• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

PoK ಮೇಲೆ ಹಿಡಿತ, ಕೇಂದ್ರ ಸರ್ಕಾರದ ಮುಂದಿನ ಗುರಿ: ಸ್ವಾಮಿ

|

ನವದೆಹಲಿ, ಆಗಸ್ಟ್ 05: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ಮುಂಬರುವ ದಿನಗಳಲ್ಲಿ ಹೇಗೆ ಹಿಂಪಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕೆಲ ತಿಂಗಳ ಹಿಂದೆಯೇ ಟ್ವೀಟ್ ಮಾಡಿ ತಿಳಿಸಿದ್ದರು. ಇಂದು ಕೇಂದ್ರ ಸರ್ಕಾರವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದು ಸಂವಿಧಾನದ ಪರಿಚ್ಛೇದ 370ನ್ನು ರದ್ದುಗೊಳಿಸಿದೆ. "ಕೇಂದ್ರ ಸರ್ಕಾರದ ಈ ನಡೆ ನಿರೀಕ್ಷಿತವಾಗಿದ್ದು, ಈ ಮೂಲಕ ಐತಿಹಾಸಿಕ ನಿರ್ಧಾರವನ್ನು ಶ್ಲಾಘಿಸುತ್ತೇನೆ" ಎಂದು ಸ್ವಾಮಿ ಹೇಳಿದ್ದಾರೆ.

"ಇಂದಿಗೆ ಆರ್ಟಿಕಲ್​ 370 ಸಾವನ್ನಪ್ಪಿತು" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮುಂದಿನ ನಡೆ ಪಾಕ್ ಆಕ್ರಮಿತ ಕಾಶ್ಮೀರ(PoK)ವನ್ನು ತನ್ನ ವಶಕ್ಕೆ ಪಡೆಯುವುದು ಕೇಂದ್ರ ಸರ್ಕಾರದ ಮುಂದಿನ ಅಜೆಂಡಾ ಆಗಲಿದೆ" ಎಂದು ಸ್ವಾಮಿ ಹೇಳಿದ್ದಾರೆ.

ಹಳೆಯ ಕನಸೊಂದನ್ನು ನನಸು ಮಾಡಿದಿರಿ : ಎಲ್‌.ಕೆ.ಅಡ್ವಾಣಿ ಸಂತಸ ಹಳೆಯ ಕನಸೊಂದನ್ನು ನನಸು ಮಾಡಿದಿರಿ : ಎಲ್‌.ಕೆ.ಅಡ್ವಾಣಿ ಸಂತಸ

"370 ಪರಿಚ್ಛೇದ ರದ್ದು ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ. ರಾಷ್ಟ್ರಪತಿಯವರು ಅಂಕಿತ ನೀಡಿರುವ ನಿರ್ಣಯವನ್ನು ಅಮಿತ್​ ಶಾ ಅವರು ಇಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇಂದು ಪರಿಚ್ಛೇದ 370 ಕೊನೆಯಾಗಿದೆ. ಜತೆಯಲ್ಲಿ 35 ಎ ಕೂಡ ರದ್ದಾಗಿದೆ" ಎಂದು ಸ್ವಾಮಿ ಈ ಮುಂಚೆ ತಿಳಿಸಿದ್ದರು, ಇಂದು ಕೂಡಾ ಟ್ವೀಟ್ ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಅಗತ್ಯವಿಲ್ಲ

"370 ಪರಿಚ್ಛೇದ ರದ್ದು ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ. ರಾಷ್ಟ್ರಪತಿಯವರು ಅಂಕಿತ ನೀಡಿರುವ ನಿರ್ಣಯವನ್ನು ಅಮಿತ್​ ಶಾ ಅವರು ಇಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾರತದ ಭಾಗವನ್ನು ಹಿಂದಕ್ಕೆ ನೀಡುವುದಷ್ಟೇ ಈಗ ಇರುವ ಅವರ ಮುಂದಿನ ಆಯ್ಕೆ" ಎಂದು ಸ್ವಾಮಿ ಹೇಳಿದ್ದಾರೆ.

ಡಾ. ಸ್ವಾಮಿ ಈ ಮುಂಚೆಯೆ ತಿಳಿಸಿದ್ದರು

ಕಾಶ್ಮೀರ ವಿಷಯದಲ್ಲಿ ಮೋದಿ ಸರ್ಕಾರ ಯಾವ ರೀತಿ ನಡೆದುಕೊಳ್ಳಲಿದೆ ಎಂಬುದನ್ನು ಡಾ. ಸ್ವಾಮಿ ಈ ಮುಂಚೆಯೆ ತಿಳಿಸಿದ್ದರು, ಆರ್ಟಿಕಲ್ 370 ಹಿಂಪಡೆಯುವುದು ಹೇಗೆ? ಎಂಬುದರ ಬಗ್ಗೆ ಮಾರ್ಗವನ್ನು ತೋರಿಸಿದ್ದರು. ಆದರಂತೆ ಇಂದು ಸಂವಿಧಾನದ ಪರಿಚ್ಛೇದ 370 ರದ್ದಾಗಿದೆ, ಈ ಮೂಲಕ ಸ್ವಾಮಿ ನೀಡಿದ ಭರವಸೆ ನಿಜವಾಗಿದೆ ಎಂದು ಟ್ವೀಟ್.

ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ? ಕಲಂ 370 ರದ್ದು, ಕಣಿವೆ ರಾಜ್ಯದಲ್ಲಿ ಏನೇನು ಬದಲಾಗಲಿದೆ?

3 ಕುಟುಂಬದ ಹಿಡಿತದಲ್ಲಿದ್ದ ಕಾಶ್ಮೀರ

ಭಾರತದಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 3 ಕುಟುಂಬಗಳ ಹಿಡಿತದಲ್ಲಿದ್ದ ಕಣಿವೆ ರಾಜ್ಯ ಕಾಶ್ಮೀರಕ್ಕೆ ಇಂದು ಮುಕ್ತಿ ಸಿಕ್ಕಿದೆ, ಮಹಾರಾಜ ಹರಿ ಸಿಂಗ್ ಅವರು 1947ರ ಅಕ್ಟೋಬರ್ 27ರಂದು ನೆಹರೂ ಅವರ ಜತೆಗೂಡಿ ಸಹಿ ಹಾಕಿದ ಒಪ್ಪಂದಕ್ಕೂ 1954ರಲ್ಲಿ ಬಂದ ಆರ್ಟಿಕಲ್ 370ಕ್ಕೂ ಸಂಬಂಧವಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಗೆ ಅಮಿತ್ ಶಾ ಉತ್ತರ.

ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಉಲ್ಲೇಖ

Jammu and Kashmir Reorganisation Bill, 2019 ಅಂಗೀಕರಿಸುವ ಮೂಲಕ ಭಾರತ ಐತಿಹಾಸಿಕ ದಿನವನ್ನು ಕಂಡಿದೆ. ಈ ಬಗ್ಗೆ ಸ್ವಾಮಿ ಅವರು ಈ ಮುಂಚೆ ತಿಳಿಸಿದಂತೆ ಆಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಉಲ್ಲೇಖಿಸಿ ಅನೇಕರು ಟ್ವೀಟ್ ಮಾಡಿ, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?

English summary
After scrapping of Article 370, the government's next agenda should be to get back Pakistan occupied Kashmir (PoK), Rajya Sabha nominated member Subramanian Swamy said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X