ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಸಾಮಾನ್ಯರಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಅಂತಿಮ ಪಟ್ಟಿ ಇಲ್ಲಿದೆ

By ವಿಕಾಸ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 8: ಜುಲೈ 1ನೇ ತಾರೀಕಿನಿಂದ ಜಿಎಸ್ಟಿ ದೇಶದಾದ್ಯಂತ ಜಾರಿಗೆ ಬರಲಿದೆ. ಈ ಸಂದರ್ಭದಲ್ಲಿ ಜಿಎಸ್ಟಿಯಿಂದಾಗಿ ಹಲವು ವಸ್ತುಗಳ ಮೇಲಿನ ತೆರಿಗೆ ವ್ಯತ್ಯಯವಾಗಲಿದೆ. ಜಿಎಸ್ಟಿಯಲ್ಲೇ ಸೇವಾ ತೆರಿಗೆ, ವ್ಯಾಟ್, ಅಬಕಾರಿ ತೆರಿಗೆಗಳೆಲ್ಲಾ ವಿಲೀನಗೊಳ್ಳಲಿವೆ. ಹೀಗಾಗಿ ದೇಶದಾದ್ಯಂತ ಏಕರೂಪದ ತೆರಿಗೆ ನೀತಿ ಜಾರಿಗೆ ಬರಲಿದೆ.

'ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ'ಯು 'ಸಾಮಾನ್ಯ ಜನರಿಗೆ ಜಿಎಸ್ಟಿ' ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶ್ರೀಸಾಮಾನ್ಯರಿಗೆ ದಿನನಿತ್ಯದ ಜೀವನದಲ್ಲಿ ಬಳಕೆಗೆ ಬರುವ ವಸ್ತುಗಳ ಮೇಲಿನ ಜಿಎಸ್ಟಿ ದರಗಳ ಪಟ್ಟಿ ಇದು.

ಈ ಮಂಡಳಿಯ ಪ್ರಕಾರ ಪ್ಯಾಕ್ ಮಾಡದ ಗೋಧಿ ಹಿಟ್ಟು, ಮೈದಾ ಹಿಟ್ಟು, ಕಡಲೆ ಹಿಟ್ಟು, ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಹಸಿ ತರಕಾರಿಗಳು ಮತ್ತು ಗರ್ಭನಿರೋಧಕಗಳು ಜಿಎಸ್ಟಿಯಿಂದ ಮುಕ್ತವಾಗಿವೆ.

ಇನ್ನು ಇತರ ವಸ್ತುಗಳ ಮೇಲಿನ ಜಿಎಸ್ಟಿ ದರಗಳು ಹೀಗಿವೆ,

ಇವುಗಳ ಮೇಲೆ ತರಿಗೆ ಇಲ್ಲ

ಇವುಗಳ ಮೇಲೆ ತರಿಗೆ ಇಲ್ಲ

ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ.

ಶಿಕ್ಷಣ ಆರೋಗ್ಯಕ್ಕಿಲ್ಲ ಜಿಎಸ್ಟಿ ಹೊರೆ

ಶಿಕ್ಷಣ ಆರೋಗ್ಯಕ್ಕಿಲ್ಲ ಜಿಎಸ್ಟಿ ಹೊರೆ

ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

 ಶೇಕಡಾ 5 ಜಿಎಸ್ಟಿ

ಶೇಕಡಾ 5 ಜಿಎಸ್ಟಿ

ಸಕ್ಕರೆ, ಚಹಾ ಪುಡಿ, ಹುರಿದ ಕಾಫಿ ಬೀಜ, ಅಡುಗೆ ಎಣ್ಣೆ, ಹಾಲಿನ ಪುಡಿ, ಮಕ್ಕಳ ಹಾಲಿನ ಆಹಾರಗಳು, ಪ್ಯಾಕ್ ಮಾಡಿ ಪನ್ನೀರ್, ಹತ್ತಿ ನೂಲು, ಹುಲ್ಲಿನಿಂದ ತಯಾರಿಸಿದ ಚಾಪೆ, ಕುರ್ಚಿ ಮುಂತಾದ ವಸ್ತುಗಳು, 500 ರೂಪಾಯಿವರೆಗೆ ಚಪ್ಪಲಿಗಳು, ಸುದ್ದಿ ಪತ್ರಿಕೆಗಳ ಮುದ್ರಣ, ಸಾರ್ವಜನಿಕ ಪೂರೈಕೆಯ ಸೀಮೆ ಎಣ್ಣೆ, ಮನೆ ಬಳಕೆಯ ಗ್ಯಾಸ್, ಕಲ್ಲಿದ್ದಲು, ಸೋಲಾರ್ ಪ್ಯಾನಲ್ ಗಳು, ಒಂದು ಸಾವಿರ ರೂಪಾಯಿ ಒಳಗಿನ ಉಡುಪುಗಳು ಈ ವ್ಯಾಪ್ತಯಲ್ಲಿ ಬರುತ್ತವೆ.

ಶೇಕಡಾ 12 ಜಿಎಸ್ಟಿ

ಶೇಕಡಾ 12 ಜಿಎಸ್ಟಿ

ಬೆಣ್ಣೆ, ತುಪ್ಪ, ಮೊಬೈಲ್, ಗೇರು ಬೀಜ, ಅಲ್ಮೊಂಡ್, ಸಾಸ್, ಹಣ್ಣಿನ ಜ್ಯೂಸ್, ಪ್ಯಾಕ್ ಮಾಡಿದ ಎಳನೀರು, ಅಗರಬತ್ತಿ, ಛತ್ರಿ, 1,000 ರೂಪಾಯಿ ಮೀರಿದ ಉಡುಪುಗಳು ಶೇಕಡಾ 12ರ ತೆರಿಗೆಯನ್ನು ವ್ಯಾಪ್ತಿಗೆ ಬರಲಿವೆ.

ಶೇಕಡಾ 18 ಜಿಎಸ್ಟಿ

ಶೇಕಡಾ 18 ಜಿಎಸ್ಟಿ

ಕೂದಲಿಗೆ ಬಳಸುವ ಎಣ್ಣೆ, ಸೋಪ್, ಹಲ್ಲುಜ್ಜುವ ಪೇಸ್ಟ್, ಪಾಸ್ತಾ, ಕಾರ್ನ್ ಫ್ಲೇಕ್ಸ್, ಜ್ಯಾಮ್, ಸೂಪ್, ಐಸ್ ಕ್ರೀಂ, ಟಿಶ್ಯೂ, ಕಬ್ಬಿಣ, ಫೌಂಟೇನ್ ಪೆನ್, ಕಂಪ್ಯೂಟರ್, 500 ರೂಪಾಯಿ ಮೀರಿದ ಚ್ಪಲಿಗಳು, ಕೈಯಿಂದ ತಯಾರಿಸಿದ ನೂಲು, ಕೈಗಾರಿಕಾ ಮಧ್ಯವರ್ತಿಗಳು, ಕೈಗಾರಿಕಾ ಸರಕುಗಳು ಶೇಕಡಾ 18 ತೆರಿಗೆ ವ್ಯಾಪ್ತಿಗೆ ಬರಲಿವೆ.

ಶೇಕಡಾ 28 ಜಿಎಸ್ಟಿ

ಶೇಕಡಾ 28 ಜಿಎಸ್ಟಿ

ದೀರ್ಘ ಬಾಳಿಕೆಯ ವಸ್ತುಗಳು, ಸಿಮೆಂಟ್, ಚ್ಯೂಯಿಂಗ್ ಗಂ, ಸುಗಂಧ ದ್ರವ್ಯಗಳು, ಶ್ಯಾಂಪೂ, ಸೌಂದರ್ಯ ವರ್ಧಕಗಳು, ಪಟಾಕಿ ಮತ್ತು ಬೈಕ್ ಗಳು ಶೇಕಡಾ 28 ತೆರಿಗೆಗೆ ಒಳಪಡಲಿವೆ.

English summary
The Central Board of Excise and Customs (CBEC), has released a list of GST rates - titled "GST for common man." The GST is slated for a July 1 rollout. The common man will experience several changes as the new tax regime kicks into service. GST will subsume all major levies including excise, service tax and VAT or value-added tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X