ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ, ಮಸೂದೆ ಮಂಡನೆ

|
Google Oneindia Kannada News

ನವದೆಹಲಿ, ನವೆಂಬರ್ 23: ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ಭರ್ಜರಿಯಾಗಿ ವಹಿವಾಟು ಕಾಣುತ್ತಿರುವ ಡಿಜಿಟಲ್ ಕರೆನ್ಸಿ ಬಳಸಲು ಸರಿಯಾದ ಮಾರ್ಗಸೂಚಿಯಾಗಲಿ, ಕಾನೂನಾಗಲಿ ಇಲ್ಲ, ಇಂಥ ಸಂದರ್ಭದಲ್ಲಿ ಕೊನೆಗೂ ಈ ಕುರಿತಂತೆ ನಿರ್ಣಯ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಬಳಕೆ ಕುರಿತಂತೆ ಮಸೂದೆ ಮಂಡನೆಗೆ ಮುಂದಾಗಿದೆ.

ಎಲ್ಲಾ ಬಗೆಯ ಖಾಸಗಿ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಭಾರತದಲ್ಲಿ ನಿಷೇಧಿಸಲು ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ. ನವೆಂಬರ್ 29, 2021ರಂದು ಅಧಿವೇಶನ ಆರಂಭವಾಗಲಿದ್ದು, 26ಕ್ಕೂ ಅಧಿಕ ಹೊಸ ವಿಧೇಯಕಗಳು ಈ ಬಾರಿ ಮಂಡನೆಯಾಗಲಿದೆ.

ಬಿಜೆಪಿಯ ಜಯಂತ್ ಸಿನ್ಹಾ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕ್ರಿಪ್ಟೋ ವ್ಯವಹಾರ, ಬ್ಲಾಕ್ ಚೇನ್, ಕ್ರಿಪ್ಟೋ ಆಸ್ತಿ, ಕೈಗಾರಿಕಾ ಸಂಸ್ಥೆಗಳು ಸಂಬಂಧಿಸಿದ ಷೇರುದಾರರು ಪಾಲ್ಗೊಂಡಿದ್ದರು. ಹೂಡಿಕೆದಾರರ ಆಕರ್ಷಣೆಗಾಗಿ ದಿಕ್ಕುತಪ್ಪಿಸುವ ಜಾಹೀರಾತು, ಮಾಧ್ಯಮದಲ್ಲಿ ಪ್ರಚಾರ ಹೆಚ್ಚಾಗಿದ್ದು, ಹೂಡಿಕೆಯಾದ ಮೊತ್ತದ ಸುರಕ್ಷತೆ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದರು. ಇದಾದ ಬಳಿಕ ಮೋದಿ ಅವರು ಕೂಡಾ ಒಂದು ಸುತ್ತಿನ ಉನ್ನತ ಮಟ್ಟದ ಸಭೆ ನಡೆಸಿ ಮಸೂದೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Govt to move Bill To Ban Private Cryptocurrencies during Winter Session

2018ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ ಆರ್ ಬಿಐ, ಕ್ರಿಪ್ಟೋಕರೆನ್ಸಿ ಬಳಕೆ, ವ್ಯವಹಾರ, ಪ್ರಚಾರ ಎಲ್ಲಕ್ಕೂ ನಿಷೇಧ ಹೇರಿತ್ತು. ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು. ಹೀಗಾಗಿ, ಸೂಕ್ತ ಮಾರ್ಗಸೂಚಿ ಮೂಲಕ ಆರ್ ಬಿಐ ಮಾನ್ಯತೆ ಪಡೆದ ಡಿಜಿಟಲ್ ಕರೆನ್ಸಿ ಮಾತ್ರ ಬಳಕೆ ಮಾಡಲು ಅನುಮತಿ ನೀಡಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

ಡಿಜಿಟಲ್ ಕರೆನ್ಸಿಯಾಗಿರುವ ಕ್ರಿಪ್ಟೋಕರೆನ್ಸಿಯಲ್ಲಿ ಎನ್ಕ್ರಿಪ್ಷನ್ ತಂತ್ರಜ್ಞಾನ ಬಳಸಿ ಕರೆನ್ಸಿ ಯೂನಿಟ್ ಗಳನ್ನು ಸೃಷ್ಟಿಸಲಾಗುತ್ತದೆ, ಪ್ರತಿ ವ್ಯವಹಾರವೂ ಸುರಕ್ಷಿತವಾಗಿದ್ದು, ಆರ್ ಬಿಐ ಸಂಪರ್ಕವಿಲ್ಲದೆ, ಸ್ವತಂತ್ರವಾಗಿ ವ್ಯವಹರಿಸಬಹುದಾಗಿದೆ.

