ಜಿಎಸ್ಟಿ ಮಸೂದೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನಿಂದ ಬೆಂಬಲ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 02: ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು (ಜಿಎಸ್ಟಿ) ರಾಜ್ಯಸಭೆಯಲ್ಲಿ ಬುಧವಾರ ಮಂಡಿಸಲು ಮೋದಿ ನೇತೃತ್ವದ ಎನ್ ಡಿಎ ಸಿದ್ಧವಾಗಿದೆ. ಕೆಲ ತಿದ್ದುಪಡಿಗಳೊಂದಿಗೆ ಜಿಎಸ್ ಟಿ ಒಪ್ಪಲು ಕಾಂಗ್ರೆಸ್ ಕೂಡಾ ಸಿದ್ಧವಾಗಿದೆ.

ಈಗಾಗಲೇ ಎಲ್ಲಾ ರಾಜ್ಯಗಳ ವಿಶ್ವಾಸ ಪಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಸರಕು ಮತ್ತು ಸೇವಾ ತೆರಿಗೆ GST (Goods and Services Tax Bill) ವಿಧೇಯಕ ಮೂಲಕ ದೇಶದಾದ್ಯಂತ ಏಕರೂಪ ತೆರಿಗೆ ಜಾರಿಗೊಳಿಸಲಾಗುತ್ತದೆ. [ಜಿಎಸ್ಟಿ(GST) ಬಿಲ್ ಜಾರಿ: 9 ಲಾಭ ತಪ್ಪದೆ ಪಡೆಯಿರಿ]

ಸಾಮಾನ್ಯವಾಗಿ ಒಂದು ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವವರೆಗೆ ಅನೇಕ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಪ್ರತಿ ರಾಜ್ಯಗಳು ಇದಕ್ಕೆ ಸೆಸ್, ವ್ಯಾಟ್ ಕೂಡಾ ಸೇರಿಸುತ್ತವೆ. ಆದರೆ, ಜಿಎಸ್ಟಿ ಬಿಲ್ ಜಾರಿ ಆದರೆ ಉತ್ಪಾದನೆ, ಮಾರಾಟ ಮತ್ತು ಬಳಕೆ ಮೇಲೆ ಭಾರತದಾದ್ಯಂತ ಏಕರೂಪದ ತೆರಿಗೆಯನ್ನು ಮಾತ್ರ ವಿಧಿಸಲಾಗುವುದು.

GST bill will be passed if obstacles not posed: Congress

ಇದರಿಂದಾಗಿ ದೇಶದ ಅಭಿವೃದ್ಧಿಯಲ್ಲಿ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಲ್ಲಿ ತುಂಬಾ ಪ್ರಯೋಜನಕಾರಿ ಆಗಲಿದೆ. ಜಿಎಸ್ಟಿ ಮಸೂದೆ ಜಾರಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. [ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ]

2006ರಲ್ಲಿ ಕಾಂಗ್ರೆಸ್ ಸರ್ಕಾರವೇ ಮೊದಲಿಗೆ ಜಿಎಸ್ ಟಿ ಜಾರಿಗೊಳಿಸಲು ಯತ್ನಿಸಿತ್ತು. 2011ರಲ್ಲಿ ಯುಪಿಎ ಸರ್ಕಾರ ಈ ಕುರಿತು ಲೋಕಸಭೆಯಲ್ಲಿ ಮಸೂದೆ ಮಂಡಿಸಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಎಸ್ ಟಿಯಲ್ಲಿ ತಿದ್ದುಪಡಿಗೆ ಕಾಂಗ್ರೆಸ್ ಆಗ್ರಹಿಸಿತು. ಈ ತಿದ್ದುಪಡಿಗಳೊಂದಿಗೆ ಮಸೂದೆಗೆ ಬೆಂಬಲಿಸುವುದಾಗಿ ಸಂಸದ ಅಭಿಶೇಕ್ ಮನು ಸಿಂಘ್ವಿ ಹೇಳಿದ್ದಾರೆ. [ಮೋದಿ ಕೈಗೆ 29 ಅಂಶಗಳ 94 ಪುಟಗಳ ಬೇಡಿಕೆ ಪಟ್ಟಿ ಕೊಟ್ಟ ಜಯಲಲಿತಾ]

ಶೇ1 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರ, ಉತ್ಪಾದಕ ರಾಜ್ಯಗಳಿಗೆ ಈ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಜಿಎಸ್ ಟಿ ಅಡಿಯಲ್ಲಿ ಬರುವ ತೆರಿಗೆ ಗರಿಷ್ಠ ಮಿತಿ ಇರಬೇಕು ಹಾಗೂ ಇದನ್ನು ತಿದ್ದುಪಡಿ ವಿಧೇಯಕದಲ್ಲಿ ಅಳವಡಿಸಬೇಕು ಎಂದು ಕಾಂಗ್ರೆಸ್ ಕೇಳಿಕೊಂಡಿದೆ. ಈ ಎಲ್ಲಾ ತಿದ್ದುಪಡಿಯೊಂದಿಗೆ ವಿತ್ತ ಸಚಿವಾಲಯ ವಿಧೇಯಕ ಮಂಡಿಸಿ, ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A day ahead of the discussion on the Goods and Services Tax bill in the Rajya Sabha, the Congress on Tuesday said the long-pending legislation will be passed "if there is no obstacle".
Please Wait while comments are loading...