ಜಾರ್ಖಂಡ್‌ನಲ್ಲಿ ಅಮೋಘ ಮತದಾನ: ಮತದಾನ ಹೆಚ್ಚಳಕ್ಕೆ ಕಾರಣವೇನು ?

ಜಾರ್ಖಂಡ್‌ನಲ್ಲಿ ಬುಧವಾರ (ನವೆಂಬರ್‌ 13) ಮೊದಲ ಹಂತದ ವಿಧಾನಸಭೆ ಚುನಾವಣೆ ನಡೆದಿದ್ದು. ಇಲ್ಲಿನ ಮತದಾರರು ಅತ್ಯಂತ ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ಜಾರ್ಖಂಡ್ ಸಣ್ಣ ರಾಜ್ಯಗಳಲ್ಲಿ ಒಂದಾಗಿದೆ. ಆದರೆ, ಈ ಬಾರಿ ಇಲ್ಲಿ ಭರ್ಜರಿ ಚುನಾವಣೆ ನಡೆದಿದೆ. ಅಲ್ಲದೇ ಹಲವು ಕಾರಣಗಳಿಗೆ ಈ ಬಾರಿಯ ಜಾರ್ಖಂಡ್ ಚುನಾವಣೆ ಮಹತ್ವ ಪಡೆದುಕೊಂಡಿದೆ. ಜಾರ್ಖಂಡ್‌ ರಾಜ್ಯವನ್ನು ರಚನೆ ಮಾಡಿದ್ದು ಬಿಜೆಪಿ, ಇಲ್ಲಿ ವಿಕಸಿತ ಭಾರತದ ಅಡಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ಕಲ್ಪಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು.

ಜಾರ್ಖಂಡ್‌ನಲ್ಲಿ ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯವರೆಗೆ ಶೇ.46.25ರಷ್ಟು ಮತದಾನವಾಗಿದೆ. ಬೆಳಗ್ಗೆ 11 ಗಂಟೆಯವರೆಗೆ ಖುಂತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.34.12ರಷ್ಟು ಮತದಾನವಾಗಿದೆ ಗುಮ್ಲಾದಲ್ಲಿ ಶೇ.33.86, ಲೋಹರ್ಡಗಾದಲ್ಲಿ ಶೇ.33.44 ಮತ್ತು ಸಿಮ್ಡೆಗಾದಲ್ಲಿ ಶೇ.33.18ರಷ್ಟು ಮತದಾನವಾಗಿದೆ.

Great vote turnout in Jharkhand What is the reason for the increase in turnout

43 ಕ್ಷೇತ್ರಗಳಲ್ಲಿ 17 ಸಾಮಾನ್ಯ ಸ್ಥಾನಗಳು, 20 ಪರಿಶಿಷ್ಟ ಪಂಗಡ ಮತ್ತು ಆರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿದೆ. ಉಳಿದ 38 ಸ್ಥಾನಗಳಿಗೆ ನವೆಂಬರ್ 20 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಇನ್ನು ಮಧ್ಯಾಹ್ನ 3 ಗಂಟೆಯವರೆಗೆ 43 ಸ್ಥಾನಗಳಲ್ಲಿ 59% ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ವರದಿಯಾಗಿದೆ.

ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಕೊನೆಯ ಹಂತದಲ್ಲಿ ಇನ್ನಷ್ಟು ಮತದಾನ ಆಗುವ ಸಾಧ್ಯತೆ ಇದೆ. ಜಾರ್ಖಂಡ್ರಾಜ್ಯವು ಸಣ್ಣ ರಾಜ್ಯವಾಗಿದ್ದರು. ಇಲ್ಲಿ ಈ ಬಾರಿ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಜಾರ್ಖಂಡ್‌ನಲ್ಲಿ ಭದ್ರತೆಯ ದೃಷ್ಟಿಯಿಂದ ಎರಡು ಹಂತದಲ್ಲಿ ವಿಧಾನಸಭೆ ಚುನಾವನೆಯನ್ನು ನಡೆಸಲಾಗುತ್ತಿದೆ.

ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿದ್ದು, ನವೆಂಬರ್‌ 13ರಂದು ಮೊದಲ ಹಂತದಲ್ಲಿ ಒಟ್ಟು 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ನವೆಂಬರ್‌ 20ಕ್ಕೆ ಎರಡನೇ ಹಂತದಲ್ಲಿ ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು ನವೆಂಬರ್‌ 20ರಂದು ಮಹಾರಾಷ್ಟ್ರದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮಹಾರಾಷ್ಟ್ರ ವಿಧಾನಸಭೆ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಫಲಿತಾಂಶವು ನವೆಂಬರ್‌ 23ರಂದು ಪ್ರಕಟವಾಗಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗದಲ್ಲೂ ಉಪ ಚುನಾವಣೆ ನಡೆಯುತ್ತಿದ್ದು, ಈ ಉಪ ಚುನಾವಣೆಗಳ ಫಲಿತಾಂಶವೂ ಸಹ ನವೆಂಬರ್‌ 23ರಂದೇ ಪ್ರಕಟವಾಗಲಿದೆ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ಎರಡೂ ರಾಜ್ಯದಲ್ಲೂ ಈ ಬಾರಿ ಹಲವು ಕಾರಣಕ್ಕೆ ಚುನಾವಣೆ ಕಣ ರಂಗೇರಿದೆ. ಈ ಎರಡೂ ರಾಜ್ಯಗಳಲ್ಲೂ ಎನ್‌ಡಿಎ ಮೈತ್ರಿ ಒಕ್ಕೂಟ ಹಾಗೂ ಕಾಂಗ್ರೆಸ್‌ನ ಇಂಡಿಯಾ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇದೆ. ಈ ಬಾರಿ ಎರಡೂ ರಾಜ್ಯದಲ್ಲೂ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ ಹಾಗೂ ಪ್ರಾದೇಶಿಕ ಪಕ್ಷಗಳ ಪೈಪೋಟಿ ಜೋರಾಗಿಯೇ ಇದೆ. ಯಾಕೆಂದರೆ ಈ ರಾಜ್ಯಗಳಲ್ಲಿ ಸಣ್ಣ ಪಕ್ಷಗಳ ಪಾತ್ರವೇ ಈ ಬಾರಿ ನಿರ್ಣಾಯಕವಾಗಿರಲಿದೆ. ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಸಣ್ಣ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+