಗೆಲುವಿನ ಭಾರ ಮತ್ತು ಸೋಲಿನ ಭಾರವನ್ನು ಹೆಗಲ ಮೇಲೆ ಹೊತ್ತುಕೊಳ್ಳಬೇಕು ಎಂದು ಮೋದಿ ನಿರ್ಧರಿಸಿದ್ದಾರೆ. ಆದರೆ ಈ ಬಾರಿ ಗುಜರಾತ್ ಮತದಾರರು ಮೌನವಾಗಿದ್ದಾರೆ, ಇದರಿಂದಾಗಿ ಪ್ರತಿ ಪಕ್ಷದ ನಾಯಕರೂ ಚಡಪಡಿಸುತ್ತಿದ್ದಾರೆ.

English summary
Gujarat Elections 2022: Powerful leaders are flustered due to voter silence. What is the status of 3 party competitors?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X