ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆಗೆ ಮುಂದಾದ ಗುಜರಾತ್ ಮುಖ್ಯಮಂತ್ರಿ

|
Google Oneindia Kannada News

ಅಹಮದಾಬಾದ್, ಆಗಸ್ಟ್, 01: ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಪಟೇಲ್ ಮೀಸಲಾತಿ ಚಳವಳಿ, ದಲಿತ ದೌರ್ಜನ್ಯ ಪ್ರಕರಣಗಳಿಂದಾಗಿ ಗುಜರಾತ್ ನಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.[ಮೋದಿ ಆಡಳಿತ ಅಂತ್ಯ; ಆನಂದಿಬೆನ್ ಆಳ್ವಿಕೆ ಆರಂಭ]

Gujarat CM Anandiben Patel offers to resign

ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪಟೇಲ್ ಈ ಬಗ್ಗೆ ಬರೆದುಕೊಂಡಿದ್ದಾರೆ. ನನಗೆ 75 ವರ್ಷ ತುಂಬಿತ್ತಿದ್ದು ವೃದ್ಧಾಪ್ಯ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ.[ಮೇಲ್ವರ್ಗದ ಬಡವರಿಗೂ ಮೀಸಲಾತಿ ಘೋಷಿಸಿದ ಗುಜರಾತ್ ಸರ್ಕಾರ]

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಆನಂದಿಬೆನ್ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 2017ರ ಚುನಾವಣೆಗೂ ಮುನ್ನ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯುವ ಸಾಧ್ಯತೆ ಇದೆ.[ವೈಬ್ರಂಟ್ ಗುಜರಾತ್: ಮೋದಿ ಭಾಷಣದ ಹೈಲೈಟ್ಸ್]

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರಲ್ಲಿ ರಾಜಕೀಯ ಬದಲಾವಣೆ ಆರಂಭವಾಗುವ ಲಕ್ಷಣ ಇದರಿಂದ ಗೋಚರವಾಗುತ್ತಿದೆ. ಭಾರತೀಯ ಜನತಾಪಾರ್ಟಿಯಲ್ಲಿನ ಪ್ರತಿಯೊಂದು ಬದಲಾವಣೆ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

English summary
Gujarat Chief Minister Anandiben Patel on Monday, Aug 1 requested the party leadership to relieve her from the post. Reports of resignation comes in the wake of recent incident of dalits backlash in Una.In her official Facebook post, the chief minister wrote that she had requested the party leadership to relieve her of the CM's post as she was reaching 75 years' age. She added that she has resent the request on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X