8th Pay Commission: ಸರ್ಕಾರಿ ನೌಕರರ ಸಂಘ-ಸರ್ಕಾರದ ಜತೆ ಮಹತ್ವದ ಸಭೆ
ನವದೆಹಲಿ, ನವೆಂಬರ್ 02: 8ನೇ ವೇತನ ಆಯೋಗ ಜಾರಿ ಸಂಬಂಧ ಕೇಂದ್ರ ಸರ್ಕಾರಿ ನೌಕರರಿಗೆ ಈ ನವೆಂಬರ್ 1ರ ದಿನ ನೀರ್ಣಾಯಕ ಎಂದು ಭಾವಿಸಲಾಗಿತ್ತು. ನೌಕರರ ಬೇಡಿಕೆ ನಿಗದಿತ ಸಮಯದಲ್ಲಿ ಈಡೇರದೇ ನಿರಾಶೆಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಿ ನೌಕರರು ಮುಂದಿನ ತಿಂಗಳು ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ತುಟ್ಟಿಭತ್ಯೆ (ತುಟ್ಟಿಭತ್ಯೆ) ಘೋಷಣೆ ನಂತರವು ಕೇಂದ್ರಕ್ಕೆ ವಿಶೇಷ ಮನವಿ ಮಾಡಲಿದ್ದಾರೆ.
ಏಳನೇ ವೇತನ ಆಯೋಗದಡಿ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರಗಳನ್ನು ಪಡೆದುಕೊಳ್ಳುತ್ತಿರುವ ಭಾರತ ಸರ್ಕಾರ ಸಹಸ್ರಾರು ಉದ್ಯೋಗಿಗಳ ಇತ್ತೀಚಿನ ಬೇಡಿಕೆಯೊಂದು ಈಡೇರುತ್ತಿಲ್ಲ. ಆ ಬೇಡಿಕೆ ನವೆಂಬರ್ ತಿಂಗಳಲ್ಲಿ ಈಡೇರಬಹುದೆಂದು ಅವರು ಕಾದು ಕುಳಿತಿದ್ದರು. ಆದರೆ ಕೇಂದ್ರ ಸರ್ಕಾರ ಯಾವೊಂದು ಘೋಷಣೆ ಮಾಡಲಿಲ್ಲ.

ಆದ್ದರಿಂದ ಕೇಂದ್ರ ಸರ್ಕಾರಿ ನೌಕರರ ಸಂಘ, ಯೂನಿಯನ್‌ಗಳು ಇನ್ನೊಂದು ತಿಂಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಲು ತೀರ್ಮಾನಿಸಿವೆ. ಸರ್ಕಾರದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ನೌಕರರು ತಮ್ಮ ಬೇಡಿಕೆ, ಶೀಫಾರಸುಗಳನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ವೇತನ ಹೆಚ್ಚಳದ ಬೇಡಿಕೆ ಇಟ್ಟಿರುವ ನೌಕರರು ಅದಕ್ಕಾಗಿ 8ನೇ ವೇತನ ಆಯೋಗ ಜಾರಿ ಮಾಡುವಂತೆ ಕೇಳುತ್ತಲೇ ಬಂದಿದ್ದಾರೆ. ಅಂದರೆ ಮುಂಗಾಡವಾಗಿ ನಿಗದಿತ ಸಮಯದಲ್ಲಿ ಹೊಸ ವೇತನ ಆಯೋಗದ ಬಗ್ಗೆ ಯಾವೊಂದು ನಿರ್ಧಾರಗಳು ಪ್ರಕಟಗೊಳ್ಳದಿರುವುದು ನೌಕರರಿಗೆ ನಿರಾಸೆ ಉಂಟು ಮಾಡಿದೆ. ಇದರ ನಿರ್ಧಾರ ಅಂತಿಮ ಮಾಡಲು ಸಭೆ ನಡೆಸಲು ತೀರ್ಮಾನಿಸಿದ್ದಾರೆ.

8ನೇ ವೇತನ ಆಯೋಗ ಜಾರಿಯಾದರೆ, ಮೂಲ ವೇತನ, ಇತರ ಭತ್ಯೆಗಳು ಗಣನೀಯವಾಗಿ ಏರಿಕೆ ಆಗಲಿವೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದೇ ಸಭೆಯ ಚರ್ಚೆಯ ಕೇಂದ್ರ ಬಿಂದು ಈ ಎಂಟನೇ ವೇತನ ಆಯೋಗವೇ ಆಗಿರಲಿದೆ.
ಈ ಕುರಿತು ಕೇಂದ್ರ ಸರ್ಕಾರಿ ನೌಕರರಿ ಸಂಘ, ಯೂನಿಯನ್‌ಗಳು ಒಂದಷ್ಟು ಭಾರಿ ಬೇಡಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರೂ ಮೌನ ವಹಿಸಿವೆ. ಎಂಟನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಸೇವಾ ಷರತ್ತುಗಳನ್ನು ಚರ್ಚಿಸಲು ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲು ಈಗಾಗಲೇ ಸಂಬಂಧಿಸಿದ ನೌಕರ ಮುಖ್ಯಸ್ಥರು ಒಪ್ಪಿದ್ದಾರೆ ಎಂದು ವರದಿ ಆಗಿದೆ.
