ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ದುರಂತ ಸಾವು

Posted By:
Subscribe to Oneindia Kannada

ಶಿಮ್ಲಾ, ಮೇ 29: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮೊಮ್ಮಗ ಅಭಿತೇಜ್ ಸಿಂಗ್ ಸಂಧು ಅವರು ದುರಂತ ಅಂತ್ಯ ಕಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದ ರಾಮಪುರ ಬುಶಹರ್ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 22 ವರ್ಷ ವಯಸ್ಸಿನ ಅಭಿತೇಜ್ ಅವರು ಅಸುನೀಗಿದ್ದಾರೆ. ಅಭಿಜಿತ್ ಅವರು ಮೋಟಾರು ಬೈಕಿನಲ್ಲಿ ಚಲಿಸುವಾಗ ಅಪಘಾತ ಸಂಭವಿಸಿದೆ.

Grand nephew of Bhagat Singh, Abhitej Singh Sandhu dies in accident in Himachal Pradesh

ಅಭಿತೇಜ್ ಅವರು ಪಂಜಾಬಿನಲ್ಲಿ ಪೀಪಲ್ಸ್ ಪಾರ್ಟಿಯ ಯುವ ನೇತಾರರಾಗಿದ್ದು, ರಾಜಕೀಯ ರಂಗ ಪ್ರವೇಶಿಸಿ, ಜಾತಿ ಹಾಗೂ ಮತ ಧರ್ಮಗಳನ್ನು ತೊಡೆದು ಹಾಕಲು ಯೋಜನೆ ಹಾಕಿಕೊಂಡಿದ್ದರು. ದೇಶಪ್ರೇಮವೊಂದೇ ಎಲ್ಲರ ಐಕ್ಯ ಮಂತ್ರವಾಗಬೇಕು ಎಂದು ಸದಾಕಾಲ ಯುವ ಜನತೆಯನ್ನು ಎಚ್ಚರಿಸುತ್ತಿದ್ದರು.

ಭಗತ್ ಸಿಂಗ್ ಅವರ ಸೋದರ ಸಂಬಂಧಿ ಅಭಯ್ ಸಿಂಗ್ ಅವರ ಕಿರಿಯ ಪುತ್ರ ಅಭಿತೇಜ್ ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.


ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಜೇತ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ ಸರ್ಕಾರ ವಹಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Abhitej Singh Sandhu, grand nephew of freedom fighter Bhagat Singh died on Sunday,May 29 in a fatal road accident in Rampur Bushahr area near Shimla in Himachal Pradesh.
Please Wait while comments are loading...