ಕೇರಳ: ಅತ್ಯಾಚಾರ ಆರೋಪಿಗೆ ಸಾರ್ವಜನಿಕರಿಂದ ಏಟು

ತಿರುವನಂತಪುರಂ, ಡಿಸೆಂಬರ್ 7: ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ನಡೆಯುತ್ತಿದ್ದಂತೆಯೇ ಅತ್ಯಾಚಾರ ಪ್ರಕರಣಗಳ ಆರೋಪಿಗಳ ಮೇಲೆ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಪರಿಣಾಮ ಹಲ್ಲೆಯಂತಹ ಘಟನೆಗಳು ನಡೆಯುತ್ತಿದೆ. ಶನಿವಾರವೇ ಈ ರೀತಿಯ ಎರಡು ಘಟನೆ ವರದಿಯಾಗಿದೆ.

ಕೇರಳದಲ್ಲಿ ನಡೆದಿದ್ದ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಜನರ ಗುಂಪು ಹೀನಾಮಾನ ಥಳಿಸಿದ ಘಟನೆ ಪಲಕ್ಕಾಡ್ ಜಿಲ್ಲೆಯ ವಲಯಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಆರೋಪಿಗಳಲ್ಲಿ ಒಬ್ಬನಾದ ಸಿ. ಮಧು, ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಆರೋಪಿ. ದಾಳಿಯಲ್ಲಿ ಆತ ಗಾಯಗೊಂಡಿದ್ದು, ಪಲಕ್ಕಾಡ್‌ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿ ಮತ್ತು 4-5 ಜನರ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಅದೇ ಹಲ್ಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನನ್ನು ಥಳಿಸಿ ರಸ್ತೆಯ ಬದಿಯಲ್ಲಿ ಹಾಗೆಯೇ ಬಿಟ್ಟು ಹೋಗಿದ್ದರು.

ಎರಡು ವರ್ಷದ ಹಿಂದೆ ಕೇರಳವನ್ನು ತಲ್ಲಣಗೊಳಿಸಿದ್ದ ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಆದರೆ ಎಲ್ಲ ಮೂರೂ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ ಆರೋಪದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಸಹೋದರಿಯರ ಅತ್ಯಾಚಾರ, ಕೊಲೆ

ಸಹೋದರಿಯರ ಅತ್ಯಾಚಾರ, ಕೊಲೆ

ಕೇರಳದಲ್ಲಿ ಪಲಕ್ಕಾಡ್‌ನ ವಲಯಾರ್ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ಮೃತದೇಹ ಆಕೆಯ ಶಿಥಿಲವಾದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಲವು ವ್ಯಕ್ತಿಗಳು ಆಕೆಯ ಮೇಲೆ ಹಲವು ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿತ್ತು. ಆಕೆಯ ಸಾವಿನ ಬಳಿಕ ಬಾಲಕಿ 9 ವರ್ಷದ ತಂಗಿ, ಆಕೆ ಸತ್ತ ದಿನ ಇಬ್ಬರು ವ್ಯಕ್ತಿಗಳು ಮನೆಯಿಂದ ಹೊರಗೆ ಓಡಿದ್ದನ್ನು ಕಂಡಿದ್ದಾಗಿ ಹೇಳಿದ್ದಳು.

ಅದೇ ಜಾಗದಲ್ಲಿ ತಂಗಿ ಶವ

ಅದೇ ಜಾಗದಲ್ಲಿ ತಂಗಿ ಶವ

ಎರಡು ತಿಂಗಳ ಬಳಿಕ ಆ ತಂಗಿ ಕೂಡ ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಈ ಘಟನೆ ಕೇರಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಒತ್ತಡಕ್ಕೆ ಬಿದ್ದ ಪೊಲೀಸರು, ಆ ಕುಟುಂಬವಿದ್ದ ಮನೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಮೂವರನ್ನು ಬಂಧಿಸಿದ್ದರು.

ಮಗಳ ಮೇಲೆ ಪೆಟ್ರೋಲ್ ಚೆಲ್ಲಿದ ಮಹಿಳೆ

ಮಗಳ ಮೇಲೆ ಪೆಟ್ರೋಲ್ ಚೆಲ್ಲಿದ ಮಹಿಳೆ

ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆ ಎದುರು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪೆಟ್ರೋಲ್ ಸುರಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಆರು ವರ್ಷದ ಬಾಲಕಿಯನ್ನು ರಕ್ಷಿಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿದ್ದಾರೆ. ಮಗಳ ಮೇಲೆ ಪೆಟ್ರೋಲ್ ಸುರಿದ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Array

ಆರೋಪಿ ಮೇಲೆ ವಕೀಲನಿಂದ ಹಲ್ಲೆ

ಅತ್ಯಾಚಾರ ಆರೋಪಿಯ ಮೇಲೆ ವಕೀಲರೊಬ್ಬರು ಕೋರ್ಟ್ ಆವರಣದಲ್ಲಿಯೇ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ನಡೆದಿದೆ. ಡಿ. 2ರಂದು ಮೌಟೌನ್ ಪ್ರದೇಶದಲ್ಲಿ ಪೋಷಕರ ಜತೆ ರಾತ್ರಿ ಫುಟ್‌ಪಾತ್‌ನಲ್ಲಿ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಉದ್ಯಮಿಯೊಬ್ಬರ ಮಗ ಅಂಕಿತ್ ವಿಜಯ್‌ವರ್ಗಿಯಾ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಳಿಕ ತನ್ನ ಗರ್ಭಿಣಿ ಪತ್ನಿಯ ಮನೆಗೆ ತೆರಳಿದ್ದ. ಒಂದು ಸಿಸಿಟಿವಿ ದೃಶ್ಯದಲ್ಲಿ ಮಾತ್ರ ಅಂಕಿತ್ ಬಾಲಕಿಯನ್ನು ಹೊತ್ತೊಯ್ಯುವುದು ಕಾಣಿಸಿತ್ತು. ಅದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು. ಅವನನ್ನು ಮಹೂ ನ್ಯಾಯಾಲಯಕ್ಕೆ ಕರೆತರುವಾಗ ವಕೀಲರೊಬ್ಬರು ಥಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+