Coconut Business: ತೆಂಗಿನಕಾಯಿ ವ್ಯವಹಾರದಿಂದ ಇವರ ಮಾಸಿಕ ಗಳಿಕೆ 20 ಲಕ್ಷ ರೂ.! ಇದೇಗೆ ಸಾಧ್ಯ?

Coconut Business: ತೆಂಗಿನ ಮರವನ್ನು ನೋಡಿದ ಕೂಡಲೇ ಮೊದಲು ಕಣ್ಣಿಗೆ ಬೀಳೊದೇ ಎಳನೀರು. ಮತ್ತೆ ನೆನಪಿಗೆ ಬರೋದು ಕಾಯಿ ಚಟ್ನಿ ಅಥವಾ ಕಾಯಿ ಬಳಸಿ ಮಾಡಬಹುದಾದ ರುಚಿಕರವಾದ ಭಕ್ಷ್ಯಗಳು. ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಯಾಕೆಂದರೆ ಅದರ ಯಾವ ಭಾಗವನ್ನೂ ಎಸೆಯುವ ಅವಶ್ಯಕತೆಯೇ ಇಲ್ಲ. ಆ ಮರದ ಪ್ರತಿಯೊಂದು ಭಾಗವೂ ಕೂಡಾ ಪ್ರಯೋಜನಕಾರಿಯೇ. ಇನ್ನು ತೆಂಗಿನಕಾಯಿ ಮಾತ್ರವಲ್ಲ ಅದರ ಸಿಪ್ಪೆ, ಚಿಪ್ಪು, ನಾರು, ಸೋಗೆ ಎಲ್ಲವನ್ನೂ ಮಾರಿ ಹಣ ಗಳಿಸುವುದು ಕೂಡಾ ಸಾಧ್ಯ. ಆದರೆ ಈ ತೆಂಗಿನ ಮರದ ಉತ್ಪನ್ನ ಅಥವಾ ಕಾಯಿಯನ್ನು ಬಳಸಿ ದೊಡ್ಡ ಮಟ್ಟದ ಬ್ಯುಸಿನೆಸ್‌ ಶುರು ಮಾಡಬಹುದು ಅದರಲ್ಲಿ ಯಶಸ್ಸು ಕಾಣಬಹುದು ಎನ್ನುವ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ?

ಜೀವನದ ದಿಕ್ಕೇ ಬದಲಾಯಿಸಿದ ವ್ಯವಹಾರ

ಕೇರಳದ ಸುಮಿಲಾ ಜಯರಾಜ್ ಈ ಕೆಲಸಕ್ಕೆ ಕೈ ಹಾಕಿದವರು. ಇವರ ಬ್ಯುಸಿನೆಸ್‌ನ ಮೂಲವೇ ತೆಂಗಿನ ಮರ. ಇವರು ಈ ವ್ಯಾಪಾರ ಆರಂಭಿಸಿದ್ದೇ ತಡ ಇವರ ಜೀವನದ ದಿಕ್ಕೇ ಬದಲಾಯಿತು. ಒಂದು ಕಾಲದಲ್ಲಿ ತಮ್ಮ ಕುಟುಂಬದೊಂದಿಗೆ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ಸುಮಿಲಾ ಈಗ ಗ್ರೀನ್‌ಔರಾ ಎಂಬ ಕಂಪನಿಯ ಒಡತಿ. ಈ ಕಂಪನಿ ತೆಂಗಿನಕಾಯಿಯಿಂದ ತಯಾರಿಸಿದ ಅನೇಕ ಉತ್ಪನ್ನಗಳನ್ನು ಉತ್ಪಾದಿಸಿ ಮಾರುತ್ತದೆ. ಇವುಗಳಲ್ಲಿ ವರ್ಜಿನ್ ತೆಂಗಿನ ಎಣ್ಣೆ, ತೆಂಗಿನ ಹಾಲಿನ ಪುಡಿ, ಉಪ್ಪಿನಕಾಯಿ, ಚಟ್ನಿ ಮತ್ತು ಸಾಂಬಾರ್ ಪುಡಿ ಮುಂತಾದ ಉತ್ಪನ್ನಗಳು ಸೇರಿವೆ. ದಿ ಬೆಟರ್ ಇಂಡಿಯಾ ವರದಿ ಪ್ರಕಾರ, ಕಂಪನಿಯ ಸರಾಸರಿ ಮಾಸಿಕ ಮಾರಾಟ ಸುಮಾರು 20 ಲಕ್ಷ ರೂ.ಮೌಲ್ಯದ್ದು. ಈ ಕಂಪನಿ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಮಲೇಷ್ಯಾದಲ್ಲಿ ಕೂಡಾ ಗ್ರಾಹಕರನ್ನು ಹೊಂದಿದೆ.

