ಆಮ್ಲಜನಕ ಕೈಗಾರಿಕಾ ಘಟಕ ಬಳಿ 10 ಸಾವಿರ ಹಾಸಿಗೆಗಳಿರುವ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ: ಕೇಂದ್ರ
ನವದೆಹಲಿ, ಮೇ 2: ಆಮ್ಲಜನಕ ಕೈಗಾರಿಕಾ ಘಟಕದ ಬಳಿ 10 ಸಾವಿರ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲು ಮುಂದಾಗಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಆಮ್ಲಜನಕದ ಬಳಕೆಯ ಕುರಿತ ಸಭೆಯ ನಂತರ, ಉಕ್ಕಿನ ಸ್ಥಾವರಗಳು, ಪೆಟ್ರೋಕೆಮಿಕಲ್ ಘಟಕಗಳೊಂದಿಗೆ ಸಂಸ್ಕರಣಾಗಾರಗಳು, ಸಮೃದ್ಧ ದಹನ ಪ್ರಕ್ರಿಯೆಗಳನ್ನು ಬಳಸುವ ಕೈಗಾರಿಕೆಗಳು ಮತ್ತು ವಿದ್ಯುತ್ ಸ್ಥಾವರಗಳು ಆಮ್ಲಜನಕವನ್ನು ಉತ್ಪಾದಿಸುವ ಆಮ್ಲಜನಕ ಘಟಕಗಳನ್ನು ಹೊಂದಿವೆ ಎಂದು ಸರ್ಕಾರ ಗಮನಿಸಿದೆ. ಈ ಆಮ್ಲಜನಕವನ್ನು ವೈದ್ಯಕೀಯ ಬಳಕೆಗಾಗಿ ಬದಲಿಸಬಹುದು ಎಂದು ಮಾಹಿತಿ ನೀಡಲಾಗಿದೆ.
ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಸಿದ ಅನೇಕ ಸಭೆಗಳ ನಂತರ ಅಸ್ತಿತ್ವದಲ್ಲಿರುವ ಸಾರಜನಕ ಘಟಕಗಳನ್ನು ಆಮ್ಲಜನಕವನ್ನು ಉತ್ಪಾದಿಸಲು ಪರಿವರ್ತಿಸುವ ಸಾಧ್ಯತೆಗಳನ್ನು ಮತ್ತು ಸಾರಜನಕ ಘಟಕಗಳು ಇರುವಂತಹ ಹಲವಾರು ಸಂಭಾವ್ಯ ಕೈಗಾರಿಕೆಗಳನ್ನು ಆಮ್ಲಜನಕದ ಉತ್ಪಾದನೆಗಾಗಿ ಗುರುತಿಸಲಾಗಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಶುದ್ಧ ಆಮ್ಲಜನಕವನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳನ್ನು ಗುರುತಿಸುವುದು, ನಗರ ದಟ್ಟಣೆಯ ಪ್ರದೇಶಗಳು ಮತ್ತು ಬೇಡಿಕೆ ಇರುವ ಸ್ಥಳಗಳ ಸಮೀಪವಿರುವುದನ್ನು ಶಾರ್ಟ್ ಲಿಸ್ಟ್ ಮಾಡುವುದು ಮತ್ತು ಆ ಮೂಲಕ ಅಂತಹಾ ಘಟಕಗಳ ಬಳಿ ಆಮ್ಲಜನಕಯುಕ್ತ ಬೆಡ್ ಗಳೊಂದಿಗೆ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಕಾರ್ಯಯೋಜನೆಯಾಗಿದೆ.
ಅಂತಹ ಐದು ಆಸ್ಪತ್ರೆಗಳಿಗೆ ಪ್ರಾಯೋಗಿಕ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಮತ್ತು ಇದು ಉತ್ತಮ ಪ್ರಗತಿ ಕಾಣುತ್ತಿದೆ.ಇದನ್ನು ಪಿಎಸ್ ಯುಗಳು ಅಥವಾ ಸ್ಥಾವರವನ್ನು ನಿರ್ವಹಿಸುವ ಖಾಸಗಿ ಕೈಗಾರಿಕೆಗಳ ಮೂಲಕ ಮತ್ತು ಕೇಂದ್ರ ಮತ್ತು ರಾಜ್ಯಗಳ ಸಮನ್ವಯದಿಂದ ಸಾಧಿಸಲಾಗುತ್ತಿದೆ. "ಅಂತಹ ಘಟಕಗಳ ಬಳಿ ತಾತ್ಕಾಲಿಕ ಆಸ್ಪತ್ರೆಗಳನ್ನು ಮಾಡುವ ಮೂಲಕ ಅಲ್ಪಾವಧಿಯಲ್ಲಿಯೇ ಸುಮಾರು 10,000 ಆಮ್ಲಜನಕಯುಕ್ತ ಬೆಡ್ ಗಳು ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications