ನಯನತಾರಾ, ವಿಘ್ನೇಶ್ ಬಾಡಿಗೆ ತಾಯ್ತನ ಪ್ರಕರಣ; ತನಿಖೆಗೆ ಸಮಿತಿ ರಚಿಸಿದ ತಮಿಳುನಾಡು ಸರ್ಕಾರ
ಚೆನ್ನೈ, ಅ. 14: ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕಾನೂನುಬದ್ಧವಾಗಿ ತನಿಖೆ ನಡೆಸಲು ಸರ್ಕಾರವು ಸ್ವಯಂಪ್ರೇರಿತ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಮಿಳುನಾಡಿನ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಪ್ರಕರಣದ ತನಿಖೆಗಾಗಿ ಸರ್ಕಾರ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ತಮಿಳುನಾಡು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ಶುಕ್ರವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ಅವರು ಹೋದ ಆಸ್ಪತ್ರೆ ಸಹ ಗುರುತಿಸಲಾಗಿದೆ. ದಂಪತಿ ಕಾನೂನನ್ನು ಉಲ್ಲಂಘಿಸಿದ್ದಾರೆಯೇ ಎಂದು ತನಿಖೆ ಮಾಡಲು ಇಬ್ಬರು ಸ್ತ್ರೀರೋಗತಜ್ಞರೊಂದಿಗೆ, ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಯ ನೇತೃತ್ವದ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ. ಸಮಿತಿಯು ಒಂದು ವಾರದವರೆಗೆ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸುತ್ತದೆ" ಎಂದಿದ್ದಾರೆ.

ಪ್ರಕರಣವನ್ನು ತನಿಖೆ ಮಾಡುವುದು ಸರ್ಕಾರದ ಕೆಲಸ
ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕ ಮತ್ತು ತನಿಖಾ ಸಮಿತಿಯ ಮುಖ್ಯಸ್ಥರಾಗಿರುವ ಎ ವಿಶ್ವನಾಥನ್, "ಪ್ರಕರಣವನ್ನು ತನಿಖೆ ಮಾಡಲು ತಂಡವನ್ನು ರಚಿಸಲಾಗಿದೆ. ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ. ಘಟನೆ ಸಂಬಂಧಿಸಿ ಯಾವುದೇ ದೂರುದಾರರಿಲ್ಲ" ಎಂದು ಹೇಳಿದ್ದಾರೆ.
"ಇಡೀ ಪ್ರಕರಣದ ನಿಗೂಢತೆಯನ್ನು ತೆರವುಗೊಳಿಸಲು ನಾವು ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ತಮಿಳುನಾಡಿನಲ್ಲಿ ನಾವು ಅನುಸರಿಸುವ ಕಾರ್ಯವಿಧಾನಗಳ ಸದುದ್ದೇಶವನ್ನು ಮುಂದುವರಿಸುವುದಾಗಿದೆ. ಇನ್ನು, ಈ ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ದೂರುದಾರರು ಅಥವಾ ದೂರುಗಳು ಮತ್ತು ಆರೋಪಗಳು ಇರಲಿಲ್ಲ. ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಪ್ರಕಟಿಸಿದ ನಂತರ ಸಂಚಲನ ಮೂಡಿಸಿದೆ. ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ಅದರ ಬಗ್ಗೆ ತನಿಖೆ ನಡೆಸುವುದು ಸರ್ಕಾರವು ಮಾಡಬಹುದಾದ ಉತ್ತಮ ಕೆಲಸ" ಎಂದಿದ್ದಾರೆ.

ಕಾನೂನು ಉಲ್ಲಂಘನೆಯಾಗಿದ್ದರೇ ನಟ, ನಟಿಯ ವಿಚಾರಣೆ!
ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸುವುದು ಅವರ ಮುಂದಿರುವ ಪ್ರಾಥಮಿಕ ಕೆಲಸ ಎಂದು ವಿಶ್ವನಾಥನ್ ಹೇಳಿದ್ದಾರೆ.
"ನಿರ್ದಿಷ್ಟ ಪ್ರಕರಣದಲ್ಲಿ ಅನುಸರಿಸಲಾದ ಅಧಿಕೃತ ದಾಖಲೆಗಳು ಮತ್ತು ಕಾರ್ಯವಿಧಾನಗಳನ್ನು ಪರಿಶೀಲಿಸಿದ ನಂತರವೇ, ನಾವು ಮುಂದಿನ ಹಂತದ ಬಗ್ಗೆ ಯೋಚಿಸಬೇಕಾಗಿದೆ" ಎಂದು ಮಾಹಿತಿ ನೀಡಿದ್ದಾರೆ. ತನಿಖಾ ಸಮಿತಿಯು ನಟಿ ನಯನತಾರಾ ಮತ್ತು ನಿರ್ದೇಶಕ ಶಿವನ್ ಅವರನ್ನು ಸಂದರ್ಶಿಸುತ್ತದೆಯೇ ಎಂದು ಕೇಳಿದಾಗ, ಕಾನೂನು ಉಲ್ಲಂಘನೆಯಾಗಿದ್ದರೇ ಮಾತ್ರ ಅಂತಹ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಕಾನೂನು"ಉಲ್ಲಂಘನೆಯ ಯಾವುದೇ ಲಕ್ಷಣಗಳಿಲ್ಲ. ಹಾಗಾಗಿ ನಾನು ಈ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದೂ ಸೇರಿಸಿದ್ದಾರೆ.
ಇನ್ನು, ಪ್ರಾಥಮಿಕ ಮಾಹಿತಿಯ ಪ್ರಕಾರ ತನಿಖೆ ನಡೆಸುತ್ತಿರುವ ಆಸ್ಪತ್ರೆಯು ಚೆನ್ನೈನಲ್ಲಿದೆ.

