ಜನ್ಮದಿನದಂದು ಜಾತ್ಯತೀತತೆ ಬಗ್ಗೆ ಮಾತಾಡಿದ ಶಾರುಖ್

ನವದೆಹಲಿ, ನವೆಂಬರ್. 02: ಅಸಹಿಷ್ಣುತೆ ಮತ್ತು ಅಸಹನೆ ಕುರಿತ ಚರ್ಚೆಗೆ ಇದೀಗ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸಹ ಸೇರ್ಪಡೆಗೊಂಡಿದ್ದಾರೆ. ಸೋಮವಾರ 50ನೇ ಜನ್ಮದಿನ ಆಚರಿಸಿಕೊಂಡ ಖಾನ್, ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶಭಕ್ತ ಮಾಡಬಹುದಾದ ದೊಡ್ಡ ತಪ್ಪೆಂದರೆ ದೇಶದ ಜಾತ್ಯತೀತತೆಯ ವಿರುದ್ಧ ಹೋಗುವುದು. ಇದು ಎಲ್ಲ ಕಾಲದಲ್ಲೂ ಒಂದೆಲ್ಲಾ ಒಂದು ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಬದಲಾದ ಸಮಾಜದಲ್ಲಿ ಇದರ ಅಗತ್ಯವಾದರೂ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ಹಿಂದೆ ಅಸಹನೆ ಇದೆ. ದೇಶಭಕ್ತಿಯ ವಿಜೃಂಭಣೆ ಮಾಡುವ ರೀತಿಯ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂದು ಖಾನ್ ಹೇಳಿದರು. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಸಹ ಅಸಹನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹೇರುವ ಅಧಿಕಾರ ನಮಗಿಲ್ಲ

ಹೇರುವ ಅಧಿಕಾರ ನಮಗಿಲ್ಲ

ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂದು ಜನರ ಮೇಲೆ ಹೇರುವ ಅಧಿಕಾರ ನಮಗಿಲ್ಲ. ದೇಶಭಕ್ತ ಮಾಡಬಹುದಾದ ದೊಡ್ಡ ತಪ್ಪೆಂದರೆ ದೇಶದ ಜಾತ್ಯತೀತತೆಯ ವಿರುದ್ಧ ಹೋಗುವುದು. ನಿಜವಾದ ದೇಶಭಕ್ತಿಗೆ ಒಂದು ವ್ಯಾಖ್ಯಾನ ನೀಡುವುದು ಒಳಿತು ಎಂದು ಖಾನ್ ಹೇಳಿದ್ದಾರೆ.

ಸಾಹಿತಿಗಳ ಹತ್ಯೆ

ಸಾಹಿತಿಗಳ ಹತ್ಯೆ

ಕರ್ನಾಟಕದ ಚಿಂತಕ, ಸಂಶೋಧಕ ಎಂಎಂ ಕಲಬುರ್ಗಿ ಅವರ ಹತ್ಯೆ, ಉತ್ತರ ಪ್ರದೇಶದ ಗೋಮಾಂಸ ಪ್ರಕರಣ, ಹರ್ಯಾಣದ ಮಕ್ಕಳ ಸುಟ್ಟ ಪ್ರಕರಣ, ದಾವಣಗೆರೆಯಲ್ಲಿ ಯುವ ಲೇಖಕನ ಮೇಲೆ ಹಲ್ಲೆ ಬಗೆಯ ಪ್ರಕರಣಗಳು ಈ ಬಗೆಯ ಚರ್ಚೆಗೆ ನಾಂದಿ ಹಾಡಿದವು.

ಪ್ರಶ್ನೆ ಮಾಡುವ ಹಕ್ಕು

ಪ್ರಶ್ನೆ ಮಾಡುವ ಹಕ್ಕು

ಯಾವುದೇ ವಿಚಾರವನ್ನು ಇಲ್ಲವೇ ಘಟನೆಯನ್ನು ಸಹಿಷ್ಣುತೆ ಆಧಾರದಲ್ಲಿ ಪರಿಗಣಿಸಿದರೆ ಹಿಂಸೆಯಿಂದ ದೂರವಿರಲು ಸಾಧ್ಯ ವ್ಯಕ್ತಿಯ ಪ್ರಶ್ನೆ ಮಾಡುವ ಸ್ವಾತಂತ್ರ್ಯ ರಕ್ಷಣೆ ಮಾಡಬೇಕಿದೆ ದೆಹಲಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಹೇಳಿದ್ದರು.

ಭಯದಲ್ಲಿ ಬದುಕುತಿಹರು

ಭಯದಲ್ಲಿ ಬದುಕುತಿಹರು

ಅಲ್ಪಸಂಖ್ಯಾತ ಸಮುದಾಯ ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲ ನಿವಾರಣೆಯಾಗದ ಹೊರತು ಆರ್ಥಿಕ ಭದ್ರತೆ ಸಾಧ್ಯವಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+