ನಿಯಂತ್ರಣ ರಹಿತ ಬಿಟ್ ಕಾಯಿನ್ ವ್ಯವಹಾರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವ್ಯವಹರಿಸುತ್ತಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂರು ವರ್ಷಗಳ ಹಿಂದೆ ಅಂದಾಜಿಸಿತ್ತು. ಲಕ್ಷಾಂತರ ಮಂದಿಗೆ ನಿಷೇಧಿತ ಕರೆನ್ಸಿ ವ್ಯವಹಾರದಲ್ಲಿ ತೊಡಗಿದ್ದವರಿಗೆ ನೋಟಿಸ್ ಜಾರಿ ಮಾಡಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Govt to move Bill To Ban Private Cryptocurrencies during Winter Session

"ಅಧಿಕಾರಿಗಳ ಮಾಹಿತಿ ಪ್ರಕಾರ ದೇಶದಲ್ಲಿ ಈ ರೀತಿ ಬಿಟ್ ಕಾಯಿನ್ ವ್ಯವಹಾರ ನಡೆಸಲು 20 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದು ಇವರಲ್ಲಿ 4-5 ಲಕ್ಷ ಜನರು ಮಾತ್ರ ಹೂಡಿಕೆ, ವ್ಯವಹಾರ ನಡೆಸುತ್ತಿದ್ದರು. ತೆರಿಗೆ ವಂಚನೆ ಪ್ರಕರಣ ದಾಖಲಿಸಿ ಇವರಿಗೆ ನೋಟಿಸ್ ನೀಡಲಾಗಿದೆ. ಇದೀಗ ಬಿಟ್ ಕಾಯಿನ್ ಹೂಡಿಕೆ ಮತ್ತು ವ್ಯವಹಾರದ ಬಗ್ಗೆ ಇವರೆಲ್ಲಾ ತೆರಿಗೆ ಕಟ್ಟಬೇಕಾಗಿದೆ," ಎಂದು ಅಧಿಕಾರಿ ಹೇಳಿದ್ದಾರೆ.

ಬೆಂಗಳೂರಿನ ಪ್ರಕರಣ: ದೇಶದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಯಾವುದೇ ನಿಯಂತ್ರಣ ಸಂಸ್ಥೆಗಳಿಲ್ಲ. ಸದ್ಯ ಈಗಿರುವ ಕಾನೂನುಗಳ ಮೇಲೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್‍ಫೋರ್ಟ್ ಮಾಲ್‍ನಲ್ಲಿ ಯುನೊಕಾಯಿನ್ ಕಂಪನಿಯ ಹೆಸರಿನಲ್ಲಿ ಎಟಿಎಂ ಕಿಯಾಸ್ಕೋ ಅಳವಡಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು 2018ರಲ್ಲಿ ಬಂಧಿಸಲಾಗಿತ್ತು.

ನವೆಂಬರ್ 23ರಂದು ಈ ಸಮಯಕ್ಕೆ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಒಟ್ಟಾರೆ 2,608,165,573,108 ಡಾಲರ್ ನಷ್ಟಿದೆ. ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ: ಬಿಟ್ ಕಾಯಿನ್ ಬೆಲೆ: $57,597.55, ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,087,512,904,827 ಒಂದು ಬಿಟ್ ಕಾಯಿನ್ ಬೆಲೆ = 42,86,059.22 (1 USD=74.48 ರುಪಾಯಿ)

Recommended Video

ಪುನೀತ್ ರಾಜ್‍ಕುಮಾರ್ ರನ್ನು ಪಕ್ಷಕ್ಕೆ ಕರೆತರಲು BJP ಮಾಡಿದ ಪ್ರಯತ್ನ ಒಂದಾ ಎರಡಾ? | Oneindia Kannada

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
A Bill to prohibit all private cryptocurrencies in India with certain exceptions is expected to be taken up for final consideration and passing during the Winter Session starting on November 29, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X