ನೌಕರರ ಕುಂದದ ಆಶಾಭಾವನೆ
ಈ ಹಿಂದೆಯೇ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷ ಮತ್ತು ಜೆಸಿಎಂ ನ್ಯಾಷನಲ್ ಕೌನ್ಸಿಲ್ ಕೇಂದ್ರಕ್ಕೆ ಒಂದಷ್ಟು ಮನವಿ ಮಾಡಿಕೊಂಡಿತ್ತು. ಇದೀಗ ಸಭೆ ನಡೆಯುತ್ತಿದೆ. ಮಹತ್ವದ ಚರ್ಚೆಗಳು ನಡೆಯಲಿವೆ. ಈ ಸಭೆಯಲ್ಲಿ ಇನ್ನಷ್ಟು ಸ್ಪಷ್ಟತೆ ಸಿಗಲಿದೆ. ನಮ್ಮ ಬೇಡಿಕೆಗಳು ಈಡೇರುವ ವಿಶ್ವಾಸ ಇದೆ. ಹೀಗಾಗಿಯೇ ನೌಕರರ ಆಶಾಭಾವನೆ ಇನ್ನೂ ಹೆಚ್ಚಾಗುತ್ತಿದೆ ಎಂದು ಫೆಡರೇಶನ್ ಅಧ್ಯಕ್ಷ ಮತ್ತು ಜೆಸಿಎಂ ನ್ಯಾಷನಲ್ ಕೌನ್ಸಿಲ್ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ವೇತನ ಆಯೋಗ ಜಾರಿ, ಶಿಫಾರಸುಗಳ ಪರಿಗಣನೆ ಸೇರಿದಂತೆ ವೇತನಕ್ಕೆ ಸಂಬಂಧಿಸಿದ ಒಂದಷ್ಟು ವಿಷಯಗಳನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
7ನೇ ವೇತನ ಆಯೋಗ ಜಾರಿ ಮಾಡಿ ಒಂದು ದಶಕ ಆಗಿದೆ. ಅದರ ಅವಧಿ ಪೂರ್ಣಗೊಳ್ಳುತ್ತಾ ಬಂದರೂ ಇನ್ನೂವರೆಗೂ ಹೊಸ ವೇತನ ಆಯೋಗದ ಜಾರಿ ಯಾವ ಅಪ್ಡೇಟ್ ಸಿಕ್ಕಿಲ್ಲ. ಹೀಗಾಗಿಯೇ ಸರ್ಕಾರಕ್ಕೆ ಜ್ಞಾಪಕ ಪತ್ರ ಸಲ್ಲಿಸಿದ್ದೇವೆ. ಆದರೆ ಯಾವ ಪ್ರತಿಕ್ರಿಯೆ ನೀಡಲಾಗಿಲ್ಲ.
2014 ರಲ್ಲಿ ಪ್ರಸ್ತಾಪಿಸಿ, ಶಿಫಾರಸು ಪರಿಗಣಿಸಿ 2016 ರಲ್ಲಿ 7ನೇ ವೇತನ ಆಯೋಗ ಜಾರಿಗೆ ತರಲಾಯಿತು. ಇದೀಗ ವೇತನ ಆಯೋಗಗಳನ್ನು ಜಾರಿಗೆ ತರಲಾಯಿತು. ಇದೀಗ ಎಂಟನೇ ವೇತನ ಆಯೋಗಕ್ಕೆ ಕೇವಲ ಒಂದು ವರ್ಷವಷ್ಟೇ ಸಮಯಾವಕಾಶ ಇದೆ. ಹೀಗಿದ್ದರೂ ಅದರ ಬಗ್ಗೆ ಎಲ್ಲಿಯೂ ಚರ್ಚೆಗಳಾಗಿಲ್ಲ. ನಮ್ಮ ಮನವಿಗೂ ಸ್ಪಂದನೆ ಬಂದಿಲ್ಲ. ಹತ್ತು ವರ್ಷದ ಬಳಿಕ ನಿಯಮದಂತೆ ಹೊಸ ವೇತನ ಆಯೋಗ ಜಾರಿಯಾಗಬೇಕು ಎಂದು ಮಿಶ್ರಾ ತಿಳಿಸಿದರು.
ಸಂಬಳ ಎಷ್ಟು ಹೆಚ್ಚಾಗುತ್ತದೆ?
7ನೇ ವೇತನ ಆಯೋಗದಡಿ ಸರ್ಕಾರಿ ನೌಕರರಿಗೆ ವಿವಿಧ ಅಂಶಗಳನ್ನು ಪರಿಗಣಿಸಿ ಶೇಕಡಾ 23% ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಇದೀಗ ಸರ್ಕಾರಿ ನೌಕರರ ಸಂಘಗಳು ಹೊಸ ವೇತನ ಆಯೋಗದಡಿ ಶೇಕಡಾ 30-35ರಷ್ಟು ವೇತನ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿವೆ ಎನ್ನಲಾಗಿದೆ.
ಇದಲ್ಲದೇ ಎಂಟನೇ ವೇತನ ಆಯೋಗವು ಜಾರಿ ಆದ ಬಳಿಕ ಮೂಲ ವೇತನ ಸೇರಿದಂತೆ ಇನ್ನಷ್ಟು ಭತ್ಯೆಗಳು ಹೆಚ್ಚಾಗಲಿವೆ ಎಂಬ ಲೆಕ್ಕಾಚಾರವನ್ನು ಈಗಾಗಲೇ ನೌಕರರು ಹಾಕಿಕೊಂಡಿದ್ದಾರೆ. ಈ ಸಂಬಂಧ ಸದನದಲ್ಲಿ ಪ್ರಶ್ನಿಸಿದಾಗಲೂ ಸಹಿತ ಕೇಂದ್ರ ಸಚಿವರು ಸದ್ಯಕ್ಕೆ ಯಾವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಎಂಟನೇ ವೇತನ ಆಯೋಗ ಜಾರಿ ಬಗ್ಗೆ ಮಾತನಾಡಿದ್ದರು. ಇದು ನೌಕರರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿತ್ತು. ಇದೀಗ ಸಭೆ ಮೂಲಕ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications