ನೌಕರರಿಗೆ ಹಳೆ ಪಿಂಚಣಿ ಯೋಜನೆ ಆಯ್ಕೆಗೆ ಆಗಸ್ಟವರೆಗೆ ಅವಕಾಶ: ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. 2003 ರ ಡಿಸೆಂಬರ್ 22ಗೂ ಮುನ್ನ ಅರ್ಜಿ ಸಲ್ಲಿಸಿದ್ದ ಉದ್ಯೋಗಗಳಿಗೆ ಈ ಅವಕಾಶ ಮುಂದಿನ ಆಗಸ್ಟ್‌ವರೆಗೆ ಇರಲಿದೆ.
ಬೆಂಗಳೂರು, ಮಾರ್ಚ್ 03: ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. 2003 ರ ಡಿಸೆಂಬರ್ 22ಗೂ ಮುನ್ನ ಅರ್ಜಿ ಸಲ್ಲಿಸಿದ್ದ ಉದ್ಯೋಗಗಳಿಗೆ ಕೇಂದ್ರ ಸರ್ಕಾರ ಒಂದು ಬಾರಿ ಹಳೆ ಪಿಂಚಣಿ ಆಯ್ಕೆಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರವು ತನ್ನಲ್ಲಿ ಯಾರು ಉದ್ಯೋಗ ಬಯಸುತ್ತಾರೋ ಅವರಿಗೆ ಹಳೆಯ ಪಿಂಚಣಿ ಯೋಜನೆ (OPS) ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಕೇಂದ್ರವು 2003ರ ಡಿಸೆಂಬರ್ ನಲ್ಲಿ ಜಾಹೀರಾತು ನೋಡಿ 2004 ರ ಜನವರಿ ಒಳಗಾಗಿ ಸೇವೆಗೆ ಸೇರಿದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಆಯ್ಕೆಯನ್ನು ನೀಡಿದೆ. ಸದ್ಯ OPS ಆಯ್ಕೆ ಮಾಡಲು ಉದ್ಯೋಗಿಗಳಿಗೆ ಆಗಸ್ಟ್ 31 ರವರೆಗೆ ಸಮಯಾವಕಾಶ ಇದೆ ಎನ್ನಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸುವುದರಿಂದ ಸರ್ಕಾರದ ಮೇಲೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತದ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಛತ್ತೀಸ್‌ಗಢ, ರಾಜಸ್ಥಾನ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಂತಹ ಹಲವಾರು ವಿರೋಧ ಪಕ್ಷದ ನೇತೃತ್ವದ ಸರ್ಕಾರಗಳು ತಾವು OPS ಅನ್ನು ಮರುಸ್ಥಾಪಿಸುವುದಾಗಿ ಈಗಾಗಲೇ ಘೋಷಣೆ ಮಾಡಿವೆ.
ಇದೇ ವರ್ಷ ಜನವರಿ 31 ರವರೆಗೆ 23,65,693 ಕೇಂದ್ರ ಸರ್ಕಾರಿ ನೌಕರರು ಮತ್ತು 60,32,768 ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ಅಡಿಯಲ್ಲಿ ದಾಖಲಾಗಿದ್ದಾರೆ. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಎನ್‌ಪಿಎಸ್ ಮರು ಜಾರಿಗೆ ತಂದಿವೆ.

ಹಳೆ ಪಿಂಚಣಿ ಯೋಜನೆ ಜಾರಿ ಬಗ್ಗೆ ಕುರಿತು ಸರ್ಕಾರವು ಅನೇಕ ಪ್ರಕರಣಗಳನ್ನು ಎದುರಿಸುತ್ತಿದೆ. ಅವುಗಳ ಪರಿಹಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶದ ನ್ಯಾಯಾಲಯಗಳಲ್ಲಿ ನೂರಾರು ವ್ಯಾಜ್ಯಗಳು ಇದ್ದವು. ಸರ್ಕಾರ ಅದರಲ್ಲಿ ಒಂದೇ ಒಂದು ಪ್ರಕರಣ ಸಹ ಗೆದಿಲ್ಲ. ನ್ಯಾಯಾಲಯದ ಆದೇಶಗಳ ಮೂಲಕ ವೈಯಕ್ತಿಕ ಅಧಿಕಾರಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಅರ್ಹ ಅಧಿಕಾರಿಗಳಿಗೆ ಅನುಕೂಲಕ್ಕೆ ತಕ್ಕಂತೆ ನಿರ್ದೇಶನ ನೀಡಲಾಗುವುದು ಎಂದು ಅವರು ತಿಳಿಸಿದರು.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DPPW) ಹಣಕಾಸು ಮತ್ತು ಕಾನೂನು ಸಚಿವಾಲಯಗಳು ಮತ್ತು ವೆಚ್ಚ ಮತ್ತು ಸಿಬ್ಬಂದಿ ಇಲಾಖೆಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಈ ವೇಳೆ ಉದ್ಯೋಗಿಗಳಿಗೆ OPS ಮರು ಜಾರಿ ಮಾಡಬೇಕೆಂಬ ನಿಲವಿಗೆ ಎಲ್ಲರು ಒಪ್ಪಿದ್ದಾರೆ ಎಂದರು.
ಸದ್ಯ ನ್ಯಾಯಾಲಯದ ತೀರ್ಪು ಮತ್ತು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗಳ ಆದೇಶ ಉಲ್ಲೇಖಿಸಿ ಸರ್ಕಾರಿ ನೌಕರರಿಂದ ಪ್ರಾತಿನಿಧ್ಯ ಸ್ವೀಕರಿಸಲಾಗಿದೆ. ಇದ ನೌಕರರಿಗೆ OPS ಗೆ ಮೊರೆ ಹೋಗಲು ಅನುವು ಮಾಡಿಕೊಟ್ಟಿದೆ. ಅದೇ ರೀತಿ ಉದ್ಯೋಗಿಗಳಿಗೆ ಓಪಿಎಸ್ ಮೊರೆ ಹೋಗುವ ಪ್ರಸ್ತಾವವನ್ನು ಇಟ್ಟ ಡಿಪಿಪಿಡಬ್ಲ್ಯು ಪ್ರಸ್ತಾವನೆಗೆ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿ ಹೇಳಿದರು.
ಉದ್ಯೋಗ ನಿವೃತ್ತಿ ಬಳಿಕ ಆತನಿಗೆ ಆರ್ಥಿಕ ಬಲ
ಈ ಹಳೆ ಪಿಂಚಣಿ ಯೋಜನೆ (OPS) ಅಥವಾ ಡಿಫೈನ್ಡ್ ಪೆನ್ಶನ್ ಬೆನಿಫಿಟ್ ಯೋಜನೆ ಉದ್ಯೋಗಿ ನಿವೃತ್ತಿಯ ಬಳಿಕ ಜೀವಿತಾವಧಿಯ ಆದಾಯ ಖಚಿತ ಪಡಿಸುತ್ತದೆ. ಆರ್ಥಿಕವಾಗಿ ವ್ಯಕ್ತಿಯನ್ನು ಬಲಪಡಿಸುತ್ತದೆ. ಇದು ಕೊನೆಯದಾಗಿ ನೌಕರ ಪಡೆದ ಸಂಬಳದ ಶೇಕಡಾ 50ರಷ್ಟಕ್ಕೆ ಸಮನಾಗಿರುತ್ತದೆ. ಪಿಂಚಣಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. 2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು OPS ಅನ್ನು ನಿಲ್ಲಿಸಲು ನಿರ್ಧರಿ ನಂತರ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಯಿತು.
2004 ರಿಂದ ಕೇಂದ್ರ ಸರ್ಕಾರಿ ಸೇವೆಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಸೇರುವ ಎಲ್ಲಾ ಹೊಸ ನೇಮಕಾತಿಗಳಿಗೆ ಅನ್ವಯವಾಗುವಂತೆ ಈ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ಬಂದಿತು.
ಶುಕ್ರವಾರ (ಮಾರ್ಚ್ 3)ರಂದು ಹೊರಡಿಸಿದ ಡಿಪಿಪಿಡಬ್ಲ್ಯೂ ಆದೇಶ ನೋಡುವುದಾದರೆ, ಎಲ್ಲ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ನೌಕರರು ಅಂದರೆ ಹೊಸ ಪಿಂಚಣಿ ವ್ಯವಸ್ಥೆ (NPS) ವ್ಯಾಪ್ತಿಯಲ್ಲಿರುವವರು ನಿಯಮಗಳು ಅಡಿ ಒಂದು-ಬಾರಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಮುಂದಿನ ಆಗಸ್ಟ ವರೆಗೆ ಸಮಯವಿದೆ ಎಂದು ಇಂದಿನ ಅನುಮೋದನೆಯಲ್ಲಿ ತಿಳಿಸಲಾಗಿದೆ. ಈ ನೀರ್ಧಾರವನ್ನು ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟವು ಸ್ವಾಗತಿಸಿದೆ.












Click it and Unblock the Notifications