ಪರಹಿತಚಿಂತನೆಯ ಬಾಡಿಗೆ ತಾಯ್ತನಕ್ಕೆ ಅನುಮತಿಯಿದೆ
ಸಂಸತ್ತು ಡಿಸೆಂಬರ್ 2021 ರಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆಯನ್ನು ಅನುಮೋದಿಸಿದ ನಂತರ, ಇದು ಜನವರಿ 25, 2022 ರಂದು ದೇಶದಲ್ಲಿ ಜಾರಿಗೆ ಬಂದಿದೆ. ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ಕಾನೂನುಬಾಹಿರಗೊಳಿಸಲಾಗಿದೆ. '
'ಪರಹಿತ ಚಿಂತನೆಯ ಬಾಡಿಗೆ ತಾಯ್ತನ'ವನ್ನು ಮಾತ್ರ ಈಗ ದೇಶದಲ್ಲಿ ಅನುಮತಿಸಲಾಗಿದೆ, ಇದರಲ್ಲಿ ಹೆರಿಗೆಯ ವೇಳೆ ತಾಯಿಯು ವೈದ್ಯಕೀಯ ವೆಚ್ಚಗಳನ್ನು ಹೊರತುಪಡಿಸಿ ಯಾವುದೇ ಆರ್ಥಿಕ ಸಹಾಯವನ್ನು ಪಡೆಯುವಂತಿಲ್ಲ.
|
ಕುತೂಹಲದಲ್ಲೇ ಶುಭಾಶಯ ಕೋರಿದ್ದ ಅಭಿಮಾನಿಗಳು!
ಅಕ್ಟೋಬರ್ 9 ರಂದು, ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ "ನಯನ್ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ" ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದರು. ನಾವು ಅವಳಿ ಗಂಡು ಮಕ್ಕಳನ್ನು ಪಡೆದಿದ್ದೇವೆ. ನಮ್ಮ ಎಲ್ಲಾ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದಗಳು ಎಲ್ಲಾ ಉತ್ತಮ ಕೆಲಸಗಳು ಸೇರಿ, ನಮಗೆ ಎರಡು ಆಶೀರ್ವದಿಸಿದ ಕಂದಗಳ ರೂಪದಲ್ಲಿ ಒಟ್ಟಿಗೆ ಬಂದಿವೆ. ನಮ್ಮ ಉಯಿರ್ ಮತ್ತು ಉಲಗಂ ಇಬ್ಬರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು" ಎಂದಿದ್ದರು.
ಮಕ್ಕಳ ಬಗ್ಗೆ ದಂಪತಿ ಘೋಷಣೆ ಮಾಡಿದಂದಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳು ಮತ್ತು ಅವರ ಹೆಸರುಗಳ ಬಗ್ಗೆ ಊಹಾಪೋಹಗಳಿಂದ ತುಂಬಿವೆ. ಗಳು ಹರಿದಾಡುತ್ತಿವೆ. ಹಲವರು ಇಷ್ಟು ಬೇಗ ಮಕ್ಕಳು ಹೇಗಾದವು ಎಂಬ ಬಗ್ಗೆ ಆಶ್ರ್ಚು ವ್ಯಕ್ತಪಡಿಸುತ್ತಾ ಶುಭಾಶಯಗಳನ್ನು ಕೋರಿದ್ದಾರೆ.
ಸೆಲೆಬ್ರಿಟಿ ದಂಪತಿ ಈ ವರ್ಷ ಜೂನ್ 9 ರಂದು ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಇದು ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಎಂಬ ಸಾಕ್ಷ್ಯಚಿತ್ರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ 2015 ರಲ್ಲಿ ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ ತಮಿಳು ರೋಮ್ಯಾಂಟಿಕ್ ಡ್ರಾಮಾ ನಾನುಮ್ ರೌಡಿ ದಾನ್ ಚಿತ್ರದ ವೇಳೆ ಭೇಟಿಯಾಗಿದ್ದರು.












Click it and Unblock the Notifications