• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬುಡಕಟ್ಟು ಪಕ್ಷ

|
Google Oneindia Kannada News

ಅಹಮದಾಬಾದ್, ನ.07: ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಗುಜರಾತ್‌ನ ಒಂಬತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಸೇರಿದಂತೆ 12 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ.

ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ರಾಜ್ಯಾದ್ಯಂತ ಎಲ್ಲಾ 27 ಎಸ್‌ಟಿ ಮೀಸಲು ಸ್ಥಾನಗಳಲ್ಲಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಬಿಟಿಪಿಯ ಗುಜರಾತ್ ಅಧ್ಯಕ್ಷ ರಮೇಶ್ ವಾಸವ ತಿಳಿಸಿದ್ದಾರೆ.

ಗುಜರಾತ್ ಚುನಾವಣೆ: ಕಾಂಗ್ರೆಸ್‌ನಿಂದ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗುಜರಾತ್ ಚುನಾವಣೆ: ಕಾಂಗ್ರೆಸ್‌ನಿಂದ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

2017ರಲ್ಲಿ ಬಿಟಿಪಿಯು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಏಕಾಂಗಿ ಹೋರಾಟ ನಡೆಸಲಿದೆ. ಇದರ ಜೊತೆಗೆ ಚುನಾವಣೆಗೂ ಮುನ್ನವೇ ಬಿಟಿಪಿ ಮತ್ತು ಆಮ್ ಆದ್ಮಿ ಪಕ್ಷದ ಮೈತ್ರಿಯೂ ಮುಗಿದಿತ್ತು.

2017ರ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ ಎರಡು ಸ್ಥಾನಗಳನ್ನು ಗೆದ್ದಿತ್ತು. ಅಭ್ಯರ್ಥಿಗಳನ್ನು ಘೋಷಿಸಿದ ಒಂಬತ್ತು ಎಸ್‌ಟಿ-ಮೀಸಲಾತಿ ಸ್ಥಾನಗಳ ಹೊರತಾಗಿ, ಬಿಟಿಪಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕರ್ಜನ್, ಜಂಬೂಸರ್ ಮತ್ತು ಓಲ್ಪಾಡ್‌ಗೂ ಅಭ್ಯರ್ಥಿಗಳನ್ನು ಘೋಷಿಸಿದೆ.

ಉಳಿದ ಒಂಬತ್ತು ಸ್ಥಾನಗಳೆಂದರೆ, ಭಿಲೋದ, ಝಲೋದ್, ದಾಹೋದ್, ಸಂಖೇದಾ, ನಂಡೋಡ್, ವ್ಯಾರಾ, ನಿಜಾರ್, ದಂಗ್ ಮತ್ತು ಧರಮ್‌ಪುರ್. "27 ಬುಡಕಟ್ಟು ಮೀಸಲಾತಿ ಸ್ಥಾನಗಳ ಹೊರತಾಗಿ, ನಾವು ನಮ್ಮ ಅಭ್ಯರ್ಥಿಗಳನ್ನು ಶೇಕಡಾ 30 ರಿಂದ 40 ರಷ್ಟು ಬುಡಕಟ್ಟು ಮತದಾರರನ್ನು ಹೊಂದಿರುವ ಅಂಕಲೇಶ್ವರ ಮತ್ತು ಓಲ್ಪಾಡ್‌ನಲ್ಲಿಯೂ ಕಣಕ್ಕಿಳಿಸುತ್ತೇವೆ" ಎಂದು ವಾಸವ ತಿಳಿಸಿದ್ದಾರೆ.

ಪ್ರಸ್ತುತ, ಈ ಬುಡಕಟ್ಟು ಪಕ್ಷವು ಗುಜರಾತ್ ವಿಧಾನಸಭೆಯಲ್ಲಿ ಭರೂಚ್‌ನಲ್ಲಿ ಜಗಡಿಯಾ ಮತ್ತು ನರ್ಮದಾ ಜಿಲ್ಲೆಯ ದೇಡಿಯಾಪಾದದಿಂದ ಎರಡು ಸ್ಥಾನಗಳನ್ನು ಹೊಂದಿದೆ. ಬಿಟಿಪಿಯ ಸಂಸ್ಥಾಪಕ ಛೋಟು ವಾಸವ ಜಗಾಡಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಅವರ ಪುತ್ರ ಮತ್ತು ಬಿಟಿಪಿಯ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ವಾಸವ ದೇಡಿಯಾಪಾದವನ್ನು ಪ್ರತಿನಿಧಿಸುತ್ತಿದ್ದಾರೆ.

Gujarat Assembly Elections 2022: BTP announces names of 12 candidates

ಇತ್ತೀಚೆಗೆ, ಛೋಟು ವಾಸವ ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಜೊತೆಗಿನ ತನ್ನ ಅಲ್ಪಾವಧಿಯ ಚುನಾವಣಾ ಪೂರ್ವ ಮೈತ್ರಿಯನ್ನು ಕೊನೆಗೊಳಿಸಿದ್ದರು. ಚುನಾವಣೆ ಸಮೀಪಿಸುತ್ತಿದ್ದರೂ, ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಅವರು ಇನ್ನೂ ಏನು ಮಾತನಾಡಿಲ್ಲ. ಹೀಗಾಗಿ ಏಕಾಂಗಿ ಸ್ಪರ್ಧೆ ಖಚಿತವಾಗಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 18, 2023 ರಂದು ಕೊನೆಗೊಳ್ಳುತ್ತದೆ.

182 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪೋರಬಂದರ್‌ನಿಂದ ಗುಜರಾತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಅರ್ಜುನ್ ಮೊದ್ವಾಡಿಯಾ, ಗಾಂಧಿನಗರ ದಕ್ಷಿಣದಿಂದ ಹಿಮಾಂಶು ಪಟೇಲ್, ರಾಜ್‌ಕೋಟ್ ದಕ್ಷಿಣದಿಂದ ಹಿತೇಶ್‌ಭಾಯ್ ವೋರಾ ಅನ್ನು ಆಯ್ಕೆ ಮಾಡಲಾಗಿದೆ.

2011 ರ ಜನಗಣತಿಯ ಪ್ರಕಾರ, ಗುಜರಾತ್‌ನಲ್ಲಿ 89.17 ಲಕ್ಷ ಬುಡಕಟ್ಟು ಜನರಿದ್ದಾರೆ. ಅದರ ಒಟ್ಟು ಜನಸಂಖ್ಯೆಯ ಶೇಕಡಾ 15 ರಷ್ಟು ಬುಡಕಟ್ಟು ಜನಸಂಖ್ಯೆಯಿದೆ. ಈ ಸಮುದಾಯದ ಸದಸ್ಯರು ಹೆಚ್ಚಾಗಿ ರಾಜ್ಯದ 14 ಪೂರ್ವ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದು, ಬುಡಕಟ್ಟು ಜನಸಂಖ್ಯೆಯು 48 ತಾಲೂಕುಗಳಲ್ಲಿ ಕೇಂದ್ರೀಕೃತವಾಗಿದೆ.

English summary
Gujarat Assembly Elections 2022: Bharatiya Tribal Party (BTP) announces first list of candidates for 12 Assembly constituencies in Gujarat. In 2017 BTP made an alliance with the Congress, but this time they will fight alone. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X