Coconut Business

ಶಿಕ್ಷಣದಿಂದ ಕುಟುಂಬಕ್ಕೆ ಪಯಣ

ಕೇರಳದ ಎಂಗಂಡಿಯೂರಿನಲ್ಲಿ ಜನಿಸಿದ ಸುಮಿಲಾ ಪ್ರಾಣಿಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಮದುವೆಯ ನಂತರ, ಅವರು ಮುಂಬೈಗೆ ತೆರಳಿದರು. ಅವಳಿ ಮಕ್ಕಳ ಜನನದೊಂದಿಗೆ, ಕುಟುಂಬ ಮತ್ತು ಮನೆಯ ಜವಾಬ್ದಾರಿಗಳೇ ಅವರ ಪ್ರಪಂಚವಾಗಿ ಬಿಡುತ್ತದೆ. ಮನೆ ಕೆಲಸದಿಂದ ಪುರುಸೊತ್ತು ಸಿಗುವುದೇ ಕಷ್ಟವಾಗುತ್ತದೆ. ಕೇರಳದ ಎಂಗಂಡಿಯೂರಿನಲ್ಲಿ ಜನಿಸಿದ ಸುಮಿಲಾ, ಹಲವಾರು ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಇರಲು ಕೇರಳಕ್ಕೆ ವಾಪಾಸಾಗುತ್ತಾರೆ. ಅವರ ಪತಿ ಉದ್ಯೋಗಕ್ಕಾಗಿ ದುಬೈಗೆ ಹೋಗುತ್ತಾರೆ. ಅವರ ಮಕ್ಕಳು ಸಹ ಅಧ್ಯಯನಕ್ಕಾಗಿ ವಿದೇಶದ ದಾರಿ ಹಿಡೀತಾರೆ. ಈ ಸಮಯದಲ್ಲಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಆದ ಐಡೆಂಟಿಟಿ ಇರಬೇಕು ಎನ್ನುವ ಸತ್ಯದ ಅರಿವು ಅವರಿಗಾಗುತ್ತದೆ.

ತೆಂಗಿನ ಎಣ್ಣೆ ಉತ್ಪಾದಿಸುವ ಕಂಪನಿಯಲ್ಲಿ ಕೆಲಸ

ತಾನು ಏನಾದರೂ ಮಾಡಬೇಕು ಎನ್ನುವ ಉತ್ಸಾಹದಿಂದ ಸುಮಿಲಾ ಸ್ಥಳೀಯ ತೆಂಗಿನ ಎಣ್ಣೆ ಉತ್ಪಾದಿಸುವ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಇದು ತೆಂಗಿನಕಾಯಿ ಉತ್ಪನ್ನಗಳ ಬಗೆಗಿನ ಆಸಕ್ತಿ ಹೆಚ್ಚುವುದಕ್ಕೆ ಕಾರಣವಾಯಿತು. ಅವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಮತ್ತು ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ ಸಂವಹನ ನಡೆಸುತ್ತಿದ್ದರು. ಅವರ ಕಠಿಣ ಪರಿಶ್ರಮದ ಪರಿಣಾಮವಾಗಿ ಕಂಪನಿಗೆ ಲಂಡನ್‌ನಿಂದ ತನ್ನ ಮೊದಲ ಆರ್ಡರ್‌ ಸಿಗುತ್ತದೆ. ಈ ಅನುಭವವು ನಂತರ ಅವಳ ಸ್ವಂತ ವ್ಯವಹಾರಕ್ಕೆ ಅಡಿಪಾಯವಾಯಿತು.

ಮನೆಯ ಹತ್ತಿರದ ಸಣ್ಣ ಶೆಡ್‌ನಿಂದ ಪ್ರಾರಂಭ

ಸುಮಿಲಾ ತನ್ನ ಕೆಲಸವನ್ನು ಬಿಟ್ಟು ಸ್ವಂತ ವ್ಯವಹಾರ ಪ್ರಾರಂಭಿಸುವ ನಿರ್ಧಾರಕ್ಕೆ ಬರುತ್ತಾರೆ. ಇವರ ಈ ವ್ಯವಹಾರ ದೊಡ್ಡ ಕಾರ್ಖಾನೆ ಅಥವಾ ದೊಡ್ಡ ಹೂಡಿಕೆಯೊಂದಿಗೆ ಪ್ರಾರಂಭವಾಗಲಿಲ್ಲ. ಬದಲಿಗೆ ತನ್ನ ಮನೆಯ ಬಳಿ ಒಂದು ಸಣ್ಣ ಶೆಡ್‌ನಲ್ಲಿ ಇವರ ಹೊಸ ಬ್ಯುಸಿನೆಸ್‌ ಶುರುವಾಗುತ್ತದೆ. ಅವರು ವರ್ಜಿನ್ ತೆಂಗಿನ ಎಣ್ಣೆಯನ್ನು ಉತ್ಪಾದಿಸಲು ಸೆಂಟ್ರಿಫ್ಯೂಗಲ್‌ ಟೆಕ್ನಿಕ್‌ ಅನ್ನು ಬಳಸುತ್ತಾರೆ. ತೆಂಗಿನಕಾಯಿಯ ಹೆಚ್ಚಿನ ನೈಸರ್ಗಿಕ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಉಳಿಸಿಕೊಳ್ಳುವ ಎಣ್ಣೆಯನ್ನು ಉತ್ಪಾದಿಸುವುದು ಅವರ ಗುರಿಯಾಗಿತ್ತು. ಆದರೆ ವ್ಯವಹಾರವನ್ನು ಪ್ರಾರಂಭಿಸುವುದು ಸುಲಭವಲ್ಲ. ಸಾಲವನ್ನು ಪಡೆಯುವುದರಿಂದ ಹಿಡಿದು ಗ್ರಾಹಕರಿಗೆ ತೆಂಗಿನ ಉತ್ಪನ್ನಗಳ ಪ್ರಯೋಜನಗಳನ್ನು ವಿವರಿಸುವವರೆಗೆ, ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು.

ಒಂದು ಉತ್ಪನ್ನದಿಂದ ಒಂದು ಕಾರವಾನ್ ಬೆಳೆಯಿತು

ತೊಂದರೆಗಳ ಹೊರತಾಗಿಯೂ, ಸುಮಿಲಾ ಹಿಂದೆ ಸರಿಯಲಿಲ್ಲ. 2021 ರಲ್ಲಿ, ಅವರು ಅಧಿಕೃತವಾಗಿ ಗ್ರೀನ್‌ಔರಾವನ್ನು ಪ್ರಾರಂಭಿಸಿದರು. ಕಂಪನಿಯು ನಂತರ ವರ್ಜಿನ್ ತೆಂಗಿನ ಎಣ್ಣೆಯನ್ನು ಮೀರಿ ತನ್ನ ವ್ಯವಹಾರವನ್ನು ವಿಸ್ತರಿಸಿತು. ಎನ್ಣೆಯೊಂದಿಗೆ ಚಟ್ನಿಗಳು, ಉಪ್ಪಿನಕಾಯಿ, ಹಾಲಿನ ಪುಡಿ ಮತ್ತು ಸಾಂಬಾರ್ ಪುಡಿ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+