ಗುಜರಾತ್ ಚುನಾವಣೆ 2022: ಎಎಪಿಯಿಂದ 1 ಕ್ಷೇತ್ರಬಿಟ್ಟು ಮತ್ತೆಲ್ಲೆಡೆ ಅಭ್ಯರ್ಥಿಗಳ ಘೋಷಣೆ

ನವದೆಹಲಿ, ನವೆಂಬರ್‌ 16: ಮುಂದಿನ ತಿಂಗಳು ನಡೆಯಲಿರುವ ಗುಜರಾತ್‌ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಕ್ಷ ನಾಲ್ಕು ಅಭ್ಯರ್ಥಿಗಳ 17ನೇ ಪಟ್ಟಿ ಬಿಡುಗಡೆ ಮಾಡಿದೆ. 182 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಬಿಟ್ಟು ಮತ್ತೆಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಎಎಪಿ ನೀಡಿರುವ ಪಟ್ಟಿಯ ಪ್ರಕಾರ ಖಾಲಿ ಬಿಟ್ಟಿರುವ ಆ ಒಂದು ವಿಧಾನಸಭಾ ಕ್ಷೇತ್ರವೆಂದರೆ ಭಾವ್‌ನಗರ ಪಶ್ಚಿಮ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ನಾಯಕರು ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಎಎಪಿ ಪಕ್ಷ ಖೇರಾಲು, ವಿಸ್‌ನಗರ, ಮಾನಸ ಹಾಗೂ ಪಾದ್ರಾ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಇದರಲ್ಲಿ ವಡೋದರಾ ಜಿಲ್ಲೆಯ ಪಾದ್ರಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಬದಲಾವಣೆ ಮಾಡಲಾಗಿದೆ.

ಇತ್ತೀಚಿನ ಪಟ್ಟಿಯ ಪ್ರಕಾರ ಎಎಪಿ ಖೇರಾಲು ಕ್ಷೇತ್ರದಿಂದ ದಿನೇಶ್‌ ಠಾಕೂರ್‌, ವಿಸ್‌ ನಗರದಿಂದ ಜಯಂತಿ ಪಟೇಲ್‌, ಮಾನಸದಿಂದ ಭಾಸ್ಕರ್ ಪಟೇಲ್‌ ಹಾಗೂ ಪಾದ್ರಾದಿಂದ ಸಂದೀಪ್‌ ಸಿಂಗ್ ರಾಜ್‌ ಅವರನ್ನು ಕಣಕ್ಕಿಳಿಸಿದೆ.

Gujarat Election 2022: AAP Announces Candidates for Elsewhere Apart from 1 Constituency

ಗುಜರಾತ್ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿಗೆ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲು ಬಯಸುತ್ತಿರುವ ಅರವಿಂದ್‌ ಕೇಜ್ರಿವಾಲ್‌ ಅವರ ತಂಡ ಕಳೆದ ಆಗಸ್ಟ್‌ನಿಂದಲೇ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತ್ತು. ಆಮ್‌ ಆದ್ಮಿ ಪಕ್ಷ 181 ಕ್ಷೇತ್ರಗಳಲ್ಲಿ ನಾಲ್ವರು ಮಹಿಳೆಯರು ಹಾಗೂ 3 ಮುಸ್ಲಿಮರಿಗೆ ಪಕ್ಷದಿಂದ ಟಿಕೆಟ್‌ ನೀಡಿದೆ.

ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಪಡೆದಷ್ಟು ಆ ಪ್ರದೇಶದ ಜನರೊಂದಿಗೆ ಉತ್ತಮ ಸಂಬಂದವನ್ನು ಬೆಳೆಸಿಕೊಳ್ಳಲು ಮತ್ತು ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಎಪಿ ಭಾವಿಸಿದೆ.

182 ಕ್ಷೇತ್ರಗಳನ್ನು ಹೊಂದಿರುವ ಗುಜರಾತ್‌ ರಾಜ್ಯಕ್ಕೆ ಡಿಸೆಂಬರ್‌ 1 ಹಾಗೂ 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಇದು ಕ್ರಮವಾಗಿ ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್‌ 8ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

ಗುಜರಾತ್ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ನವೆಂಬರ್‌ 17 ರಂದು ಕೊನೆಯ ದಿನವಾಗಿದೆ. ಮೊದಲ ಮತ್ತು ಎರಡನೇ ಹಂತಗಳಿಗೆ ಕ್ರಮವಾಗಿ ನವೆಂಬರ್‌ 15 ಹಾಗೂ 18ರಂದು ನಾಮಪತ್ರ ಪರಿಶೀಲನೆ ದಿನಾಂಕವಾಗಿರುತ್ತದೆ. ನಾಮಪತ್ರ ಹಿಂಪಡೆಯಲು ಮೊದಲ ಹಂತಕ್ಕೆ ನವೆಂಬರ್‌ 17 ಹಾಗೂ ಎರಡನೇ ಹಂತಕ್ಕೆ ನವೆಂಬರ್‌ 21 ಕೊನೆಯ ದಿನಾಂಕವಾಗಿರುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+