ಗೀಲನ್ ಬಾ ಸಿಂಡ್ರೋಮ್ ಆರ್ಭಟಕ್ಕೆ ನಲುಗಿದ ಮಧ್ಯಪ್ರದೇಶ, ಕರ್ನಾಟಕ ರಾಜ್ಯಕ್ಕೂ ಸಮಸ್ಯೆ?
ಭಾರತೀಯರಿಗೆ ಮತ್ತೊಂದು ಕಾಯಿಲೆ ಕಂಟಕವಾಗಿ ಪರಿಣಮಿಸುತ್ತಿದೆ, ಭಯಾನಕ ಕಾಯಿಗಳಲ್ಲಿ ಒಂದು ಎಂದು ಹೇಳಲಾಗುವ ಗೀಲನ್ ಬಾ ಸಿಂಡ್ರೋಮ್ ಅಥವಾ ಜಿಬಿಎಸ್ ಹಾವಳಿ ಹೆಚ್ಚಾಗಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಗೀಲನ್ ಬಾ ಸಿಂಡ್ರೋಮ್ ಹಿನ್ನೆಲೆಯಲ್ಲಿ ಈವರೆಗೂ ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ ಅಧಿಕಾರಿಗಳು. ಹಾಗಾದರೆ ಏನು ಈ ಕಾಯಿಲೆಯ ಲಕ್ಷಣ? ಯಾಕೆ ಅಷ್ಟೊಂದು ಭಯಾನಕ? ಬನ್ನಿ ತಿಳಿಯೋಣ.
ಪ್ರಮುಖವಾಗಿ ನೀಮಚ್‌ನ ಮಾನಸ ಪಟ್ಟಣದಲ್ಲಿ ಇದರ ಹಾವಳಿ ಹೆಚ್ಚಾಗಿದ್ದು, ಹತ್ತಾರು ಜನ ಗೀಲನ್ ಬಾ ಸಿಂಡ್ರೋಮ್ ಕಂಟಕಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈಗಾಗಲೆ ಮಧ್ಯಪ್ರದೇಶ ಸರ್ಕಾರ ಜಿಬಿಎಸ್ ನಿಯಂತ್ರಣ ಮಾಡಲು ನಿಯಂತ್ರಣ ಕೊಠಡಿ ಸೇರಿದಂತೆ ವಿಶೇಷ ವಾರ್ಡ್ ಸ್ಥಾಪಿಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ. ಇಷ್ಟಾದರೂ ದಿನದಿಂದ ದಿನಕ್ಕೆ ಗೀಲನ್ ಬಾ ಸಿಂಡ್ರೋಮ್ ಹವಾಳಿ ಮಾತ್ರ ಹೆಚ್ಚಾಗುತ್ತಲೇ ಇದೆ.

ಏನಿದು ವಿಚಿತ್ರ ಕಾಯಿಲೆ ಲಕ್ಷಣ?
ಗೀಲನ್ ಬಾ ಸಿಂಡ್ರೋಮ್ ಯಾಕೆ ಇಷ್ಟು ಭಯಾನಕ ಎಂದರೆ, ಮನುಷ್ಯನ ದೇಹದ ಮೇಲೆ ಅದೇ ಮನುಷ್ಯನ ಪ್ರತಿರೋಧ ವ್ಯವಸ್ಥೆಯು ದಾಳಿ ಮಾಡುತ್ತದೆ. ದೇಹದ ಪ್ರತಿರೋಧ ವ್ಯವಸ್ಥೆ ನರಮಂಡಲ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಇದಾಗಿದ್ದು, ಪಾದ & ಕೈ ಜೋಮು ಹಿಡಿಯುವುದರೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ಹೀಗೆ ಆರಂಭ ಆಗುವ ಗೀಲನ್ ಬಾ ಸಿಂಡ್ರೋಮ್ ಮುಂದಕ್ಕೆ ಸ್ನಾಯು ದೌರ್ಬಲ್ಯ ಉಂಟುಮಾಡುತ್ತಾ, ಕೀಲುಗಳಲ್ಲಿ ಭಾರಿ ನೋವು ಕಾಣಿಸಿಕೊಳ್ಳುವಂತೆ ಮಾಡುತ್ತದೆ.
ಆ ನಂತರ ಗೀಲನ್ ಬಾ ಸಿಂಡ್ರೋಮ್ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ದೇಹದಲ್ಲಿ ಹೆಚ್ಚಿಸುತ್ತಾ ಸಾಗುತ್ತದೆ. 2 ವಾರ ಅಥವಾ 4 ವಾರ ಕಳೆಯುವ ಒಳಗೆ ಭುಜ ಮತ್ತು ಕಾಲುಗಳಿಗೆ ನೋವು ಹರಡುವ ಮೂಲಕ ಕಾಯಿಲೆ ಲಕ್ಷಣ ತೀವ್ರಗೊಳ್ಳುತ್ತದೆ. ಇನ್ನು ಈ ರೋಗದ ತೀವ್ರತೆ, ಚಿಕಿತ್ಸೆಯ ಲಭ್ಯತೆ ಮತ್ತು ಗುಣಮಟ್ಟ ಆಧರಿಸಿ ಮರಣದ ಪ್ರಮಾಣ ಶೇಕಡಾ 3 ರಿಂದ ಶೇಕಡಾ 7ರ ತನಕ ಇರುತ್ತದೆ. ಆದರೆ ಈಗ ಭಾರಿ ಪ್ರಮಾಣದಲ್ಲಿ ಗೀಲನ್ ಬಾ ಸಿಂಡ್ರೋಮ್ ಹರಡುತ್ತಿರುವ ಮಧ್ಯಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ಹಾಗೇ ಭಾರತದ ಇತರ ರಾಜ್ಯಗಳಲ್ಲೂ ಗೀಲನ್ ಬಾ ಸಿಂಡ್ರೋಮ್ ಹಾವಳಿಯ ಭಯ ಮೂಡಿದೆ. ಈ ಬಗ್ಗೆ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಇಲ್ಲದೇ ಹೋದರೂ, ಆತಂಕ ಮಾತ್ರ ಇದ್ದೇ ಇದೆ.
ಸರ್ಕಾರದಿಂದಲೇ ಚಿಕಿತ್ಸೆಯ ವೆಚ್ಚ
35,000 ಜನಸಂಖ್ಯೆ ಹೊಂದಿರುವ ಮಧ್ಯಪ್ರದೇಶದ ಮಾನಸ ಪಟ್ಟಣದಲ್ಲಿ ಈವರೆಗೆ 14 ಸೋಂಕಿತರು ಪತ್ತೆ ಆಗಿ ಆತಂಕ ಹೆಚ್ಚು ಮಾಡಿದೆ. ರೋಗಿಗಳ ಚಿಕಿತ್ಸೆ ವೆಚ್ಚ ಮಧ್ಯಪ್ರದೇಶ ರಾಜ್ಯ ಸರ್ಕಾರ ಭರಿಸುತ್ತಿದೆ ಮಾನಸ ಪಟ್ಟಣದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲು, ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಜಿಬಿಎಸ್ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾನಸ ಪಟ್ಟಣ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ












Click it and Unblock the Notifications