Governor: ದಕ್ಷಿಣ ಭಾರತದಲ್ಲಿ ರಾಜ್ಯಪಾಲರು & ಸರ್ಕಾರಗಳ ನಡುವೆ ತಿಕ್ಕಾಟ ಬಲು ಜೋರು!
ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ಭೀಕರ ಕದನ ಆರಂಭವಾಗಿದೆ. ಅದರಲ್ಲೂ ಈ ತಿಕ್ಕಾಟ ದಕ್ಷಿಣ ಭಾರತದಲ್ಲಿ ಹೆಚ್ಚಾಗಿದ್ದು, ಇಂದು ಕರ್ನಾಟಕ ವಿಧಾನಸಭೆಯಲ್ಲಿ ಸಂಭವಿಸಿದ ಘಟನೆ ಸೇರಿದಂತೆ ಕೇರಳ ಮತ್ತು ತಮಿಳುನಾಡು ನೆಲದಲ್ಲೂ ಇದೇ ರೀತಿ ತಿಕ್ಕಾಟ ನಡೆದಿತ್ತು. ಅದರಲ್ಲೂ ಈಗ ಕರ್ನಾಟಕ ವಿಧಾನಸಭೆಯಲ್ಲಿ ನಡೆದಿರುವ ಘಟನೆ ವಿರೋಧ ಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳ ನಾಯಕರನ್ನು ಕೆರಳಿಸಿದೆ, ಹಾಗಾದರೆ ತಮಿಳುನಾಡು ಮತ್ತು ಕೇರಳದಲ್ಲಿ ಏನಾಗಿತ್ತು? ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾಗಿರುವ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅಧಿಕಾರ ಈಗ ವಿರೋಧ ಪಕ್ಷಗಳ ಕೈಯಲ್ಲಿ ಇದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ. ಇದೇ ವಿಚಾರ ದೊಡ್ಡ ಕಿಚ್ಚು ಹೊತ್ತಿಸುತ್ತಿದ್ದು, ಇಂದು ಕೂಡ ಕರ್ನಾಟಕದಲ್ಲಿ ಹೀಗೆಯೇ ಆಗಿದೆ. ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಭಾಷಣದ 11 ಪ್ಯಾರಾಗ್ರಾಫ್ ಕೈಬಿಡದಿದ್ದರೆ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತು ಆಡಲ್ಲ ಎಂದು ನಿರಾಕರಿಸಿದರು. ಹಾಗೇ ಇಲ್ಲಿ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ಟೀಕೆಗಳಿವೆ, ಹೀಗಿದ್ದಾಗ ರಾಜ್ಯಪಾಲರು ಭಾಷಣ ನಿರಾಕರಿಸಿದ್ದಾರೆ. ಆದರೆ ಇದು ಕರ್ನಾಟಕದ ಕಥೆ ಮಾತ್ರವಲ್ಲ, ತಮಿಳುನಾಡು & ಕೇರಳದಲ್ಲೂ ಇದೇ ತಿಕ್ಕಾಟ ಜೋರಾಗಿದೆ.

ರಾಜಭವನ ಮತ್ತು ವಿಧಾನಸೌಧ ನಡುವೆ ತಿಕ್ಕಾಟ
ದಕ್ಷಿಣ ಭಾರತದಲ್ಲಿ ಚುನಾಯಿತ ಸರ್ಕಾರಗಳು ಮತ್ತು ರಾಜಭವನದ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ. ಕರ್ನಾಟಕ, ಕೇರಳ & ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಅಧಿವೇಶನದಲ್ಲಿ ತಮ್ಮ ವರ್ತನೆಯ ಮೂಲಕ ರಾಜಕೀಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ವಿಬಿ-ಜಿ RAM (ಜಿ) ಕಾಯ್ದೆ ಟೀಕಿಸುವ ಎರಡು ವಾಖ್ಯ ಮಾತ್ರ ತೆಗೆದುಹಾಕಲು ಒಪ್ಪಿಕೊಂಡಿತು. ಆದರೆ ಇದಕ್ಕೆ ಒಪ್ಪದೆ, ಭಾಷಣದಲ್ಲಿ ವಿವಾದಾತ್ಮಕ ಅಂಶ ಇದೆ ಎಂದು ರಾಜ್ಯಪಾಲರು ಭಾಷಣವನ್ನೇ ಮಾಡಲಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಾನೂನು ಹೋರಾಟಕ್ಕೆ ಇದೀಗ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ನವದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈಗ ರಾಜಭವನ ಮತ್ತು ವಿಧಾನಸೌಧದ ನಡುವೆ ಹೊಸ ತಿಕ್ಕಾಟ ಶುರುವಾಗಿದೆ. ಹೀಗೆ ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣ ನಿರಾಕರಿಸಿದರೆ, ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ರಾಜ್ಯಪಾಲರು ಮಾಡಿದ್ದೇನು? ಕೇರಳ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ಹಾಗೂ ರಾಜ್ಯಪಾಲರ ನಡುವೆಯೂ ತಿಕ್ಕಾಟ ನಡೆದಿತ್ತು. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸುಮಾರು ಎರಡು ಗಂಟೆಗಳ ಕಾಲ ನೀತಿ ಭಾಷಣವನ್ನು ಓದಿದ್ದರು. ಆದರೆ ಈ ಭಾಷಣದಲ್ಲಿ ಕೆಲವು ಪ್ಯಾರಾಗಳಲ್ಲಿ ರಾಜ್ಯಪಾಲರು ಬದಲಾವಣೆಗಳನ್ನು ಮಾಡಿದ್ದಾರೆ ಎಂಬ ವಿಚಾರವು ದೊಡ್ಡ ಗಲಾಟೆಗೆ ಕಾರಣವಾಗಿತ್ತು.
ಸಭೆಯಿಂದ ಹೊರನಡೆದ ರಾಜ್ಯಪಾಲರು
ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರವಲ್ಲದೆ, ನೆರೆಯ ತಮಿಳುನಾಡು ರಾಜ್ಯದಲ್ಲಿ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಜಗಳ ಆಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಸಾಂಪ್ರದಾಯಿಕ ಭಾಷಣವನ್ನು ನಿರಾರಿಸಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿ ಸದನದಿಂದಲೇ ಹೊರಗೆ ನಡೆದಿದ್ದರು. ರಾಜ್ಯಪಾಲರ ಭಾಷಣದೊಂದಿಗೆ ವರ್ಷದ ಮೊದಲ ವಿಧಾನಸಭಾ ಅಧಿವೇಶನ ಪ್ರಾರಂಭಿಸುವ ಅಭ್ಯಾಸವನ್ನು ತೆಗೆದುಹಾಕಲು ಡಿಎಂಕೆ ಪಕ್ಷವು ಸಾಂವಿಧಾನಿಕ ತಿದ್ದುಪಡಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಟಾಲಿನ್ ಘೋಷಿಸಿದ್ದರು. ಇದೆಲ್ಲವನ್ನೂ ನೋಡುತ್ತಿದ್ದರೆ ಸದ್ಯಕ್ಕೆ ಈ ತಿಕ್ಕಾಟ ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications