Gujarat Assembly Elections 2022: ಬಿಜೆಪಿಯಿಂದ ಸಿಗದ ಟಿಕೆಟ್, ಎಎಪಿ ಸೇರಿದ ಶಾಸಕ
ಅಹಮದಾಬಾದ್, ನ. 11: ಗುರುವಾರ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದು ಪಕ್ಷದಲ್ಲಿ ಬಂಡಾಯಕ್ಕೆ ಕಾರಣವಾಗಿದ್ದು, ಹಲವರು ಇತರ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಗುಜರಾತ್‌ನ ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಿಗೆ ಈ ಬಾರಿ ಟಿಕೆಟ್ ಸಿಗದ ಕಾರಣ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಆಡಳಿತ ಪಕ್ಷವು ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರದ ಶಾಸಕ ಕೇಸರಿಸಿಂಹ ಸೋಲಂಕಿ ಅವರನ್ನು ಪಟ್ಟಿಯಿಂದ ಕೈಬಿಟ್ಟಿದೆ. ಈ ಕ್ಷೇತ್ರದಿಂದ ಹಾಲಿ ಕೇಸರಿಸಿನ್ಹಾ ಸೋಲಂಕಿ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದಾರೆ.
ಮೂರನೇ ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ಆಸೆ ಪೂರ್ಣವಾಗದ ಕಾರಣ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಮಲ ಬಿಟ್ಟು ಪೊರಕೆ ಹಿಡಿದ ಕೇಸರಿಸಿನ್ಹಾ ಸೋಲಂಕಿ
ಶಾಸಕ ಕೇಸರಿಸಿನ್ಹಾ ಸೋಲಂಕಿ ಆಪ್ ಸೇರ್ಪಡೆಯಾಗಿರುವ ಆಪ್ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಟ್ವಿಟರ್‌ನಲ್ಲಿ ದೃಢಪಡಿಸಿದ್ದಾರೆ.
"ಗುಜರಾತ್‌ನ ಮತರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೇಸರಿಸಿನ್ಹಾ ಸೋಲಂಕಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಕುಟುಂಬದಲ್ಲಿ ಅವರಿಗೆ ಹೃತ್ಪೂರ್ವಕ ಸ್ವಾಗತ" ಎಂದಿದ್ದಾರೆ.
"ಕೇಸರಿಸಿನ್ಹಾ ಸೋಲಂಕಿ, ಜನಪ್ರಿಯ, ಕಠಿಣ ಪರಿಶ್ರಮಿ, ಮತರ್ ವಿಧಾನಸಭೆಯ ನಿರ್ಭೀತ ಶಾಸಕ, ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ರಾಜಕಾರಣದಿಂದ ಪ್ರೇರಿತರಾಗಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಾನು ಕೇಸರಿಸಿನ್ಹಾ ಜಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಗುಜರಾತಿನಲ್ಲಿ ಪ್ರಾಮಾಣಿಕ ಸರ್ಕಾರ ರಚಿಸಲಿದ್ದೇವೆ" ಎಂದು ಗೋಪಾಲ್ ಇಟಾಲಿಯಾ ಗುರುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.

2014 ರಿಂದ ಮತರ್ ಕ್ಷೇತ್ರ ಪ್ರತಿನಿಧಿಸುತ್ತಿರುವ ಕೇಸರಿ ಸಿನ್ಹಾ
ಗುಜರಾತ್ ರಾಜ್ಯ ಚುನಾವಣೆಗೆ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಡಳಿತಾರೂಢ ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. 2014 ಮತ್ತು 2017 ರಲ್ಲಿ ಕೇಸರಿಸಿನ್ಹಾ ಸೋಲಂಕಿ ಪ್ರತಿನಿಧಿಸಿದ್ದ ಮತರ್ ವಿಧಾನಸಭಾ ಸ್ಥಾನಕ್ಕೆ ಕಲ್ಪೇಶ್ ಪರ್ಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಇದು ಸೋಲಂಕಿ ಅವರು ಪಕ್ಷಾಂತರವಾಗಲು ಕಾರಣವಾಗಿದೆ.
2014 ರಲ್ಲಿ ಆಗಿನ ಶಾಸಕ ದೇವುಸಿನ್ಹ ಚೌಹಾಣ್ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕೇಸರಿಸಿನ್ಹಾ ಸೋಲಂಕಿ ಗೆದ್ದಿದ್ದರು.

ಈಗಾಗಲೇ ಅಭ್ಯರ್ಥಿಯನ್ನು ಹೆಸರಿಸಿರುವ ಆಮ್ ಆದ್ಮಿ ಪಕ್ಷ
ಬಿಜೆಪಿಯ ದೇವುಸಿನ್ಹ ಚೌಹಾಣ್ ಪ್ರಸ್ತುತ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವರಾಗಿದ್ದಾರೆ. ಅವರ ಸ್ಥಾನದಲ್ಲಿ ಉಪಚುನಾವಣೆಯಲ್ಲಿ ಗೆದ್ದಿದ್ದ ಕೇಸರಿಸಿನ್ಹಾ ಸೋಲಂಕಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಇತ್ತ, ಇದೇ ವಿಧಾನಸಭಾ ಸ್ಥಾನಕ್ಕೆ ಆಮ್ ಆದ್ಮಿ ಪಕ್ಷ ಮಹಿಪತ್‌ಸಿನ್ಹ ಚೌಹಾಣ್ ಅವರ ಹೆಸರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಾಲಿ ಬಿಜೆಪಿ ಶಾಸಕರ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಆಮ್‌ನ ಮುಂ್ಇನ ನಿಲುವು ಏನಾಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಗುಜರಾತ್ ಚುನಾವಣೆ: ಬಿಜೆಪಿ, ಆಪ್ ಭರ್ಜರಿ ಪ್ರಚಾರ
ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆ ಗುಜರಾತ್‌ನಲ್ಲಿ ಎಲ್ಲಾ ಪಕ್ಷಗಳಿಂದ ಪ್ರಚಾರವು ಭರದಿಂದ ಸಾಗುತ್ತಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್‌ನಲ್ಲಿ ಚುನಾವಣಾ ಮೆರವಣಿಗೆಗಳನ್ನು ನಡೆಸಲು ಯುವ ನಾಯಕ ರಾಘವ್ ಚಡ್ಡಾ ಮತ್ತು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಂತಹ ಸ್ಟಾರ್ ಪ್ರಚಾರಕರನ್ನು ಘೋಷಿಸಿದೆ.
ಇದೇ ವೇಳೆ ಬಿಜೆಪಿಯಿಂದ ವಿಜಯ್ ರೂಪಾನಿ ಮತ್ತು ನಿತಿನ್ ಭಾಯಿ ಪಟೇಲ್‌ಗೆ ಟಿಕೆಟ್ ಕಡಿತಗೊಂಡಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿಧಾನಸಭೆ ರೇಸ್‌ನಿಂದ ಹೊರಬಿದ್ದಿದ್ದಾರೆ. ಆದರೆ, ರೂಪಾನಿ ಮತ್ತು ನಿತಿನ್ ಪಟೇಲ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗುವುದು ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಕೋರ್ ಕಮಿಟಿಗೆ ನೇಮಿಸಲಾಗಿದೆ.












Click it and Unblock the Notifications